Breaking News

ಮತ್ತೊಮ್ಮೆ ಜೊತೆಯಾಗಲಿರುವ ಫಹಾದ್ ಫಾಸಿಲ್ ಮತ್ತು ವಡಿವೇಲು

ಮತ್ತೊಮ್ಮೆ ಜೊತೆಯಾಗಲಿರುವ ಫಹಾದ್ ಫಾಸಿಲ್ ಮತ್ತು ವಡಿವೇಲು

ಮತ್ತೊಮ್ಮೆ ಜೊತೆಯಾಗಲಿರುವ ಫಹಾದ್ ಫಾಸಿಲ್ ಮತ್ತು ವಡಿವೇಲು | Fahadh Faasil and Vadivelu Reunites for an Upcoming Tamil Film Maareesan.

ಕೆಲವು ದಿನಗಳ ಹಿಂದೆ, ನಟ ಫಹದ್ ಫಾಸಿಲ್ [Fahadh Faasil] ಮತ್ತು ಹಾಸ್ಯನಟ ವಡಿವೇಲು [Vadivelu] ಅವರ ಡೈನಾಮಿಕ್ ಜೋಡಿಯು ಹೊಸ ಯೋಜನೆಗೆ ಜೊತೆಯಾಗಲಿದ್ದಾರೆ ಎಂಬ ಸುದ್ದಿ ತಮಿಳು ಚಿತ್ರರಂಗದಲ್ಲಿ ಹರಿದಾಡುತಿತ್ತು.

ಆರ್‌.ಬಿ. ಚೌಧರಿ ಅವರ ‘ಸೂಪರ್ ಗುಡ್ ಫಿಲ್ಮ್ಸ್’ ನಿರ್ಮಾಣ ಸಂಸ್ಥೆ ತಮ್ಮ 98 ನೇ ಚಿತ್ರದ ಕುರಿತು ನೀಡಿದ ಮಾಹಿತಿಯಲ್ಲಿ ತಮ್ಮ ಮುಂದಿನ ಚಿತ್ರ ‘ಮಾರೀಸನ್’ [Maareesan] ಎಂದು, ಇದರಲ್ಲಿ ಫಹದ್ ಫಾಸಿಲ್ ಮತ್ತು ವಡಿವೇಲು ಮತ್ತೊಮ್ಮೆ ಜೊತೆಯಾಗಿ ನಟಿಸಲಿದ್ದಾರೆ ಎಂಬ ಸ್ವಾರಸ್ಯಕರ ಸುದ್ದಿಯನ್ನು ಬಹಿರಂಗಪಡಿಸಿತು.

ಮತ್ತೊಮ್ಮೆ ಜೊತೆಯಾಗಲಿರುವ ಫಹಾದ್ ಫಾಸಿಲ್ ಮತ್ತು ವಡಿವೇಲು

ಈ ಚಿತ್ರದ ಕುರಿತಾದ ಸ್ಟ್ರೈಕಿಂಗ್ ಪೋಸ್ಟರ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ಪ್ರಕಟಿಸಿದ ಸೂಪರ್ ಗುಡ್ ಫಿಲಂಸ್ [Super Good Films], “The hunt begins today” ಎಂಬ ಟ್ಯಾಗ್ ಲೈನ್ ನೊಂದಿಗೆ ‘ಮಾರೀಸನ್’ ಚಿತ್ರೀಕರಣವು ಪರಮಭವಾಗಿದೆ ಎಂದು ಘೋಷಿಸಿತು. ಈ ಚಿತ್ರ ಒಂದು ಕಾಮಿಡಿ-ಡ್ರಾಮಾ ಹಾಗು ರೋಡ್ ಮೂವಿ ಇರಬಹುದು ಎಂದು ಹೇಳಲಾಗುತ್ತಿದೆ.

ಮಲಯಾಳಂನ ಅನುಭವಿ ನಿರ್ದೇಶಕ ‘ಸುಧೀಶ್ ಶಂಕರ್’ ನಿರ್ದೇಶನದ ‘ಮಾರೀಸನ್’ ಚಿತ್ರದಲ್ಲಿ ಫಹಾದ್ ಫಾಸಿಲ್ ಮತ್ತು ವಡಿವೇಲು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇವರಿಬ್ಬರು ಈ ಹಿಂದೆ 2023 ರಲ್ಲಿ ಮಾರಿ ಸೆಲ್ವರಾಜ್ ನಿರ್ದೇಶನದ ‘ಮಾಮನ್ನನ್’ ನಲ್ಲಿ ಅಭಿನಯಿಸಿದ್ದರು.

‘ಮಾರೀಸನ್’ ಚಿತ್ರದಲ್ಲಿ ಛಾಯಾಗ್ರಾಹಕ ಕಲೈಸೆಲ್ವನ್ ಶಿವಾಜಿ, ಸಂಕಲನಕಾರ ಶ್ರೀಜಿತ್ ಸಾರಂಗ್, ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜಾ ಅವರನ್ನು ಒಳಗೊಂಡ ತಾತ್ರಿಕ ತಂಡ ಕಾರ್ಯ ನಿರ್ವಹಿಸಲಿದೆ.

ವಿಶೇಷವಾಗಿ ‘ಮಾಮಣ್ಣನ’ ಯಶಸ್ಸಿನ ನಂತರ ವಡಿವೇಲು ಮತ್ತು ಫಹದ್ ಫಾಸಿಲ್ ನಡುವಿನ ಈ ಎರಡನೇ ಸಹಯೋಗವನ್ನು ಅಭಿಮಾನಿಗಳು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ. ಇಬ್ಬರು ನಟರ ನಡುವಿನ ಕೆಮಿಸ್ಟ್ರಿ ‘ಮಾರೀಸನ್’ಗೆ ವಿಶಿಷ್ಟತೆ
ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ನಿರ್ಮಾಣವು ಮುಂದುವರೆದಂತೆ, ಚಿತ್ರದ ಕಥಾಹಂದರ, ಹೆಚ್ಚುವರಿ ಪಾತ್ರವರ್ಗ ಮತ್ತು ಬಿಡುಗಡೆ ದಿನಾಂಕಗಳ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸ ಬಹುದು.

Leave a Reply

Your email address will not be published. Required fields are marked *