Breaking News

Poonam Pandey Death - ಕ್ಯಾನ್ಸರ್ ನಿಂದ ನಿಧನರಾದ ನಟಿ ಪೂನಂ ಪಾಂಡೆ

Poonam Pandey: ನಕಲಿ ಸಾವಿನ ನಾಟಕ – 100 ಕೋಟಿ ಮಾನನಷ್ಟ ಪ್ರಕರಣ

ನಟಿ ಪೂನಂ ಪಾಂಡೆ ನಕಲಿ ಸಾವಿನ ನಾಟಕ – 100 ಕೋಟಿ ಮಾನನಷ್ಟ ಪ್ರಕರಣ | 100 Crore case against Poonam Pandey

ಬಿಗ್ ಬಾಸ್ ಸೆಲೆಬ್ರಿಟಿ ಹಾಗೂ ಖ್ಯಾತ ಮಾಡೆಲ್ ನಟಿ ಪೂನಂ ಪಾಂಡೆ ಫೆಬ್ರವರಿ ೨ ಸರ್ವಿಕಲ್ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿ, ಎಲ್ಲರು ಆಶ್ಚರ್ಯ ಹಾಗು ಆಘಾತಕ್ಕೆ ಒಳಗಾಗಿ, ನಟಿಯ ಸಾವಿಗೆ ಸಂತಾಪ ವ್ಯಕ್ತಪಡಿಸಿದರು.

ಪೂನಂ ಪಾಂಡೆ ಮರಣದ ಬಗ್ಗೆ ಅವರ ಮ್ಯಾನೇಜರ್ ಕೂಡ ಖಚಿತಪಡಿಸಿದ್ದರು. ಆದರೆ ಮರುದಿನವೇ ಪೂನಂ ಪಾಂಡೆ ತಾನು ಸತ್ತಿಲ್ಲ, ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಈ ರೀತಿ ವರ್ತಿಸಿದ್ದೇನೆ ಎಂದು ವಿಡಿಯೋ ಬಿಡುಗಡೆ ಮಾಡಿದ್ದರು. ಇದಕ್ಕೆ ವಿವಿಧ ವಲಯಗಳಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು.

ಇದೀಗ ಕಾನ್ಪುರದಲ್ಲಿ ಪೂನಂ ಪಾಂಡೆ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ. ಫೈಜಾನ್ ಅನ್ಸಾರಿ ಅವರು ಪೂನಂ ಪಾಂಡೆ ಮತ್ತು ಅವರ ಪತಿ ವಿರುದ್ಧ ಕಾನ್ಪುರ ಪೊಲೀಸ್ ಆಯುಕ್ತರಿಗೆ 100 ಕೋಟಿ ರೂ.ಗೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಇಬ್ಬರ ವಿರುದ್ಧವೂ ಪ್ರಥಮ ಮಾಹಿತಿ ವರದಿ ದಾಖಲಾಗಿದೆ. ಇಬ್ಬರಿಗೂ ಬಂಧನ ವಾರಂಟ್ ಜಾರಿ ಮಾಡಿ ಅವರನ್ನು ಕಾನ್ಪುರ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಅನ್ಸಾರಿ ತಮ್ಮ ದೂರಿನಲ್ಲಿ ಕೋರಿದ್ದಾರೆ. ಪ್ರಥಮ ಮಾಹಿತಿ ವರದಿಯಲ್ಲಿ ಪೂನಂ ಪಾಂಡೆ ಮತ್ತು ಆಕೆಯ ಪತಿ ಸ್ಯಾಮ್ ಬಾಂಬೆ [Sam Bombay] ನಕಲಿ ಸಾವಿಗೆ ಸಂಚು ರೂಪಿಸಿದ್ದರು. ಪೂನಂ ತನ್ನದೇ ಪ್ರಚಾರಕ್ಕಾಗಿ ಇದೇ ಆಟವನ್ನು ನಡೆಸಿದ್ದಾಳೆ. ಪೂನಂ ಪಾಂಡೆ ಕೋಟಿಗಟ್ಟಲೆ ಜನರು ಮತ್ತು ಒಟ್ಟಾರೆ ಬಾಲಿವುಡ್‌ನ ನಂಬಿಕೆಯೊಂದಿಗೆ ಆಟವಾಡುತ್ತಿದ್ದಾರೆ ಎಂದು ಹೇಳಲಾಗಿದೆ.

ಇದು ಪೂನಂ ಪಾಂಡೆಗೆ ಹೊಸ ಸಮಸ್ಯೆ ತಂದೊಡ್ಡಿದೆ. ಪೂನಂ ಪಾಂಡೆ [Poonam Pandey] ಅವರು ಅಣಕು ಸಾವಿನ ನಾಟಕ ಮಾಡಿದ ನಂತರ ಗರ್ಭಕಂಠದ ಕ್ಯಾನ್ಸರ್ ಜಾಗೃತಿಗೆ ರಾಯಭಾರಿಯಾಗಲು ಬಯಸಿದ್ದರು ಎಂದು ತಿಳಿಸಿದ್ದರು. ಆದರೆ ಅವರನ್ನು ಜಾಹೀರಾತು ರಾಯಭಾರಿಯಾಗಿ ನೇಮಿಸುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ಸರ್ಕಾರ ಘೋಷಿಸಿರುವುದು ಗಮನಾರ್ಹ.

Leave a Reply

Your email address will not be published. Required fields are marked *