Breaking News

ಟ್ಯಾಲಿರಾಂಡ್ ಜೀವನ ಚರಿತ್ರೆ | Talleyrand History in Kannada

ಟ್ಯಾಲಿರಾಂಡ್ ಜೀವನ ಚರಿತ್ರೆ | Talleyrand History in Kannada

ಟ್ಯಾಲಿರಾಂಡ್ ಜೀವನ ಚರಿತ್ರೆ | Talleyrand History in Kannada:

ಇವನ ಪೂರ್ಣ ಹೆಸರು ಚಾರ್ಲ್ಸ್ ಮಾರೀಸ್ ಡಿ ಟ್ಯಾಲಿರಾಂಡ್ [Charles Maurice De Talleyrand], ಫ್ರಾನ್ಸಿನ ಇತಿಹಾಸದಲ್ಲಿ ಇವನು ಗಳಿಸಿದ ಸ್ಥಾನ, ತೋರಿದ ಮುತ್ಸದ್ಧಿತನ ಹಾಗೂ ವಹಿಸಿದ ರಾಜಕಾರಣ ಗಮನಾರ್ಹ. ಇವನು ಕ್ರಿ. ಶ. 1754ರ ಫೆಬ್ರವರಿ 2ರಂದು ಬ್ಯಾರಿಸ್ನಲ್ಲಿ ಜನ್ಮ ತಾಳಿದ. ಇವನ ತಂದೆ ಚಾರ್ಲ್ಸ್ ಡೆನಿಯಲ್ ಕಾಯ್ದೆ ಡಿ ಟ್ಯಾಲಿರಾಂಡ್ ಫ್ರೆಂಚ್ ಸೈನ್ಯದ ಪದಾತಿದಳದ ಸಿಡಿಮದ್ದು ಸ್ಫೋಟಿಸುವ ಪಡೆಯ ಕರ್ನಲ್. ಇವನು ತನ್ನ ಮಗ ಸೈನ್ಯದಲ್ಲಿ ಉನ್ನತಾಧಿ ಕಾರಿಯಾಗಬೇಕೆಂದು ಬಯಸಿದ್ದ. ಆದರೆ ಚಿಕ್ಕಂದಿನಲ್ಲಿ ಟ್ಯಾಲಿರಾಂಡ್ ಜಾರಿಬಿದ್ದು ಕಾಲುಮುರಿದು ಕುಂಟನಾದ ಕಾರಣ ಸೈನ್ಯ ತರಬೇತಿ ಪಡೆಯಲಾಗಲಿಲ್ಲ. ಹಾಗಾಗಿ ಇವನನ್ನು ಪಾದ್ರಿಯನ್ನಾಗಿಸಲು ತಯಾರಿ ನಡೆಸಿದರು.

ಪಾದ್ರಿಗಳ ಅಂದಿನ ರಾಜಭೋಗ, ವೈಭವೋಪೇತ ಜೀವನ, ಸಮಾಜದಲ್ಲಿ ಅವರಿಗಿದ್ದ ಸ್ಥಾನಮಾನ ಇವನಿಗೆ ಆಕರ್ಷಿತವಾಗಬಹುದೆಂದು ಕೂಡ ನಂಬಲಾಗಿತ್ತು. ಚುರುಕು ಬುದ್ದಿಯ ಟ್ಯಾಲಿರಾಂಡ್ ತನ್ನ ಕಾಲದ ಫ್ರೆಂಚ್ ರಾಜಕೀಯದಲ್ಲಾಗುತ್ತಿದ್ದ ಬದಲಾವಣೆ ಮತ್ತು ವಂಚನೆಗಳನ್ನು ಗಮನಿಸುತ್ತಿದ್ದ. ಜೀವನದಲ್ಲಿ ಮೇಲೇರುವ ಆಕಾಂಕ್ಷೆ ಅವನಲ್ಲಿ ಮೊಳೆಯತೊಡಗಿತ್ತು. ಪಾದ್ರಿಯಾಗಲು ಬೇಕಾದ ಅರ್ಹತ ಪಡೆವಲ್ಲಿ ಇವನಿಗೆ ಪ್ಯಾರಿಸ್ನಲ್ಲಿ ದಾದಿಯೋರ್ವಳ ಮಾರ್ಗದರ್ಶನವಿತ್ತು. 1770ರಲ್ಲಿ ಸೆಮಿನರಿ ಆಫ್ ಸೆಂಟ್ಸ್ ಪ್ರವೇಶಮಾಡಿ ಕ್ಷರ್ಜಿಗಳ ಅಂದರೆ ಚರ್ಚಿನ ನೌಕರರ ಗಮನ ಸೆಳೆದ, ವೋಲ್ಸರ್, ಮಾಂಟೆಸ್ಕೊ ಮೊದಲಾದವರ ಗ್ರಂಥಗಳನ್ನು ಅಧ್ಯಯನ ಮಾಡಿದ.

1788ರಲ್ಲಿ ಆಟಿನ್ (Autun)ನ ಬಿಷಪ್ ಆಗಿ ನೇಮಕಗೊಂಡ ಟ್ಯಾಲಿರಾಂಡ್ ಚರ್ಚ್ಗಳ ಹಿತರಕ್ಷಣೆಗಾಗಿ ಸೊಲ್ಲೆತ್ತಿದ. 1789ರ ಮೇನಲ್ಲಿ ವರ್ಸೆಲ್ಸ್ನಲ್ಲಿ ಸಮಾವೇಶಗೊಂಡ ಸ್ಟೇಟ್ಸ್ ಜನರಲ್ಗೆ ಚರ್ಚ್ಗಳ ಪ್ರತಿನಿಧಿಯಾಗಿ ಆಯ್ಕೆಮಾಡಲಾಯಿತು. ಸಮಯಸಾಧಕತನ ಮತ್ತು ಚಾಣಾಕ್ಷತ ಮೈಗೂಡಿಸಿಕೊಂಡಿದ್ದ ಈತ ಚರ್ಚೆಗಳ ಅಧಿಕಾರ, ಸವಲತ್ತು ಮತ್ತು ಆಸ್ತಿಯ ರಕ್ಷಣೆ ಗಾಗಿ ಹೋರಾಡಿದ. ಇವನ ಜಾಣತನ ಮತ್ತು ವಾಕ್ಚಾತುರ್ಯ ಗಮನಿಸಿದ ಚರ್ಚ್ಗಳ ಹಿರಿಯರು ಇವನನ್ನು ಫ್ರೆಂಚ್ ಪಾರ್ಲಿಮೆಂಟ್ಗೆ ತಮ್ಮ ಪ್ರತಿನಿಧಿಯಾಗಿ ಚುನಾಯಿಸಲು ಹಿಂಜರಿಯಲಿಲ್ಲ.

ಫ್ರಾನ್ಸಿನ ಕ್ರಾಂತಿ ವೇಳೆಯಲ್ಲಿ ಹದಿನಾರನೇ ಲೂಯಿಗೆ ಕ್ರಾಂತಿಯ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಲೂಯಿ ಸೋದರನ ಮೂಲಕ (ಕಾಯ್ದೆ ಡಿ ಆರ್ಟಾಯಿಸ್) ಒತ್ತಾಯ ಮಾಡಿದ. ಆದರೆ ಕ್ರಾಂತಿಯ ನಂತರ ತನ್ನ ಬಣ್ಣ ಬದಲಾಯಿಸತೊಡಗಿದೆ. ಚರ್ಚಿನ ಪರ ಮಾತನಾಡುತ್ತಿದ್ದವನು ಈಗ ಅದರ ಸವಲತ್ತುಗಳ ವಿರುದ್ಧ ಬೊಬ್ಬೆ ಹಾಕಲಾರಂಭಿಸಿದ. ರಾಜ್ಯಾಂಗ ರಚನಾ ಸಭೆಯಲ್ಲಿ ಚರ್ಚಿನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಸಲಹೆ ನೀಡಿದ, ಊಳಿಗಮಾನ ಪದ್ಧತಿಯ ರದ್ದು ಏಕರೂಪ ಶಿಕ್ಷಣ ಜಾರಿಗೂ ಕರೆಯಿತ್ತ.

ಧಾರ್ಮಿಕ ಸಂಸ್ಥೆಗಳು ಬೇರೆಲ್ಲ ಸಂಸ್ಥೆ ಗಳ ಗಿಂತ ಶ್ರೇಷ್ಟವಲ್ಲ, ಸಮಾನ ಮಾತ್ರ ಎಂಬ ಇವನ ಹೇಳಿಕೆಯಿಂದ ಫ್ರೆಂಚ್ರು ಚಕಿತರಾದರು, ಆದರೆ ಇವನ ಸಲಹೆಗಳನ್ನು ಸರ್ಕಾರ ಬಹುವಾಗಿ ಮೆಚ್ಚಿಕೊಂಡಿತು. ಪರಿಣಾಮವಾಗಿ ಚರ್ಚ್ ಇವನನ್ನು ಚರ್ಚಿನಿಂದ ಹೊರದೂಡುವ ಮೊದಲೆ ಅದನ್ನು ಗ್ರಹಿಸಿದ ಟ್ಯಾಲಿರಾಂಡ್ ಪಾದ್ರಿ ಹುದ್ದೆಗೆ ರಾಜಿನಾಮೆ ಇತ್ತು ಹೊರ ಬಂದು ಲೌಕಿಕನಾದ. ಆದರೂ ಪೋಪ್ ಬಹಿಷ್ಕೃತಾಜ್ಞೆಯನ್ನು ಹೊರಡಿಸಿದ ಸರ್ಕಾರ ಇವನನ್ನು ಪ್ಯಾರಿಸ್ ಶಾಖಾ ಆಡಳಿತಾಧಿಕಾರಿಯಾಗಿ ನೇಮಕಮಾಡಿತು.

1791ರಲ್ಲಿ ಮೀರಬು ಮರಣ ಹೊಂದಲಾಗಿ ರಾಜಕೀಯರಂಗದಲ್ಲಿ ಮೇಲೇರಲು ಇವನಿಗೆ ಸದಾವಕಾಶವಾಯಿತು. ಇಂಗ್ಲೆಂಡಿನ ರಾಯಭಾರತ್ನ ಹೊತ್ತು ಫ್ರಾನ್ಸ್ ವಿರುದ್ಧ ಅದು ಆಸ್ಟ್ರಿಯ, ರಷ್ಯಾಗಳೊಡನೆ ಸೇರಿಕೊಳ್ಳದಂತೆ ಮಾತುಕತೆ ನಡೆಸಿದ್ದ. ಅದು ಫಲಕಾರಿಯಾಗದಿದ್ದರೂ ಫ್ರಾನ್ಸ್ನಲ್ಲಿ ಪೂರ್ಣ ಫಲ ನೀಡಿದೆ ಎಂದು ಪೊಳ್ಳು ಮಾತನಾಡಿದ. ಇಂಗ್ಲೆಂಡಿನ ರಾಜತಾಂತ್ರಿಕ ಸಭೆಯಲ್ಲಿ ಅವನಿಗೆ ತಾನು ಕ್ರಾಂತಿಯ ಪರವೋ ವಿರೋಧವೋ ಎಂಬುದು ಕೂಡ ಅವನಿಗೆ ಗೊತ್ತಿರಲಿಲ್ಲ. ಯಾವುದು ಲಾಭದಾಯಕ ಎಂದು ಮಾತ್ರ ಯೋಚಿಸುತ್ತ ತಲೆ ತಪ್ಪಿಸಿಕೊಂಡು ಅಮೆರಿಕಾದಲ್ಲಿ ಸುತ್ತಾಡಿದ. ಅಲ್ಲಿ ಜೂಜುಗಾರನಾಗಿ ಅಪಾರ ಹಣ ಗಳಿಸಿದ. ಕ್ರಾಂತಿ ಸಮಯದಲ್ಲಿ ಹೀಗೆ ಹೊರಗುಳಿದ ಟ್ಯಾಲಿರಾಂಡ್ ಎಲ್ಲವೂ ಫ್ರಾನ್ಸ್ನಲ್ಲಿ ತಣ್ಣಗಾದ ಮೇಲೆ ಹಿಂದಿರುಗಿದ.

ರಾಜಮನೆತನದವರಾದಿಯಾಗಿ ರಾಬೆಸ್ವಿಯರ್ನಂತ ತೀವ್ರ ಕ್ರಾಂತಿಕಾರಿಗಳೂ ಹತರಾಗಿದ್ದರು. ಒಟ್ಟಿನಲ್ಲಿ ಪರಿಸ್ಥಿತಿ ಅವನಿಗೆ ಹದವಾಗಿತ್ತು. ಕೂಡಲೆ ಅವನನ್ನು ಮಂತ್ರಿಯಾಗಿ ಮಾಡಲಾಯಿತು. ಜನರ ಮನಸ್ಸನ್ನು ಚೆನ್ನಾಗಿ ಅರಿತಿದ್ದ ಟ್ಯಾಲಿರಾಂಡ್ ಫ್ರಾನ್ಸ್ಗೆ ಹೊಸ ನಾಯಕತ್ವ ರೂಪಿಸತೊಡಗಿದ. ಅವನ ತಂತ್ರದ ಪ್ರಕಾರ ಫ್ರೆಂಚ್ ರಾಜಮನೆತನದವರು ಮತ್ತೆ ಅಧಿಕಾರಕ್ಕೆ ಬರಕೂಡದು. ಹಾಗಾಗಿ ನೆಪೋಲಿಯನನನ್ನು ಮೇಲೆ ತರುವ ಸನ್ನಾಹ ನಡೆಸಿದ. ಅವನಲ್ಲಿ ಗುಟ್ಟಾಗಿ ವ್ಯವಹರಿಸಿ ಅಧಿಕಾರದ ಆಸೆ ಹುಟ್ಟಿಸಿದ. ದಂಡನಾಯಕನಾಗಿ ನೆಪೋಲಿಯನ್ ಆಸ್ಟ್ರಿಯ, ಇಟಲಿ ಮೊದಲಾದ ದೇಶಗಳನ್ನು ಗೆದ್ದಾಗಲೆಲ್ಲ ಶಾಂತಿಯ ಒಪ್ಪಂದ ಮಾಡುತ್ತಿದ್ದವನು ಟ್ಯಾಲಿರಾಂಡ್, ಚಾಣಾಕ್ಷ ಹಾಗೂ ಮಹತ್ವಾಕಾಂಕ್ಷಿಯಾದ ಇವನು ಸೋತ ದೇಶಗಳಿಗೆ ಒಪ್ಪಂದದಲ್ಲಿ ಅನುಕೂಲ ಮಾಡಿಕೊಡುವುದಕ್ಕಾಗಿ ಅವರಿಂದ ಕೋಟ್ಯಾಂತರ ಫ್ರಾಂಕ (ಹಣ) ಲಂಚ ಹೊಡೆದು ಶ್ರೀಮಂತನಾದ.

ನೆಪೋಲಿಯನ್ನಲ್ಲಿ ಅಧಿಕಾರದ ಮಹತ್ವಾಕಾಂಕ್ಷೆ ಹೆಚ್ಚುತ್ತಾ ಹೋಯಿತು. ಅದನ್ನು ಗಮನಿಸಿದ ಟ್ಯಾಲಿರಾಂಡ್ ಅವನನ್ನು ಆಜೀವ ನಾಯಕನನ್ನಾಗಿ ಮಾಡುತ್ತಾ ಹೋದ. ಜಗತ್ತಿನ ಅಸಾಮಾನ್ಯ ಚಕ್ರವರ್ತಿ ತಾನೆಂದು ಬಗೆದು ದೇಶಗಳನ್ನು ಸಿಂಹಾಸನಗಳನ್ನು ತನ್ನದಾಗಿಸಿಕೊಳ್ಳುತ್ತ ಹೋದ ನೆಪೋಲಿಯನ್, ಟ್ಯಾಲಿ ಬ್ಯಾಂಡ್ನೇ ರೋಮಾಂಚಿತಗೊಳ್ಳುವಷ್ಟು ನೆಪೋಲಿಯನ್ ಬೆಳೆದ, ಕ್ರಮೇಣ ತನ್ನ ಚಾರಿತ್ರ್ಯ ಗೌಣವಾಗುವುದನ್ನರಿತ ಟ್ಯಾಲಿರಾಂಡ್ ಗುಟ್ಟಾಗಿ ನೆಪೋಲಿಯನ್ ವಿರುದ್ಧ ತಂತ್ರ ಹೂಡಲಾರಂಭಿಸಿದೆ.

ಈ ತಂತ್ರ ನೆಪೋಲಿಯನ್ ಅರಿವಿಗೆ ಬರುವ ಮುಂಚೆಯೇ ಟ್ಯಾಲಿರಾಂಡ್ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ, ನೆಪೋಲಿಯನ್ ಬಹುಕಾಲ ಅಧಿಕಾರದಲ್ಲಿರಲಾರ ಎಂಬುದು ಅವನ ಆಡಳಿತ ಶೈಲಿ ನೋಡುತ್ತಿದ್ದ ಇವನಿಗೆ ತಿಳಿದಿತ್ತು. ಆದರೆ ನೆಪೋಲಿಯನ್ಗೆ ಇವನ ಒಳನೋಟ ಅರ್ಥವಾಗುತ್ತಿರಲಿಲ್ಲ. ನೀತಿ, ಅನೀತಿಯನ್ನು ಮೀರಿದ ರಾಜತಾಂತ್ರಿಕ ಜಗತ್ತನ್ನು ಅವನು ಬಲ್ಲವನು. ಮೂಲಭೂತವಾಗಿ ಕುಟಿಲತೆಯ, ಸಮಯಸಾಧಕತನದ, ಸಿನಿಕತನದ ಸಾಕಾರ ಮೂರ್ತಿಯಾದ ಟ್ಯಾಲಿಾಂಡ್’ ಮಂತ್ರಿಮಂಡಲಕ್ಕೆ ರಾಜೀನಾಮೆ ನೀಡಿ ನಿರ್ಲಿಪ್ತನಂತೆ ಇರತೊಡಗಿದ, ಆದರೆ ನೆಪೋಲಿಯನ್ಗೆ ಆತನ ಪ್ರತಿಭೆ ಮತ್ತು ಅನುಭವ ಬೇಕಾಗಿದ್ದವು ಅವನು ಟ್ಯಾಲಿರಾಂಡ್ ಜೊತೆಗೆ ಆಡಳಿತದ ವಿಷಯಗಳನ್ನು ಚರ್ಚಿಸುತ್ತಿದ್ದ. ಟ್ಯಾಲಿಲ್ಯಾಂಡ್ನ ಸ್ವಾರ್ಥ ಮತ್ತು ಲಂಚಕೋರತನವನ್ನು ನೆಪೋಲಿಯನ್ ಅರಿತಿದ್ದರೆ, ಟ್ಯಾಲಿರಾಂಡ್ ಎಂದೋ ಸೆರೆಮನೆಯಲ್ಲಿರಬೇಕಾಗುತ್ತಿತ್ತು.

ಟ್ಯಾಲಿರಾಂಡ್ ಈಗ ಮಂತ್ರಿಯಾಗಿರದ, ಅವನ ಮೇಲೆ ಹಲವು ದೂರುಗಳಿದ್ದರೂ ನೆಪೋಲಿಯನ್ ಅವನ ಸಲಹೆ ಪಡೆಯುತ್ತಿದ್ದ. ಇವನ ಸಲಹೆಯಂತೆ ನೆಪೋಲಿಯನ್ ಸ್ಟೈನ್ ಮೇಲೆ ದಾಳಿಯಿಟ್ಟು, ಏಳನೇ ಫರ್ಡಿನ್ಯಾಂಡನನ್ನೂ ಪದಚ್ಯುತಿಗೊಳಿಸಿದ. 1808ರಲ್ಲಿ ಎಫರ್ಟ್ನಲ್ಲಿ (Erfurt) ಜರುಗಿದ ಯೂರೋಪಿನ ಸಾರ್ವಭೌಮರುಗಳ ಸಮಾವೇಶದಲ್ಲಿ ಭಾಗವಹಿಸಲು ನೆಪೋಲಿಯನ್ ಟ್ಯಾಲಿಲ್ಯಾಂಡ್ನನ್ನು ಗೃಹಮಂತ್ರಿ ಪೋಶ್ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದ. ಈ ಗೃಹಮಂತ್ರಿಯ ಜೊತೆಗೆ ಆಗಲೇ ಗುಟ್ಟಾಗಿ ವ್ಯವಹರಿಸಿದ್ದ ಟ್ಯಾಲಿರಾಂಡ್ ನೆಪೋಲಿಯನ್ನ ವಿದೇಶಾಂಗ ನೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ. ಅಲ್ಲಿ ಸಮಾವೇಶ ನಡೆಯುತ್ತಿದ್ದಾಗ ಟ್ಯಾಲಿರಾಂಡ್ ರಹಸ್ಯವಾಗಿ ಯೂರೋಪಿಯನ್ ನಾಯಕರ ಜೊತೆ ನೆಪೋಲಿಯನ್ ವಿರುದ್ಧ ಪಿತೂರಿ ಹೂಡಿದ್ದ. ಮೇಲಾಗಿ ನೆಪೋಲಿಯನ್ ಕ್ರಮೇಣ ಜಾರುತ್ತಿರುವುದಾಗಿಯೂ, ಅವನನ್ನು ಗಂಭೀರವಾಗಿ ಪರಿಗಣಿಸಬಾರದೆಂದೂ ಸೂಚಿಸಿದ.

ಇಷ್ಟರಲ್ಲಾಗಲೇ ತನ್ನ ಮುಂದಿನ ಯೋಜನೆ ತಯಾರಿಸಿದ್ದ ಟ್ಯಾಲಿರಾಂಡ್ ಹೊಸ ದಾಳ ಹಾಕತೊಡಗಿದ್ದ. ನೆಪೋಲಿಯನ್ ತನ್ನ ಉದ್ದಟತನದಲ್ಲಿ ಇಂಗ್ಲೆಂಡ್, ರಷ್ಯಾ ವಿರುದ್ಧವಲ್ಲ ಯುದ್ಧ ಹೂಡಿ ಮುಖಭಂಗ ಮಾಡಿಕೊಂಡಿದ್ದ. ಸೋತು ಕರಾರು ಮಾಡಿಕೊಳ್ಳುವುದಕ್ಕಾಗಿ ನೆಪೋಲಿಯನ್ ಟ್ಯಾಲಿಲ್ಯಾಂಡ್ನನ್ನು ಮತ್ತೆ ಮಂತ್ರಿಯಾಗಲು ಕರೆದ. ಆದರೆ ಟ್ಯಾಲಿರಾಂಡ್ ನೆಪೋಲಿಯನ್ನ ಪದಚ್ಯುತಿಗೆ ತಯಾರಿ ನಡೆಸಿದ ರಿಂದ ಮಂತ್ರಿಯಾಗಲು ಒಪ್ಪಲಿಲ್ಲ.

ಫ್ರೆಂಚ್ ಸೇನೆ ರಷ್ಯಾದಲ್ಲಿ ಸೋತು ನೆಪೋಲಿಯನ್ ಶರಣಾಗತನಾದಾಗ ರಷ್ಯಾದ ದೂರ ಪ್ಯಾರಿಸ್ಗೆ ಬಂದು ಇಳಿದುಕೊಂಡದ್ದು ಟ್ಯಾಲಿಲ್ಯಾಂಡ್ನ ಅತಿಥಿಗೃಹದಲ್ಲಿ, ನೆಪೋಲಿಯನ್ ಪತನಕ್ಕೆ ಕಾರಣನಾಗಿದ್ದ ಟ್ಯಾಲಿರಾಂಡ್ ನೆಪೋಲಿಯನ್ನನ ದಸ್ತಗಿರಿಯಾಗಿ ಎಲ್ಲಾ ದ್ವೀಪದಲ್ಲಿ ಸೆರೆಯಲ್ಲಿಡಲೂ ಕಾರಣನಾದ. ಹದಿನೆಂಟನೆಯ ಲೂಯಿ ಮತ್ತೆ ದೊರೆಯಾದ, ನಿರೀಕ್ಷಿಸಿದ್ದಂತೆ ಟ್ಯಾಲಿಗ್ಯಾಂಡ್ ಮಂತ್ರಿಯಾದ ಮತ್ತೆ ಮಂತ್ರಿಯಾದ ಟ್ಯಾಲಿರಾಂಡ್ ನೆಪೋಲಿಯನ್ನನ ದುಸ್ಸಾಹಸಗಳ ಫಲವಾದ ಸೋಲುಗಳಿಂದ ಫ್ರಾನ್ಸ್ಗೆ ತೀರಾ ಅನ್ಯಾಯವಾಗದಂತೆ ನೋಡಿಕೊಳ್ಳಲು ಪ್ರಯತ್ನಿಸಿದ.

ಯೂರೋಪಿನ ದೇಶಗಳು ಮತ್ತೆ ಫ್ರಾನ್ಸ್ ವಿರುದ್ಧ ಒಗ್ಗಟ್ಟಾಗಿ ನಾಶಮಾಡದಂತೆ ಚರ್ಚೆ, ಕರಾರು ಮಾಡಿಕೊಳ್ಳ ತೊಡಗಿದ. ಅಷ್ಟರಲ್ಲಿ ಜೈಲಿನಿಂದ ತಪ್ಪಿಸಿಕೊಂಡು ಬಂದ ನೆಪೋಲಿಯನ್ ಮತ್ತೆ ಸರ್ವಾಧಿಕಾರಿ ಯಾದ : ನೂರು ದಿನ ದೊರೆಯನ್ನು ಹೊರಗಟ್ಟಿ ಗರ್ಜಿಸಿದ. ಅದು ನಡೆಯಲಿಲ್ಲ. ಓಡಿಹೋಗಿದ್ದ ಟ್ಯಾಲಿರಾಂಡ್ ಮತ್ತು ಹದಿನೆಂಟನೆಯ ಲೂಯಿ ಬಂದರು. ಟ್ಯಾಲಿರಾಂಡ್ ಮತ್ತೆ ಮಂತ್ರಿಯಾದ.

ನೆಪೋಲಿಯನ್ನನ ಪತನಾನಂತರ 1815ರಲ್ಲಿ ಸಮಾವೇಶಗೊಂಡ ವಿಯನ್ನಾ ಸಭೆಯಲ್ಲಿ ಚಾಣಾಕ್ಷತನ ತೋರಿದ. ‘ಪ್ರಿನ್ಸಿಪಲ್ ಆಫ್ ಲೆಜಿಟಮಸಿ’ ತತ್ವ ಮುಂದೊಡ್ಡುವುದರ ಮೂಲಕ ಸಭೆ ಕೈಗೊಂಡ ಪ್ರಾದೇಶಿಕ ಮರುವ್ಯವಸ್ಥೆಯಲ್ಲಿ ಫ್ರಾನ್ಸಿಗೆ ನಷ್ಟವಾಗದಂತೆ ನೋಡಿಕೊಂಡ. ಅದಾದನಂತರ ಇವನ ಸೋಗಲಾಡಿತನ, ಭ್ರಷ್ಟತೆ ಮತ್ತು ಗೋಸುಂಬೆತನ ಗಮನಿಸಿದ್ದ ಫ್ರೆಂಚ್ ಪಾರ್ಲಿಮೆಂಟ್ ಮಂತ್ರಿಗಿರಿ ಯಿಂದ ಕಿತ್ತೊಗೆಯಿತು.

ನಿವೃತ್ತನಾದಮೇಲೂ ಟ್ಯಾಲಿರಾಂಡ್ ಸಕ್ರಿಯ ರಾಜಕಾರಣಿಯಾಗಿದ್ದ. ಫ್ರಾನ್ಸ್ ಅವನನ್ನು ಪೂರ್ತಿ ಕಡೆಗಣಿಸಲಾಗುತ್ತಿರಲಿಲ್ಲ. ತನ್ನ ನೆನಪಿನ ಗ್ರಂಥ ರಚಿಸುತ್ತಿದ್ದ ವೇಳೆಯಲ್ಲೇ 1830-34ರವರೆಗೆ ಬ್ರಿಟನ್ನಲ್ಲಿ ರಾಯಭಾರಿಯಾಗಿದ್ದ. ಆತನ ಆ ಹುದ್ದೆಯ ಅವಧಿಯಲ್ಲೇ ಬ್ರಿಟನ್, ಸ್ಪೇನ್, ಪೋರ್ಚುಗಲ್ನೊಂದಿಗೆ ಫ್ರಾನ್ಸ್, ಸ್ನೇಹದ ಒಪ್ಪಂದವನ್ನು ಮಾಡಿಕೊಂಡಿತು, ಇದು ಐತಿಹಾಸಿಕ ಒಪ್ಪಂದ. ಆದರೆ ಆತ ಮಂತ್ರಿಯಾಗಿದ್ದ ಅವಧಿಯಲ್ಲಿ ಸ್ವಂತದ ಲಾಭಕ್ಕಾಗಿ ಅತೀ ಬುದ್ಧಿವಂತಿಕೆಯಿಂದ ವಿದೇಶಗಳೊಂದಿಗೆ ಫ್ರೆಂಚ್ ನೆಲದ ಬಗ್ಗೆ ಮಾಡಿಕೊಂಡ ರಾಜಿ ಒಪ್ಪಂದಗಳಿಂದಾಗಿ 1870, 1914 ಮತ್ತು 1939ರ ಯುದ್ಧದಲ್ಲಿ ಫ್ರಾನ್ಸ್ ಭಾಗವಹಿಸಿ ಕಷ್ಟನಷ್ಟ ಅನುಭವಿಸಬೇಕಾಯಿತು.

ಕುಂಟನಾಗಿದ್ದ ಟ್ಯಾಲಿರಾಂಡ್ ಚತುರನೂ ಕುಟಿಲನೂ ಆಗಿದ್ದ. ಅವನ ಎಲ್ಲ ಮುಖ್ಯ ಕೆಲಸಗಳು ಸ್ವಾರ್ಥ ಮತ್ತು ದೇಶಸೇವೆಯ ಸೋಗಿನವಾಗಿದ್ದವು. ಸುಮಾರು ಅರವತ್ತು ವರ್ಷಕಾಲ ವಿವಿಧ ಮಟ್ಟದಲ್ಲಿ ಅಧಿಕಾರ ಅನುಭವಿಸಿದ ಪಕ್ಷ ಬದಲಾಯಿಸಿದ. ನಿಷ್ಠೆ ಬದಲಾಯಿಸಿದ. ಉಣ್ಣಿಸಿದವರ ಕೈ ಕೂಡ ಕಚ್ಚಿದ, ಹೀಗೆ ತನ್ನ ದೇಶ ಮತ್ತು ಪರದೇಶಗಳಿಂದ ಅಪಾರ ಲಂಚ ಹೊಡೆದ ಟ್ಯಾಲಿರಾಂಡ್ ಮನುಷ್ಯನ ಸಾಧನೆ ಹಾಗೂ ಪತನ ಎರಡಕ್ಕೂ ಸಂಕೇತವಾಗಿದ್ದು ತನ್ನ 84ನೇ ವರ್ಷದಲ್ಲಿ ತೀರಿಕೊಂಡ.

Leave a Reply

Your email address will not be published. Required fields are marked *