Breaking News

Peter the Great History in Kannada

ರಷ್ಯಾದ ಪೀಟರ್ ಮಹಾಶಯ ಜೀವನ ಚರಿತ್ರೆ – Peter the Great History in Kannada – Part 1

ರಷ್ಯಾದ ಪೀಟರ್ ಮಹಾಶಯ ಜೀವನ ಚರಿತ್ರೆ – Peter the Great History in Kannada – Part 1

ರಷ್ಯಾದ ಮೊದಲ ಮನೆತನ ಕಯಿವ (Kieva or Kiefa), ಇದರ ಸ್ಥಾಪಕ ದೂರ ಕಯಿಫ ಆರಂಭದಲ್ಲಿ ರಷ್ಯ ರಾಜ್ಯ ಯೂಕ್ ರೈನ್ ಪ್ರದೇಶಕ್ಕೆ ಸೀಮಿತವಾಗಿದ್ದಿತು. ಇದನ್ನು ದಕ್ಷಿಣ ರಷ್ಯ ರಾಜ್ಯ ಎಂದು ಪರಿಗಣಿಸಬಹುದು. ಇದು ಕಾನ್‌ಸ್ಟಾಂಟಿನೋಪಲ್, ವಾರ್ಸಾ ಮತ್ತು ಇತರ ಪ್ರಮುಖ ವಾಣಿಜ್ಯ ಕೇಂದ್ರಗಳೊಂದಿಗೆ ಸ್ಪರ್ಧೆ ನಡೆಸಿತ್ತು. ಸ್ವೀಡನ್‌, ಫಿನ್‌ಲ್ಯಾಂಡ್ ಮತ್ತು ಬಾಲ್ಟಿಕ್‌ ರಾಜ್ಯಗಳ ನಮಗೆ ಕಯುವ ಸಂಪತ್ತಿನ ಕೇಂದ್ರವಾಗಿದ್ದಿತು. ಕಯಿನ ಮನೆತನದೊಂದಿಗೆ ಸಂಬಂಧ ಬೆಳೆಸಲು ಯೂರೋಪಿನ ರಾಜಮನೆತನಗಳು ಪೈಪೋಟಿ ನಡೆಸುತ್ತಿದ್ದವು.

ಇಂತಹ ಸಮೃದ್ದ ರಾಜಧಾನಿ 1240 ರಲ್ಲಿ ಟಾರ್ಟಾರರ ದಾಳಿಗೆ ತುತ್ತಾಗಿ ವಿನಾಶಗೊಂಡಿತು. ಅನಂತರ ಪ್ರಾಬಲ್ಯಕ್ಕೆ ಬಂದ ಯೂರಿಕ್ ಮನೆತನ ಉತ್ತರ ರಮ್ಯ ರಾಜ್ಯ ಸ್ಥಾಪನೆ ಮಾಡಿತು. ಅದರ ರಾಜಧಾನಿ ಮಾಸ್ಕೊ, ಯೂರಿಕ್ ಮನೆತನದಲ್ಲಿ ಅವಾನ್ (ಇವಾನ) ಹೆಸರಿನ ದೊರೆಗಳು ಪ್ರಸಿದ್ಧರಾಗಿದ್ದರು. ಅವರಲ್ಲಿ 4ನೇ ಐವಾನ್ ದೊರೆ 15 ಟಿಂಬಲ್’ ಎಂಬ ಕುಖ್ಯಾತಿಗೆ ಪಾತ್ರನಾಗಿದ್ದನು, ಟೊರಿಕ್ ಮನೆತನ 1613ರಲ್ಲಿ ಕೊನೆಗೊಂಡು ರೋಮನೊವ್ (ರೋಮನೋಚ್ ) ಮನೆತನ ಅಧಿಕಾರಕ್ಕೆ ಬಂದಿತು.

ಮೈಕೇಲ್ ರೋಮನೋಫ್ (1613-1645)ನ ಮಗನಾದ ಅಲೆಕ್ಸಿಸ್‌ ಕಾಲದಲ್ಲಿ (1654) ದಕ್ಷಿಣ ರಷ್ಯಾ ರಾಜ್ಯದ ಕಯುವ ರಾಜಧಾನಿಯನ್ನು ವಶಪಡಿಸಿಕೊಂಡು ಉತ್ತರ ಮತ್ತು ದಕ್ಷಿಣ ರಷ್ಯಾ ರಾಜ್ಯಗಳನ್ನು ಒಂದುಗೂಡಿಸಲಾಯಿತು. ಹೀಗೆ ರಷ್ಯಾ ದೇಶದ ಏಕೀಕರಣವನ್ನು ಮಾಡಿದ ಕೀರ್ತಿ ರೋಮನೋಫ್ ಮನೆತನಕ್ಕೆ ಸೇರುತ್ತದೆ. ಮೈಕೇಲ್ ರೋಮನೋಫ್ [Mikhail Fyodorovich Romanov], ರೋಮನ್ ಚಕ್ರವರ್ತಿಗಳು ಇಟ್ಟುಕೊಳ್ಳುತ್ತಿದ್ದ ಸೀಜರ್ ಎಂಬ ಬಿರುದನ್ನು ರಷ್ಯದಲ್ಲಿ ಬೆಳಕಿಗೆ ತಂದನು. ಸೀಜರ್ ಎಂಬುದು ‘ಚಾ‌’ ಎಂದು ನಾಮಾಂತರಗೊಂಡಿತು. ಕೆಜರ್ ಎಂಬ ಜರ್ಮನ್ ಪದ ‘ಸೀಜರ್’ ಎಂಬುದರ ಸಾಮಾಂತರವಾಗಿದೆ.

ರೋಮನೋಫ್ ಮನೆತನದಲ್ಲಿ ಅಲೆಕ್ಸಿಸ್ [Alexis of Russia] ಸಮರ್ಧನು, ಮಹತ್ವಾಕಾಂಕ್ಷಿಯೂ ಆಗಿದ್ದನು. ಇವನು 1645ರಿಂದ 1682 ರವರೆಗೆ ಅಧಿಕಾರದಲ್ಲಿದ್ದನು. ಇವನ ಮಗನೇ ಪೀಟರ್ ಮಹಾಶಯ [Peter the Great]. ಪೀಟರ್ ಜನ್ಮ ತಾಳಿದುದು 1672ರಲ್ಲಿ, ಅಲೆಕ್ಸಿಸ್ (ಅಲೆಗ್ಲಾಂಡರ್) ಮತ್ತು ನಟಾಲಿಯ ಇವನ ತಂದೆ ತಾಯಂದಿರು. ಅಂಗವಿಕಲ ಹಾಗೂ ಅತಿ ಕುರುಡನಾಗಿದ್ದ ಇವನ ಹಿರಿಯ ಅಣ್ಣ ಫೋಡ‌ 1676ರಿಂದ 1682ರ ವರೆಗೆ ನಾಮಮಾತ್ರ ಅರಸನಾಗಿದ್ದು ಆ ಸಮಯದಲ್ಲಿ ಹಿರಿಯ ಸೋದರಿ ಸೋಫಿಯ [Sophia Alekseyevna of Russia] ರಾಜಪ್ರತಿನಿಧಿಯಾಗಿ ಆಡಳಿತ ನಿರ್ವಹಿಸಿದಳು.

1682ರಲ್ಲಿ ಹತ್ತು ವರ್ಷದ ಪೀಟರ್ ಅಧಿಕಾರ ರೂಢನಾದಾಗ ಅವನ ಪರವಾಗಿ ಸೋದರಿ ಸೋಫಿಯ ಅಧಿಕಾರದಲ್ಲಿ ಮುಂದುವರೆದಳು. (ಈ ಮಧ್ಯೆ ಎರಡನ ಅಣ್ಣ ಐವಾನ್ ವಿರುದ್ಧ ತೀವ್ರ ಹೋರಾಟ ನಡೆದು ರಕ್ತಪಾತ ಸಂಭವಿಸಿತು. ಕೊನೆಗೆ ಐವಾನ್ ಅಧಿಕಾರದಿಂದ ನಿರ್ಗಮಿಸಿ 7 ವರ್ಷಗಳ ನಂತರ ನಿಧನಹೊಂದಿದನು.) 1689ರಲ್ಲಿ ಪೀಟರ್’ ತಾನ ಎಲ್ಲ ಅಧಿಕಾರವನ್ನು ವಹಿಸಿಕೊಂಡ ಮೇಲೆ ಸೋಫಿಯ ಕ್ರೈಸ್ತ ಧಾರ್ಮಿಕ ಶಾಲೆ ಸೇರಿ ಸೇವಕಿಯರೊಂದಿಗೆ ರಾಜಕುಮಾರಿಯಂತೆ ಇದ್ದು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡು ತನ್ನ ಜೀವನ ಸಾರ್ಥಕ ಮಾಡಿಕೊಂಡಳು.

ಹದಿನೇಳನೆಯ ಶತಮಾನಕ್ಕೆ ಮೊದಲು ರಷ್ಯಾ ಪೂರ್ಣ ಹಿಂದುಳಿದ ದೇಶವಾಗಿದ್ದಿತು. ಅದು ಭೌಗೋಳಿಕವಾಗಿ ಯೂರೋಪಿನ ರಾಷ್ಟ್ರವಾಗಿದ್ದರೂ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕವಾಗಿ ಏಷ್ಯಾದ ಮಾದರಿಯನ್ನೇ ರೂಢಿಸಿಕೊಂಡಿದ್ದಿತು. ಯೂರೋಪಿನಲ್ಲುಂಟಾದ ಯಾವ ಪ್ರಗತಿಪರ ಬದಲಾವಣೆಗಳೂ ರಷ್ಯಾವನ್ನು ಪ್ರವೇಶಿಸಲೇ ಇಲ್ಲ. ಹಾಗಾಗಿ ರಷ್ಯಾ ಪೂರ್ಣವಾಗಿ ಯೂರೋಪಿನಿಂದ ಪ್ರತ್ಯೇಕವಾಗಿ ಉಳಿದಿದ್ದಿತು. ಪುರಾತನ ಕಾಲದ ಮಾದರಿಯ ಜೀವನ ವ್ಯವಸ್ಥೆಯನ್ನೇ ರೂಢಿಸಿಕೊಂಡಿದ್ವಿತು.

ರಷ್ಯಾದ ಸಂಸತ್ತನ್ನು ಡೂಮ್ (Duma) ಎಂದು ಕರೆಯುತ್ತಿದ್ದರು. ಅದು ಜಮೀನ್ದಾರರು, ಜಾಗೀರುದಾರರು ಮತ್ತು ಧರ್ಮಾಧಿಕಾರಿಗಳ ಪ್ರತಿನಿಧಿಗಳಿಂದ ಕೂಡಿದ್ದಿತು. ಜಮೀನಾರರನ್ನು ‘ಬೋಯಿ‌’ ಎಂದು ಕರೆಯಲಾಗುತ್ತಿದ್ದಿತು. ಜಾಗೀರುದಾರರನ್ನು ‘ಸ್ಟೈಲ್‌ಜಿ’ ಎಂದು ಕರೆಯಲಾಗುತ್ತಿದ್ದಿತು. ಇವರು ಅನಾಗರೀಕತೆ ಮತ್ತು ಮೌಡ್ಯಗಳ ರಕ್ಷಕರಾಗಿದ್ದರು. ಇವರನ್ನು ಸುಧಾರಣೆ ಮಾರ್ಗಕ್ಕೆ ತರುವುದೇ ಕಷ್ಟದ ಕಾರ್ಯವಾಗಿದ್ದಿತು. ಅಂತಹ ದೇಶವನ್ನು ಆಧುನಿಕ ರಾಷ್ಟ್ರವನ್ನಾಗಿ ಪರಿವರ್ತಿಸಿದವನು ಪೀಟರ್. ಅನಂತರ ರಷ್ಯಾ ಯೂರೋಪಿನ ಅಗ್ರಮಾನ್ಯ ರಾಷ್ಟ್ರಗಳ ಸಾಲಿನಲ್ಲಿ ಸೇರುವಂತಾಯಿತು. ಹೆಚ್. ಎ. ಎಲ್. ಫಿಷರ್ ಹೇಳುವಂತೆ “ರಷ್ಯಾ ದೇಶ ಯೂರೋಪಿನ ನಾಗರಿಕತೆಯಲ್ಲಿ ಹುಟ್ಟಿದ ಕೊನೆಯ ಕೂಸು.”

ಪೀಟರನ ಬಾಲ್ಯ

ರೋಮನೋಫ್ ಮನೆತನದ ದೊರೆಗಳಲ್ಲಿಯೇ ನೀಟ‌ ಪ್ರಮುಖನು, ಈತನು ಚಿಕ್ಕಂದಿನಲ್ಲಿ ಯಾವ ಪರಿವಾರವನ್ನಾಗಲಿ, ರೀತಿ ನೀತಿಯನ್ನಾಗಲೀ, ಶಿಸ್ತು ಸಂಯಮವನ್ನಾಗಲೀ, ಯಾವ ಧೈಯ ಸಾಧನೆಯನ್ನಾಗಲಿ ಇಟ್ಟುಕೊಂಡು ಬೆಳೆದವನು – ಸ್ಟೇಚ್ಛೆಯಾಗಿ ಕಾಲಹರಣ ಮಾಡಿದವನು, ಯಾವ ಕ್ಷೇತ್ರದಲ್ಲೂ ಅವನು ನಿಖರವಾದ ತರಬೇತಿಯನ್ನು ಪಡೆಯಲಿಲ್ಲ. ಕುಡಿತ, ಕುಣಿತ ಮತ್ತು ಪೇಟೆಯಲ್ಲಿ ಅದ್ವಿತೀಯನಾಗಿದ್ದ, ಎಲ್ಲ ಬಗೆಯ ಸಹಪಾಠಿಗಳ ಜೀವನಕ್ಕೂ ಹೊಂದಿಕೊಳ್ಳುವ ಮನೋಭಾವವೊಂದೇ ಅವನಲ್ಲಿದ್ದ ಅಂದಿನ ದೊಡ್ಡ ಗುಣ. ಪೀಟರನ ಈ ಜೀವನ ನೋಡಿದ ಅದೆಷ್ಟೋ ಜನ ಅರಸನಾಗಿ ರಾಜ್ಯವಾಳುವುದು ಇವನಿಂದ ಸಾಧ್ಯವೇ ? ಎಂದೆಲ್ಲ ಉದ್ದಾರ ಎತ್ತಿದುದುಂಟು, ಅಂತಹ ವ್ಯಕ್ತಿಯನ್ನು ಆಧುನಿಕ ರಷ್ಯಾದ ನಿರ್ಮಾಪಕನಾಗಿ ಪರಿವರ್ತನೆ ಮಾಡಿದ ಸನ್ನಿವೇಶ ಪೀಟರನ ಜೀವನದಲ್ಲಿ ಚಿರಸ್ಮರಣೀಯ ವಾದುದಾಗಿದೆ.

ತನ್ನ ಬಾಲ್ಯವನ್ನು ಮಾಸ್ಕೋದಲ್ಲಿ ಕಳೆದ ಪೀಟರನಿಗೆ, ಅಲ್ಲಿ ಬಂದು ಹೋಗುತ್ತಿದ್ದ ಯೂರೋಪಿಯನರ ನಿಕಟ ಸಂಪರ್ಕ ಉಂಟಾಯಿತು. ಆ ಮೂಲಕ ಅವರ ನಾಗರಿಕತೆ, ಆಚಾರ-ವಿಚಾರ, ದೃಷ್ಟಿಕೋನ ಹಾಗೂ ಆರ್ಥಿಕ ಮತ್ತು ವೈಜ್ಞಾನಿಕ ಪ್ರಗತಿಯನ್ನು ಅರಿತ ಅವನಿಗೆ ತನ್ನ ದೇಶದ ಪರಿಸ್ಥಿತಿ ಗೋಚರವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಅನಂತರ ತನ್ನ ಹಳೆಯ ಅಸಂಬದ್ಧ ರೀತಿನೀತಿಗಳನ್ನು ಬಿಟ್ಟು ವಿದ್ಯಾರ್ಜನೆಗೆ ತೊಡಗಿದನು. ಅವನು ತತ್‌ಕ್ಷಣದಲ್ಲಿ ಪಡೆದ ಶಿಕ್ಷಣ ಉನ್ನತ ಮಟ್ಟದ್ದಾಗಿದ್ದು ಕ್ರಮಬದ್ಧವಾಗಿರದಿದ್ದರೂ ಅದು ಮೂಲ ಶಿಕ್ಷಣವಾಗಿದ್ದಿತು.

ಯಾವ ವಿಷಯದಲ್ಲೂ ಪರಿಪೂರ್ಣವಾಗಿ ಆಳವಾದ, ಅಧ್ಯಯನ ಮಾಡಲಾಗದಿದ್ದರೂ ಜರ್ಮನ್ ಮತ್ತು ಡಚ್ ಭಾಷೆಗಳ ಜೊತೆಗೆ ಗಣಿತ, ರೇಖಾಗಣಿತ, ತಾಂತ್ರಿಕ ಜ್ಞಾನ, ಮಿಲಿಟರಿ ವಿಷಯಗಳ ಬಗ್ಗೆ ಜ್ಞಾನ ಸಂಪಾದಿಸಿದನು. ಮಿಲಿಟರಿ, ರೇಖಾಗಣಿತ ಮತ್ತು ತಾಂತ್ರಿಕ ವಿಷಯದಲ್ಲಿ ಪೀಟರನಿಗೆ ಹೆಚ್ಚಿನ ಆಸಕ್ತಿ ಇದ್ದಿತು. ಸಮುದ್ರಯಾನ ಸಾಹಸವೆಂದರೆ ಅವನಿಗೆ ಅತಿ ಪ್ರಿಯವಾದುದು. ದೊರೆತ ಅಲ್ಪಾವಧಿಯಲ್ಲಿ ಎಷ್ಟು ಸಾಧ್ಯವೊ ಅಷ್ಟನ್ನೇ ಬಹು ಆಸಕ್ತಿಯಿಂದ ಕಲಿತನು. ಇಷ್ಟೆಲ್ಲ ಪರಿಶ್ರಮದ ಫಲವಾಗಿ ಕ್ರೂರಿಯೂ, ಪಾಮರನೂ, ಅಯೋಗ್ಯನೂ ಆಗಿದ್ದ ಪೀಟರ್ ಬಹುಬೇಗ ಚುರುಕು ಬುದ್ಧಿಯ ಸಭ್ಯ ವ್ಯಕ್ತಿಯಾಗಿ ಮಾರ್ಪಟ್ಟನು, ರಾಜಕುಮಾರನಾಗಿ ತನ್ನ ಜವಾಬ್ದಾರಿ ಏನು ಎಂಬುದನ್ನು ಕಂಡುಕೊಂಡನು.

ಪೀಟರನಿಗೆ ರಷ್ಯಾದ ಸಿಂಹಾಸನ 1682ರಲ್ಲಿ ಪ್ರಾಪ್ತವಾಯಿತು. ಆಗ ಅವನಿನ್ನೂ ಕೇವಲ ಹತ್ತು ವರ್ಷದ ಬಾಲಕನಾಗಿದ್ದುದರಿಂದ ಆಡಳಿತವನ್ನು ಅವನ ಸೋದು ಸೋಫಿಯಾ ನಿರ್ವಹಿಸಿದ್ದಳು. ಮಹತ್ವಾಕಾಂಕ್ಷಿಯಾದ ಸೋಫಿಯಾ ಎಲ್ಲ ಅಧಿಕಾರವನ್ನು ತನ್ನಲ್ಲೇ ಕೇಂದ್ರೀಕರಿಸಿಕೊಂಡು ಪೀಟರ ನನ್ನು ದೂರವಿಡುವ ಪ್ರಯತ್ನ ನಡೆಸಿದಳು. ಇದನ್ನು ಅರಿತ ಪೀಟರ್ ಸೋಫಿಯಾಳಿಂದ ಅಧಿಕಾರವನ್ನು ಕಸಿದುಕೊಂಡು 1689ರಲ್ಲಿ ತಾನೇ ಆಡಳಿತ ಆರಂಭಿಸಿದನು. ಆಗಿನ್ನು ಹದಿನೇಳರ ಹರೆಯದ ಪೀಟರನಿಗೆ ಪುರಾತನ ಜೀವನಕ್ರಮಕ್ಕೆ ಅಂಟಿಕೊಂಡಿದ್ದ ರಷ್ಯಾದ ಏಳಿಗೆಯ ಸಮಸ್ಯೆ ಬೃಹದಾಕಾರವಾಗಿ ಕಂಡಿತು. ತನ್ನ ಬಾಲ್ಯ ಜೀವನದಲ್ಲಿ ವಿದ್ಯಾರ್ಜನೆಗೂ ಹೆಚ್ಚಿನ ಗಮನ ಕೊಡದೆ ಇಚ್ಚೆ ಬಂದಂತೆ ಅಲೆದು ಬೆಳೆದ ಪೀಟರನಿಗೆ ಅದು ಸಹಜವಾದುದೇ ಆಗಿತ್ತು. ಆದರೂ ಧೃತಿಗೆಡದ ಪೀಟರ್ ಅವೆಲ್ಲವನ್ನೂ ಸ್ವಸಾಮರ್ಥ್ಯದಿಂದಲೇ ಎದುರಿಸುವ ಮನಸ್ಸು ಮಾಡಿ ಯಶಸ್ವಿಯೂ ಆದನು.

Leave a Reply

Your email address will not be published. Required fields are marked *