Breaking News

ಕಿಸಾನ್‌ ಕ್ರೆಡಿಟ್‌ ಕಾರ್ಡ್ ಯೋಜನೆಯಡಿ ರೈತರಿಗೆ ಪಶುಸಂಗೋಪನೆಗೆ ಸಾಲ - Kisan Credit Card Scheme Loan For Karnataka Farmers

ಕಿಸಾನ್‌ ಕ್ರೆಡಿಟ್‌ ಕಾರ್ಡ್ ಯೋಜನೆಯಡಿ ರೈತರಿಗೆ ಪಶುಸಂಗೋಪನೆಗೆ ಸಾಲ – Kisan Credit Card Scheme Loan For Karnataka Farmers

ಕಿಸಾನ್‌ ಕ್ರೆಡಿಟ್‌ ಕಾರ್ಡ್ ಯೋಜನೆಯಡಿ ರೈತರಿಗೆ ಪಶುಸಂಗೋಪನೆಗೆ ಸಾಲ – Kisan Credit Card Scheme Loan For Karnataka Farmers

ಕರ್ನಾಟಕ ಸರ್ಕಾರದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಪ್ರಕಟಣೆಯಂತೆ ಕಿಸಾನ್‌ ಕ್ರೆಡಿಟ್‌ಕಾರ್ಡ್ ಯೋಜನೆಯಡಿ ಅರ್ಹ ರೈತರಿಗೆ ಪಶುಸಂಗೋಪನೆ ಚಟುವಟಿಕೆಗಳಿಗೆ ಆರ್ಥಿಕ ನೆರವು ಒದಗಿಸಲು ಸಾಲ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಕೇಂದ್ರ ಸರ್ಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ವಯ [Kisan Credit Card Scheme – KCC] ಈ ಕೆಳಗಿನ ಪಶುಸಂಗೋಪನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ನಿರ್ವಹಣಾ ವೆಚ್ಚ ಭರಿಸಲು ಭಾರತ ಸರ್ಕಾರದ, ಹಣಕಾಸು ಸೇವೆಗಳ ಇಲಾಖೆಯು ರಾಷ್ಟ್ರೀಕೃತ ಬ್ಯಾಂಕ್ / ಸಹಾರ ಸಂಸ್ಥೆಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ.

ಕಿಸಾನ್‌ ಕ್ರೆಡಿಟ್‌ ಕಾರ್ಡ್ ಯೋಜನೆಯಡಿ ರೈತರಿಗೆ ಪಶುಸಂಗೋಪನೆಗೆ ಸಾಲ ಪೂರ್ಣ ಮಾಹಿತಿ [Kisan Credit Card Scheme Loan For Karnataka Farmers Complete Details Here..]

ಕ್ರಸಂ ಘಟಕ ಘಟಕದ ವಿವರ ಸೌಲಭ್ಯಗಳ ವಿವರ
1 ಹೈನುಗಾರಿಕೆ ಮಿಶ್ರತಳಿ ದನಗಳ ನಿರ್ವಹಣೆ (1+1) ಪ್ರತಿ ಹಸುವಿಗೆ ಗರಿಷ್ಠ ರೂ. 18,000/- ರಂತೆ ಒಟ್ಟು ಎರಡು ಹಸುಗಳಿಗೆ ರೂ. 36,000/- ಸಾಲ ಸೌಲಭ್ಯ
ಸುಧಾರಿತ ಎಮ್ಮೆಗಳ ನಿರ್ವಹಣೆ (1+1) ಪ್ರತಿ ಎಮ್ಮೆಗೆ ಗರಿಷ್ಠ ರೂ. 21,000/-ರಂತೆ ಒಟ್ಟು ಎರಡು ಎಮ್ಮೆಗಳಿಗೆ da. 42,000/- ಸಾಲ ಸೌಲಭ್ಯ
2 ಕುರಿ ಸಾಕಾಣಿಕೆ ಕುರಿಗಳ ನಿರ್ವಹಣೆ (10+1) – 8 ತಿಂಗಳ ಸಾಕಾಣಿಕೆ ಅವಧಿಗೆ ಕಟ್ಟಿ ಮೇಯಿಸುವ ಕುರಿಗಳಿಗೆ ರೂ. 29350/- ರಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಕುರಿಗಳಿಗೆ ರೂ 14,200/- ಸಾಲ ಸೌಲಭ್ಯ
ಕುರಿಗಳ ನಿರ್ವಹಣೆ (20+1) – 8 ತಿಂಗಳ ಸಾಕಾಣಿಕೆ ಅವಧಿಗೆ ಕಟ್ಟಿ ಮೇಯಿಸುವ ಕುರಿಗಳಿಗೆ ರೂ. 57,200/- ರಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಅರಿಗಳಿಗೆ ರೂ 28,200/- ಸಾಲ ಸೌಲಭ್ಯ
ಕುರಿ ಮರಿಗಳ ಕೊಬ್ಬಿಸುವುದು (10) ರೂ. 13,120 ರಂತೆ ಸಾಲ ಸೌಲಭ್ಯ
ಕುರಿ ಮರಿಗಳ ಕೊಬ್ಬಿಸುವುದು (20) ರೂ. 26,200 ರಂತೆ ಸಾಲ ಸೌಲಭ್ಯ
3 ಮೇಕೆ ಸಾಕಾಣಿಕೆ ಮೇಕೆಗಳ ನಿರ್ವಹಣೆ (10+1) – 8 ತಿಂಗಳ ಸಾಕಾಣಿಕೆ ಅವಧಿಗೆ ಕಟ್ಟಿ ಮೇಯಿಸುವ ಮೇಕೆಗಳಿಗೆ ರೂ. 29,950/- ರಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಮೇಕೆಗಳಿಗೆ ರೂ 14,700/- ಸಾಲ ಸೌಲಭ್ಯ
ಮೇಕೆಗಳ ನಿರ್ವಹಣೆ (20+1) – 8 ತಿಂಗಳ ಸಾಕಾಣಿಕೆ ಅವಧಿಗೆ ಕಟ್ಟಿ ಮೇಯಿಸುವ ಮೇಕೆಗಳಿಗೆ ರೂ. 57,200/- ರಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಮೇಕೆಗಳಿಗೆ ರೂ 28,200/- ಸಾಲ ಸೌಲಭ್ಯ
4 ಹಂದಿ ನಿರ್ವಹಣೆ 10 ಕೊಬ್ಬಿಸುವ ಹಂದಿಗಳ ಸಾಕಾಣಿಕೆ ರೂ. 60,000/- ರಂತೆ ಸಾಲ ಸೌಲಭ್ಯ
5 ಕೋಳಿ ಸಾಕಾಣಿಕೆ ಅ. ಮಾಂಸದ ಕೋಳಿ ಸಾಕಾಣಿಕೆ ಒಂದು ಕೋಳಿಗೆ ರೂ. 80 ರಂತೆ 1000 ಕೋಳಿಗಳಿಗೆ ಗರಿಷ್ಠ ರೂ. 80,000/- ವರೆಗೆ ಸಾಲ ಸೌಲಭ್ಯ
ಆ. ಮೊಟ್ಟೆ ಕೋಳಿ ಸಾಕಾಣಿಕೆ ಒಂದು ಕೋಳಿಗೆ ರೂ. 180 ರಂತೆ 1000 ಕೋಳಿಗಳಿಗೆ ಗರಿಷ್ಠ ರೂ. 1,80,000/-ವರೆಗೆ ಸಾಲ ಸೌಲಭ್ಯ
6 ಮೊಲ ಸಾಕಾಣಿಕೆ ಮೊಲ ಸಾಕಾಣಿಕೆ (50+10) ಮೊಲ ಸಾಕಾಣಿಕೆಗೆ ಗರಿಷ್ಠ ರೂ. 50,000/-ವರೆಗೆ ಸಾಲ ಸೌಲಭ್ಯ

ಈ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಬಡ್ಡಿ ರಿಯಾಯಿತಿ ಸೌಲಭ್ಯವು ರೂ.3 ಲಕ್ಷಗಳವರೆಗೆ ದೊರೆಯಬಹುದಾಗಿದ್ದು, ಪ್ರತಿ ರೈತರಿಗೆ ರೂ.1.60 ಲಕ್ಷ ಸಾಲ ಸೌಲಭ್ಯವನ್ನು ಯಾವುದೇ ಭದ್ರತೆಯಿಲ್ಲದೆ ಪಡೆಯುವ ಅವಕಾಶ ವಿರುತ್ತದೆ.

ಕಿಸಾನ್ ಕ್ರೆಡಿಟ್ ಕಾರ್ಡ್ನಿಂದ ಪಡೆಯುವ ಸಾಲಕ್ಕೆ ಶೇ.2 ರಷ್ಟು ಬಡ್ಡಿ ಸಹಾಯಧನ ನೀಡುತ್ತಿದ್ದು, ಈ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದಲ್ಲಿ ಹೆಚ್ಚುವರಿಯಾಗಿ ವಾರ್ಷಿಕ ಶೇ.3 ರಷ್ಟು ಬಡ್ಡಿ ಸಹಾಯಧನದ ಸೌಲಭ್ಯವನ್ನು ಸಹಾ ಪಡೆಯಬಹುದಾಗಿದೆ.

ರೈತರು ಅವರ ಕಾರ್ಯವ್ಯಾಪ್ತಿಯ ಬ್ಯಾಂಕುಗಳಿಂದ ಪಡೆಯುವ ಸಾಲದ ಬಡ್ಡಿದರಕ್ಕೆ ಒಟ್ಟಾರೆ ಶೇ.5 ರಷ್ಟು ಬಡ್ಡಿ ರಿಯಾಯಿತಿಯನ್ನು ಭಾರತ ಸರ್ಕಾರ ದಿಂದ ಪಡೆಯ ಬಹುದಾಗಿರುತ್ತದೆ.

ಸಹಾಯವಾಣಿ ಸಂಖ್ಯೆ: 8277 100 200 ರವರನ್ನು ಸಂಪರ್ಕಿಸುವುದು ಅಥವಾ www.ahvs.karnataka.gov.in ವೆಬ್ಸೈಟ್ ಗೆ ಭೇಟಿ ಕೊಡಿ.

ಕಿಸಾನ್‌ ಕ್ರೆಡಿಟ್‌ ಕಾರ್ಡ್ ಯೋಜನೆಯಡಿ ರೈತರಿಗೆ ಪಶುಸಂಗೋಪನೆಗೆ ಸಾಲ – Kisan Credit Card Scheme Loan For Karnataka Farmers ಈ ಲೇಖನ ನಿಮಗೆ ಸಹಾಯವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ಯೋಜನೆಗಳ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸ್‌ಆಪ್‌ ಗ್ರೂಪ್‌ಗೆ ಅಥವಾ ಟೆಲಿಗ್ರಾಮ್‌ ಗ್ರೂಪ್‌ಗೆ ಸೇರಬಹುದು. ಧನ್ಯವಾದಗಳು.

Leave a Reply

Your email address will not be published. Required fields are marked *