ensamachara.com

Bhavatharini – ಇಳಯರಾಜ ಅವರ ಪುತ್ರಿ ಭವತಾರಿಣಿ ವಿಧಿವಶ

ilaiyaraaja-daughter-bhavatharini-passed-away

Bhavatharini – ಇಳಯರಾಜ ಅವರ ಪುತ್ರಿ ಭವತಾರಿಣಿ ವಿಧಿವಶ [Ilaiyaraaja daughter Bhavatharini passed away]

ಖ್ಯಾತ ಸಂಗೀತ ನಿರ್ದೇಶಕರಾದ ಇಳಯರಾಜ ಅವರ ಪುತ್ರಿ ಭವತಾರಿಣಿ (ವಯಸ್ಸು 47) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಶ್ರೀಲಂಕಾದಲ್ಲಿ ಕ್ಯಾನ್ಸರ್‌ಗಾಗಿ ಆಯುರ್ವೇದ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದ ಭವತಾರಿಣಿ ಇಂದು ಸಂಜೆ 5.30ಕ್ಕೆ ವಿಧಿವಶರಾಗಿದ್ದಾರೆ ಎಂದು ವರದಿಯಾಗಿದೆ.

ಭವತಾರಿಣಿ July 23, ೧೯೭೬ ರಂದು ಚೆನ್ನೈನಲ್ಲಿ ಜನಿಸಿದರು. ಭವತಾರಿಣಿ ಚೆನ್ನೈನ ರೋಸರಿ ಮೆಟ್ರಿಕ್ ಶಾಲೆ, ನಂತರ ಚೆನ್ನೈನ ಪೀಟರ್ಸ್ ರಸ್ತೆಯ ಆದರ್ಶ ವಿದ್ಯಾಲಯದಲ್ಲಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು.

ಅವರು 1984 ರಲ್ಲಿ ಬಿಡುಗಡೆಯಾದ ಮಲಯಾಳಂ ಚಲನಚಿತ್ರ ‘ಮೈ ಡಿಯರ್ ಕುಟ್ಟಿ ಛಾಥಾನ್’ ನಲ್ಲಿ ‘ತಿಥಿತೇ ತಾಲಂ ‘ ಹಾಡಿನ ಮೂಲಕ ಹಿನ್ನೆಲೆ ಗಾಯಕರಾಗಿ ಪಾದಾರ್ಪಣೆ ಮಾಡಿದರು.

1995 ರಲ್ಲಿ ಬಿಡುಗಡೆಯಾದ ‘ರಾಸಯ್ಯಾ’ ತಮಿಳು ಚಿತ್ರದ ‘ಮಸ್ತಾನ… ಮಸ್ತಾನ… ‘ ಹಾಡಿನ ಮೂಲಕ ಭವತಾರಿಣಿ ಪ್ರಖ್ಯಾತರಾದರು. ಪ್ರಭುದೇವ ಮತ್ತು ರೋಜಾ ನಟಿಸಿದ್ದ ಈ ಚಿತ್ರಕ್ಕೆ ಸಂಗೀತ ನೀಡಿದ ಇಳಯರಾಜ, ತಮ್ಮ ಮಗಳನ್ನು ಈ ಚಿತ್ರದ ಮೂಲಕ ಗಾಯಕಿಯಾಗಿ ಬೆಳಕಿಗೆ ಬರುವಂತೆ ಮಾಡಿದರು.

ನಂತರ ತಮ್ಮ ಭವತಾರಿಣಿ ಸಹೋದರರಾದ ಕಾರ್ತಿಕ್ ರಾಜಾ, ಯುವನ್ ಶಂಕರ್ ರಾಜಾ, ಅಷ್ಟೇ ಅಲ್ಲದೆ ಇತರೆ ಸಂಗೀತ ನಿರ್ದೇಶಕರಾದ ದೇವಾ, ಸಿರ್ಪೀ, ಹ್ಯಾರಿಸ್ ಜಯರಾಜ್ ಮುಂತಾದವರ ಹಾಡುಗಳನ್ನು ಹಾಡಿದರು.

2000ನೇ ಇಸವಿಯಲ್ಲಿ ಬಿಡುಗಡೆಯಾದ ‘ಭಾರತಿ’ ತಮಿಳು ಚಿತ್ರದಲ್ಲಿನ ‘ಮಯಿಲ್ ಪೋಲ ಪೊನ್ನು ಒನ್ನು’ ಹಾಡಿಗೆ ಭವತಾರಿಣಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ರಾಷ್ಟ್ರೀಯ ಲಭಿಸಿತ್ತು.

ಇದಲ್ಲದೆ, ಅವರು 2002 ರಲ್ಲಿ ರೇವತಿ ನಿರ್ದೇಶನದಲ್ಲಿ ಬಿಡುಗಡೆಯಾದ ‘ಮಿತ್ರ ಮೈ ಫ್ರೆಂಡ್’ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ನಂತರ, ಅವರು ‘ಫಿರ್ ಮಿಲೇಂಗೆ’ (ಹಿಂದಿ), ‘ಅಮೃತಂ’, ‘ಇಲಕ್ಕನಂ’ ಮತ್ತು ‘ಮಾಯಾನದಿ’ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಭವತಾರಿಣಿ ಅವರು ಕಳೆದ 5 ತಿಂಗಳಿಂದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಆಯುರ್ವೇದ ಚಿಕಿತ್ಸೆಗಾಗಿ ಶ್ರೀಲಂಕಾಕ್ಕೆ ತೆರಳಿ ಅಲ್ಲಿ ಚಿಕಿತ್ಸೆ ಪಡೆದರು.

ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಂಜೆ 5.20ಕ್ಕೆ ಶ್ರೀಲಂಕಾದಲ್ಲಿ ಕೊನೆಯುಸಿರೆಳೆದಿದ್ದಾರೆ. ಶುಕ್ರವಾರ ಸಂಜೆ ಅವರ ಪಾರ್ಥಿವ ಶರೀರವನ್ನು ಚೆನ್ನೈಗೆ ತರಲಾಗುವುದು ಎಂದು ವರದಿಯಾಗಿದೆ.

Exit mobile version