Breaking News

Leo Tolstoy Biography in Kannada

ಲಿಯೋ ಟಾಲ್‌ಸ್ಟಾಯ್ ಜೀವನ ಚರಿತ್ರೆ – Leo Tolstoy Biography in Kannada

ಲಿಯೋ ಟಾಲ್‌ಸ್ಟಾಯ್ ಜೀವನ ಚರಿತ್ರೆ – Leo Tolstoy Biography in Kannada

ಇವನ ಪೂರ್ಣ ಹೆಸರು ಕೌಂಟ್‌ಲಿಯೊ ಟಾಲ್‌ ಸ್ಟಾಯ್ [Count Lev Nikolayevich Tolstoy], 19ನೇ ಶತಮಾನದ ಅತ್ಯಂತ ಹೆಸರಾಂತ ರಷ್ಯನ್ ಕಾದಂಬರಿಕಾರ ಮತ್ತು ನೀತಿಜ್ಞ ಹಾಗೂ ಜಗತ್ತಿನ ಶ್ರೇಷ್ಠ ಬರಹಗಾರರಲ್ಲೊಬ್ಬ.

ಟಾಲ್‌ಸ್ಟಾಯ್ ವ್ಯಕ್ತಿತ್ವವೇ ಅಪರೂಪವಾದದ್ದು, ಅವನೊಬ್ಬ ಹುಟ್ಟು ಬಂಡಾಯಗಾರ. ಇಡೀ ತನ್ನ ಬದುಕಿನಾದ್ಯಂತ ಚರ್ಚ್, ಸರ್ಕಾರ, ಸಾಹಿತ್ಯ ಮತ್ತು ತನ್ನ ಸಂಸಾರದ ವಿರುದ್ಧವೇ ಬಂಡೆದ್ದವನು. ಇಷ್ಟಾದರೂ ಸಂಪ್ರದಾಯವಾದಿ ಮತ್ತು ಆಸ್ತಿಕ, ಕಾದಂಬರಿ ಕ್ಷೇತ್ರದಲ್ಲಿ ವಾಸ್ತವತೆಗೆ ಅವನು ನೀಡಿದ ಮಹತ್ವ ಬೇರಾರೂ ನೀಡಿರಲಾರರು. ಅದೇ ಅವುಗಳ ಜೀವಂತಿಕೆಯ ರಹಸ್ಯವೂ ಚೈತನ್ಯವೂ ಆಗಿರುವುದು ವಿಶೇಷ.

1928ರಲ್ಲಿ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಟಾಲ್‌ಸ್ಟಾಯ್ [Leo Tolstoy], ಮಾಸ್ಕೋಗೆ 130 ಮೈಲಿ ದೂರದ ಯಾಸ್ನಾಯ ಪೊಲ್ಕಾನಾ ಎಸ್ಟೇಟಿನಲ್ಲಿ ಬಾಲ್ಯ ಕಳೆದನು. ಸೈನ್ಯ ಹಾಗೂ ಸಿವಿಲ್ ಆಡಳಿತ ದಲ್ಲೂ ಸೇವೆ ಸಲ್ಲಿಸಿದ್ದ ಅವನ ತಂದೆ ಹಾಗೂ ತಾಯಿ ಅಕಾಲ ಮರಣ ಹೊಂದಿದರು. ಚಿಕ್ಕಮ್ಮ ಹಾಗೂ ಹಿರಿಯ ಸಹೋದರನ ಆಶ್ರಯದಲ್ಲಿ ಬೆಳೆದ ಟಾಲ್‌ಸ್ಟಾಯ್ ಜರ್ಮನ್ ಮತ್ತು ಫ್ರೆಂಚ್ ಭಾಷೆಗಳನ್ನು ಕಲಿತ.

ಆಟಗಳಲ್ಲಿ ತೋರಿದ ಆಸಕ್ತಿ ಅಧ್ಯಯನದಲ್ಲಿ ಇರಲಿಲ್ಲ. ಮಾಸ್ಕೋದಿಂದ ಎಸ್ಟೇಟ್, ಎಸ್ಟೇಟ್‌ನಿಂದ ಮಾಸ್ಕೋಗೆ ಓಡಾಡುತ್ತ ಕಾಲ ಕಳೆದು ಸ್ವಚ್ಛಾ ಜೀವನ ನಡೆಸಿದ. ಭಾಷಾಶಾಸ್ತ್ರ ಕಷ್ಟವಾಯಿತೆಂದು ಸುಲಭದಲ್ಲಿ ಪಡೆಯಬಹುದಾದ ನ್ಯಾಯಶಾಸ್ತ್ರ ಆರಿಸಿಕೊಂಡನು. ಆದರೆ ಖಾಲಿ ಬುರುಡೆಯ ಅಧ್ಯಾಪಕರ ಪರಿಸರ ನೋಡಿ ಓದನ್ನು ಕೈಬಿಟ್ಟು, 1847ರಲ್ಲಿ ಎಸ್ಟೇಟ್ ಸೇರಿದ. ಐದುವರೆ ಸಾವಿರ ಎಕರೆ ಎಸ್ಟೇಟ್‌ನಲ್ಲಿ ಸುಮಾರು 5600 ಕೆಲಸದಾಳುಗಳ ನಡುವೆ ಕಳೆದ ಸ್ಟೇಚ್ಛಾಜೀವನ ಅವನನ್ನು ವಾಸ್ತವಿಕತೆಯ ಕಡೆ ವಾಲುವಂತೆ ಮಾಡಿತು. ಆಗಿನಿಂದ ಬರೆದಿಡಲಾರಂಭಿಸಿದ ‘ದಿನಚರಿ’ ಮುಂದೆ ಗ್ರಂಥಗಳು ರೂಪುಗೊಳ್ಳಲು ಒಳ್ಳೆಯ ಸಾಮಗ್ರಿಯೊದಗಿಸಿತು.

ಕುಡಿತ, ಕುಣಿತ, ಜೂಜು ಮತ್ತಿತರ ತಾಣಗಳಲ್ಲಿ ಕಾಲ ಕಳೆಯುತ್ತಿದ್ದ ಟಾಲ್ ಸ್ಟಾಯ್‌ನ ಗಮನ ಬೇರೆಡೆ ತಿರುಗಿಸಲು ಅವನ ಸೈನಿಕ ಮಿತ್ರ ಪ್ರಯತ್ನಿಸಿದ. ಸೇನೆಗೆ ಸೇರಿದ ಮೇಲೆ ಹೆಚ್ಚಿನ ಕೆಲಸ ವಿಲ್ಲದುದರಿಂದ ಟಾಲ್‌ಸ್ಟಾಯ್‌ ಗಡಿಯ ಚೆಕ್‌ ಪೋಸ್ಟ್‌ನಲ್ಲಿ ಕೂತು ಬರೆಯಲಾರಂಭಿಸಿದ. ಮೊದಲ ಕೃತಿ ‘ಚೈಲ್ಡ್‌ ಹುಡ್ ಕಾಂಟೆಂಪೊರರಿ’ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟವಾಯಿತು. ಇವನ ಲೇಖನ ಪ್ರತಿಭೆಯನ್ನು ಕಂಡ ವಿದ್ವಾಂಸರು ನಿಬ್ಬೆರಗಾದರು. ಇದಾದ ಎರಡು ವರ್ಷಗಳಲ್ಲಿ ಅಂದರೆ 1854ರಲ್ಲಿ ‘ಬಾಯ್‌ಹುಡ್’ ನಂತರ ಅನೇಕ ಯುದ್ಧದ ಕತೆಗಳು ಹೊರಬಂದುವು. ಅವುಗಳಲ್ಲಿ ಮುಖ್ಯವಾದುದು ‘ಟೇಲ್ಸ್ ಆಫ್ ಸೆವೆಸೆಟ್ ಪೋಲ್’

1854ರಲ್ಲಿ ಸಂಭವಿಸಿದ ಕ್ರಿಮಿಯ ಕದನದಲ್ಲಿ ರಷ್ಯಾ ಮತ್ತು ಟರ್ಕಿ ಹೋರಾಡಿದುವು. ಟಾಲ್‌ಸ್ಟಾಯ್ ಅನಾರೋಗ್ಯದಿಂದ ವಿಶ್ರಾಂತಿ ಪಡೆದು ನಂತರ ಲೇಖನಗಳನ್ನು ಬರೆಯಲಾರಂಭಿಸಿದ. ಈ ವೇಳೆಯಲ್ಲಿ ಅಂದಿನ ಬರಹಗಾರರಾದ ಟರ್‌-ನಿವ್, ನಿಕ್ರಾಸೋವ್, ಗಾನ್‌ಚಿರೋವ್, ಪೆಟ್ ಮೊದಲಾದವರನ್ನು ಭೇಟಿಯಾದುದು. ಅವರ ಸೋಗಲಾಡಿತನ, ಬೋಳೆತನದ ವಿಮರ್ಶೆ ಮುಖಸ್ತುತಿ ಮಾಡಿ ಹಿಂದೆ ಮಾಡುತ್ತಿದ್ದ ಹೀಯಾಳಿಕೆಗಳಿಂದ ಬೇಸರಗೊಂಡು ಕೃಷಿ ಎಸ್ಟೇಟ್‌ಗೆ ಮರಳಿದ.

1856ರ ಕ್ರಿಮಿಯ ಯುದ್ಧದ ನಂತರ ಅದರ ಅನುಭವಗಳನ್ನು ಕುರಿತು ಬರೆದ, ಯೂರೋಪಿನಾದ್ಯಂತ ಪ್ರವಾಸ ಕೈಗೊಂಡು ಅಲ್ಲಿನ ಜನಜೀವನ, ಸಾಮಾಜಿಕ ಸ್ವಾತಂತ್ರ್ಯ, ರೈತರ ಅಭಿವೃದ್ಧಿ, ಶಿಕ್ಷಣ ವ್ಯವಸ್ಥೆಯನ್ನು ಕುರಿತು ಚಿಂತಿಸಿದ. ಕೊನೆಗೆ ತನ್ನ ಕೃಷಿ ಎಸ್ಟೇಟಿನಲ್ಲಿ ಮಾದರಿ ಶಾಲೆಯನ್ನು ತೆರೆದು ಶಿಕ್ಷಣದಲ್ಲಿ ಹೊಸತನ ತರಲು ಯತ್ನಿಸಿದ.

1862ರಲ್ಲಿ ಸೋಫಿಯಾ ಆಂಡ್ರಿವ್‌ಳನ್ನು ವಿವಾಹವಾದ ಮೇಲೆ ಟಾಲ್‌ಸ್ಟಾಯ್ ಸಾಹಿತ್ಯ ಜೀವನ ದಲ್ಲಿ ಮಹತ್ತರ ಪ್ರಗತಿಯುಂಟಾಯಿತು. ಆರು ವರ್ಷಗಳ ಅವಧಿಯಲ್ಲಿ ತನ್ನ ಮೇರು ಕೃತಿ ‘ವಾ‌ ಅಂಡ್ ಪೀಸ್’ ಬರೆದು ಮುಗಿಸಿದ (1869), 1812ರಲ್ಲಿ ನೆಪೋಲಿಯನ್ ಬೋನಾಪಾರ್ಟೆ ರಷ್ಯಾದ ಮೇಲೆ ಹೂಡಿದ ದಾಳಿಯ ಸಮಯದ ರಷ್ಯಾ ಸಮಾಜದ ಹಿನ್ನಲೆ ಇದರ ಕಥಾವಸ್ತು. ಇತಿಹಾಸ ಬರೀ ನೆಪೋಲಿಯನ್‌ರಂತಹ ಗಣ್ಯವ್ಯಕ್ತಿಗಳಿಂದ ಮಾತ್ರ ಆದುದಲ್ಲ. ಲಕ್ಷಾಂತರ ಸಾಮಾನ್ಯ ಜೀವಿಗಳ ಸುಪ್ತ ಪ್ರಯತ್ನದ ಫಲ ಅದು ಎಂಬ ಅಂಶವನ್ನು ಕಾದಂಬರಿಯಲ್ಲಿ ಎತ್ತಿಹಿಡಿದ. ಹಾಗಾಗಿ ಈ ಕಾದ೦ಬರಿ, ಬದುಕನ್ನು ಬಂದ ಹಾಗೆ, ತಮ್ಮ ಪ್ರಜ್ಞೆಗನುಸಾರ ಸ್ವೀಕರಿಸುವ ಪಾತ್ರಗಳಿಂದ ತುಂಬಿದೆ.

ಟಾಲ್‌ಸ್ಟಾಯ್‌ನ ಸರಿಯಾಗಿ ಬದುಕುವ ಮಾರ್ಗದ ಅನ್ವೇಷಣೆ ಅವನ ಮತ್ತೊಂದು ಕೃತಿ ‘ಅನ್ನಾ ಕರೆನಿನಾ’ದಲ್ಲಿಯೂ ಮುಂದುವರೆಯುತ್ತದೆ. ಪ್ರೇಮ, ಮದುವೆಯ ನೈತಿಕ ಆಧಾರಗಳು, ಸಾವು ಮತ್ತು ಬದುಕಿನ ಪ್ರಶ್ನೆಗಳಿಗೆ ಮತ್ತಷ್ಟು ಉತ್ತರಕ್ಕಾಗಿ ಟಾಲ್‌ಸ್ಟಾಯ್ ಇಲ್ಲಿ ಪ್ರಯತ್ನಿಸುತ್ತಾನೆ. `ಎ ಕನ್‌ಫೆಷನ್’ `ವಾಟ್ ಐ ಬಿಲೀವ್ ಮತ್ತು ‘ವಾಟ್ ದೆನ್ ಮಸ್ಟ್ ವಿ ಡೂ ?’ ಎಂಬ ಮೂರು ಕೃತಿಗಳಲ್ಲಿ ಆತ್ಮಕಥನ ರೂಪುಗೊಂಡಿದೆ.

‘ಆನ್ಕರೆನಿನಾ’ ಕೃತಿಯಲ್ಲಿ ಟಾಲ್‌ಸ್ಟಾಯ್ ಬದುಕಿನಲ್ಲಿ ಬೇಕುಬೇಡಗಳನ್ನು ಕುರಿತು ಚಿಂತಿಸಿದ್ದಾನೆ. ಮೇಲಾಗಿ ಮಾನವನಿಗೆ ಅವನ ಜೀವನದ ಅರ್ಥವೇನು ಎಂದು ತಿಳಿಸುವುದರಲ್ಲಿ ವಿಜ್ಞಾನ ಸಫಲವಾಗಿದೆ ಎಂಬುದನ್ನು ಸೂಚಿಸಲಾಗಿದೆ. ‘ಎ ಕ್ರಿಟಿಸಿಸಮ್ ಆಫ್ ಡಾಗ್ವಾಟಿಕ್ ಥಿಯಾಲಜಿ’, ‘ವಾಟ್ ಈಸ್ ಆರ್ಟ್’, ‘ಯೂನಿಯನ್ ಅಂಡ್ ಟ್ರಾನ್ಸ್‌ ಲೇಷನ್ ಆಫ್ ದಿ ಫೋರ್ ಗಾಸ್ಪೆಲ್ಸ್ ಮೊದಲಾದ ಕೃತಿಗಳು ಟಾಲ್‌ಸ್ಟಾಯ್‌ನನ್ನು ಸಾಹಿತ್ಯ ಕ್ಷೇತ್ರದಲ್ಲಿ

ಉತ್ತುಂಗಶಿಖರಕ್ಕೆ ಕೊಂಡೊಯ್ದಿವೆ. ಧಾರ್ಮಿಕ ಕ್ಷೇತ್ರದಲ್ಲಿ ಚರ್ಚ್ ಹೊಂದಿದ್ದ ಗೊಡ್ಡು ಸಂಪ್ರದಾಯಗಳನ್ನು ಖಂಡಿಸಿದ ಟಾಲ್‌ಸ್ಟಾಯ್ ‘ಆತ್ಮಶುದ್ಧಿಯೇ ಮೋಕ್ಷಕ್ಕೆ ಮಾರ್ಗ’ ಎಂಬುದನ್ನು ಕಂಡುಕೊಂಡನು. ತನ್ನದೇ ಆದ ಧರ್ಮ, ತತ್ವಗಳಿಂದ ಚರ್ಚ್‌ನ ಅವಕೃಪೆಗೆ ಮತ್ತು ತನ್ನದೇ ಆದ ಸಾಮಾಜಿಕ, ರಾಜಕೀಯ ಚಿಂತನೆಗಳಿಂದ ಸರ್ಕಾರದ ಕೋಪಕ್ಕೆ ಕಾರಣನಾದ. ಟಾಲ್‌ಸ್ಟಾಯ್‌ನ ಪ್ರಸಿದ್ದಿ ರಷ್ಯಾದ ಗಡಿಯನ್ನೂ ದಾಟಿ ಜಗತ್ತಿನಾದ್ಯಂತ ಹಬ್ಬಲಾರಂಭಿಸಿತು.

ಮಾಂಸ, ಮದ್ಯ ಮತ್ತು ಹೆಣ್ಣಿನ ಸಂಗ ಬಿಟ್ಟು ಸನ್ಯಾಸಿಯಂತೆ ಬದುಕಲಾರಂಭಿಸಿದ ಟಾಲ್‌ಸ್ಟಾಯ್‌ನ ಕೊನೆಯ 15-20 ವರ್ಷಗಳಲ್ಲಿ ಜನ ಅವನನ್ನು ಪ್ರವಾದಿಯಂತೆ ಕಾಣಲಾರಂಭಿಸಿದರು. ದೇಶ, ವಿದೇಶಗಳಿಂದ ಜನ ಅವನ ದರ್ಶನಕ್ಕಾಗಿ ಯಸ್ನಾಯಾ ಪೊಲ್ಲಾನ ಕೃಷಿ ಕುಠೀರಕ್ಕೆ ಬರಲಾರಂಭಿಸಿದರು. ಹೀಗೆ ಬರುವವರಿಗೆ ಟಾಲ್‌ಸ್ಟಾಯ್‌ ಸಂತನಂತೆ ಕಾಣತೊಡಗಿದ. ಆದರೆ ತನ್ನ ಆಸ್ತಿಯನ್ನೆಲ್ಲ ದೀನದಲಿತರಲ್ಲಿ ಹಂಚಿ ಮನೆಯವರಿಗೆ ದುಷ್ಟನಾಗಿ ಕಂಡ, ಹೆಂಡತಿ ಸೋಫಿಯ ಮಕ್ಕಳೊಂದಿಗೆ ದೂರವಾದಳು.

ಕೊನೆಗೆ ತನ್ನ ಮೆಚ್ಚಿನ ಮಗಳು ಅಲೆಕ್ಸಾಂಡ್ರಿಯಳೊಡನ ಮನೆ ಬಿಟ್ಟು ಹೊರಟ ಟಾಲ್‌ಸ್ಟಾಯ್ ಸಂಸಾರದ ಜಂಜಾಟದಿಂದ ದೂರವಿರ ಬಯಸಿದ. ಹೀಗೆ ಹೊರಟವನು ಮಾರ್ಗಮಧ್ಯದಲ್ಲಿ ಅಸ್ಟ್‌ ಪೋನ್‌ ರೈಲ್ವೆ ಮಾಸ್ಟರನ ಮನೆಯಲ್ಲಿ ಕಾಲವಾದ. ಅವನ ಸಾಮಾಜಿಕ ಸುಧಾರಣೆಗಳು ಹೆಚ್ಚು ಪ್ರಚುರಗೊಳ್ಳಲಿಲ್ಲ. ಮಹಾತ್ಮ ಗಾಂಧಿಜೀ ಯನ್ನು ಬಿಟ್ಟರೆ ಇವನ ಸಾಹಿತ್ಯ ಅಭ್ಯಸಿಸಿ ಪ್ರಭಾವಿತರಾದವರು ಅತಿ ವಿರಳ.

Leave a Reply

Your email address will not be published. Required fields are marked *