Breaking News

1000 years old Mahavir statue found in Tamil Nadu

ತಮಿಳುನಾಡಿನಲ್ಲಿ 1000 ವರ್ಷಗಳಷ್ಟು ಹಳೆಯದಾದ ಮಹಾವೀರನ ಪ್ರತಿಮೆ ಪತ್ತೆ

ತಮಿಳುನಾಡಿನಲ್ಲಿ 1000 ವರ್ಷಗಳಷ್ಟು ಹಳೆಯದಾದ ಮಹಾವೀರನ ಪ್ರತಿಮೆ ಪತ್ತೆ | 1000 years old Mahavir statue found in Tamil Nadu

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ತಮಿಳುನಾಡಿನ, ವಿರುದುನಗರ ಜಿಲ್ಲೆಯ ತಿರುಚುಲಿ ಬಳಿಯ ಮಾನವರಾಯನೆಂದಲ್‌ನಲ್ಲಿ [Manavarayanendal] ತೀರ್ಥಂಕರ ಮಹಾವೀರನ [Tirthankara Mahavira] 1,000 ವರ್ಷಗಳಷ್ಟು ಹಳೆಯದಾದ ಕಲ್ಲಿನ ಪ್ರತಿಮೆ ಪತ್ತೆಯಾಗಿದೆ.

ರಾಮನಾಥಪುರಂ ಪುರಾತತ್ವ ಸಂಶೋಧನಾ ಪ್ರತಿಷ್ಠಾನದ [Ramanathapuram Archaeological Research Foundation] ಅಧ್ಯಕ್ಷ ವಿ. ರಾಜಗುರು ಮಾತನಾಡಿ, ಅರುಪ್ಪುಕ್ಕೊಟ್ಟೈನ ಎಸ್‌ಬಿಕೆ ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಸ್. ರಾಜಪಾಂಡಿ ಮತ್ತು ತಮಿಳುನಾಡು ರಾಜ್ಯ ಪುರಾತತ್ವ ಇಲಾಖೆಯ ವಿದ್ಯಾರ್ಥಿ ಎಂ. ಶರತ್ ರಾಮ್ ಅವರು ಕ್ಷೇತ್ರಕ್ಕೆ ಭೇಟಿ ನೀಡಿದಾಗ ಈ ಪ್ರತಿಮೆ ಪತ್ತೆಯಾಗಿದೆ.

 

ವಿರುದುನಗರ ಜಿಲ್ಲೆಯ ಕೋವಿಲಂಕುಲಂ, ತೊಪ್ಪಲಕರೈ, ಕುರಾಂಡಿ, ಇರುಂಜಿರೈ, ಪುಲ್ಲೂರ್, ಪಲವನತ್ತಂ, ಪಂದಳಕುಡಿ, ಪರೈಕುಲಂ, ತಿರುಚುಲಿ, ಪುಲಿಯೂರನ್, ಅವಿಯೂರ್, ಇರುಪ್ಪೈಕುಡಿ, ಕುಲಶೇಖರನಲ್ಲೂರು, ಸೀತೂರ್ ಸೇರಿದಂತೆ ಹಲವು ಭಾಗಗಳಲ್ಲಿ ಜೈನ ಧರ್ಮದ ಕುರುಹುಗಳು ಪತ್ತೆಯಾಗಿವೆ ಎಂದು ಅವರು ಹೇಳಿದರು.

ಮಾನವರಾಯನೆಂದಳ್ ನಲ್ಲಿ ದೊರೆತ , ಮಣ್ಣಲ್ಲಿ ಅರ್ಧ ಹುದುಗಿದ್ದ ಶಿಲ್ಪವನ್ನು ಸೂಕ್ಷ್ಮವಾಗಿ ಕೆತ್ತಲಾಗಿದ್ದು ಗ್ರಾನೈಟ್ ನಿಂದ ಮಾಡಲಾಗಿದೆ. ಪ್ರತಿಮೆಯ ತಲೆಯ ಮೇಲೆ ಮೂರು ಛತ್ರಿಗಳಿವೆ, ಅದರ ಮೇಲೆ ಬಳ್ಳಿಗಳನ್ನು ಕೆತ್ತಲಾಗಿದೆ. ಇದು ಯಕ್ಷರ ಶಿಲ್ಪಗಳಿಂದ ಸುತ್ತುವರಿದಿದೆ.

ಶಿಲ್ಪಕಲೆಯ ತಂತ್ರವನ್ನು ಆಧರಿಸಿ, ಪ್ರತಿಮೆಯು 11 ನೇ ಶತಮಾನಕ್ಕೆ ಸೇರಿರಬಹುದು ಎಂದು ಊಹಿಸಲಾಗಿದೆ. ಕಬ್ಬಿಣದ ಯುಗಕ್ಕೆ ಸೇರಿದ ಅನೇಕ ತೀರ್ಥಂಕರರ ಶಿಲ್ಪಗಳು ಮತ್ತು ಕಪ್ಪು ಮತ್ತು ಕೆಂಪು ಮಡಿಕೆಗಳು ಸಹ ಈ ಪ್ರದೇಶದಲ್ಲಿ ಕಂಡುಬಂದಿರುವುದು, ಈ ಪ್ರದೇಶದಲ್ಲಿ ಕಬ್ಬಿಣದ ಯುಗದಿಂದ ಜನವಸತಿ ಇತ್ತು ಎಂಬುದಕ್ಕೆ ಸೂಚನೆಯಾಗಿರಬಹುದು ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *