Breaking News

How to return multiple - duplicate PAN Card

ನಕಲಿ ಪಾನ್ ಕಾರ್ಡ್ ಇದ್ದಾರೆ ಹಿಂದಿರುಗಿಸುವುದು ಹೇಗೆ?

ನಕಲಿ ಪಾನ್ ಕಾರ್ಡ್ ಇದ್ದಾರೆ ಹಿಂದಿರುಗಿಸುವುದು ಹೇಗೆ? | How to return multiple/duplicate PAN Card

ಪಾನ್ [permanent account number] ಎಂಬುದು ಹತ್ತು ಅಕ್ಷರಗಳ ಆಲ್ಫಾನ್ಯೂಮರಿಕ್ ಐಡೆಂಟಿಫೈಯರ್ ಫೌಂಡೇಶನಲ್ ಐಡಿಯಾಗಿದ್ದು, ಭಾರತೀಯ ಆದಾಯ ತೆರಿಗೆ ಇಲಾಖೆಯಿಂದ “PAN ಕಾರ್ಡ್” ನೀಡಲಾಗುತ್ತದೆ. ಭಾರತೀಯ ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಿಂದ ಇ-ಪ್ಯಾನ್ ಎಂದು ಕರೆಯಲ್ಪಡುವ PDF ಫೈಲ್‌ನ ರೂಪದಲ್ಲಿಯೂ ಇದನ್ನು ಪಡೆಯಬಹುದು. ಪ್ಯಾನ್ ಕಾರ್ಡ್ ಒಂದು ಅವಶ್ಯಕವಾದ ದಾಖಲೆಯಾಗಿದೆ. ಆದಾಯ ತೆರಿಗೆ ಪಾವತಿಗೆ “PAN ಕಾರ್ಡ್” ಅತ್ಯಾವಶ್ಯಕವಾಗಿದೆ.

ಭಾರತೀಯ ಆದಾಯ ತೆರಿಗೆ ಕಾಯಿದೆ ಆಕ್ಟ್ [Indian Income Tax], 1961 ರ ಅಡಿಯಲ್ಲಿ ಗುರುತಿಸಬಹುದಾದ ಎಲ್ಲಾ ನ್ಯಾಯಾಂಗ ಘಟಕಗಳಿಗೆ PAN ಒಂದು ಅನನ್ಯ ಗುರುತಿಸುವಿಕೆಯಾಗಿದೆ. ಆದಾಯ ತೆರಿಗೆ ಪ್ಯಾನ್ ಮತ್ತು ಅದರ ಲಿಂಕ್ ಕಾರ್ಡ್ ಅನ್ನು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139A ಅಡಿಯಲ್ಲಿ ನೀಡಲಾಗುತ್ತದೆ. ಇದನ್ನು ಭಾರತೀಯ ಆದಾಯ ತೆರಿಗೆ ಇಲಾಖೆಯು ನೇರ ತೆರಿಗೆಗಳ ಕೇಂದ್ರ ಮಂಡಳಿಯ (CBDT) ಮೇಲ್ವಿಚಾರಣೆಯಲ್ಲಿ ನೀಡಲಾಗುತ್ತದೆ ಮತ್ತು ಇದು ಗುರುತಿನ ಪ್ರಮುಖ ಪುರಾವೆಯಾಗಿಯೂ ಕಾರ್ಯನಿರ್ವಹಿಸುತ್ತದೆ.

ಮಾನ್ಯವಾದ ವೀಸಾಕ್ಕೆ ಒಳಪಟ್ಟಿರುವ ವಿದೇಶಿ ಪ್ರಜೆಗಳಿಗೆ (ಉದಾಹರಣೆಗೆ ಹೂಡಿಕೆದಾರರಿಗೆ) ಸಹ ಇದನ್ನು ನೀಡಲಾಗುತ್ತದೆ ಮತ್ತು ಆದ್ದರಿಂದ ಭಾರತೀಯ ಪೌರತ್ವದ ಪುರಾವೆಯಾಗಿ PAN ಕಾರ್ಡ್ ಅನ್ನು ಸ್ವೀಕರಿಸಲಾಗುವುದಿಲ್ಲ.

ಯಾವುದೇ ಒಬ್ಬ ವ್ಯಕ್ತಿ ಅಥವಾ ಕಂಪನಿ ಒಂದು ಪ್ಯಾನ್ ಕಾರ್ಡ್ ಹೊಂದಿರಲು ಮಾತ್ರ ಅವಕಾಶವಿದೆ. ಹಾಗೆ ತೆರಿಗೆ ಇಲಾಖೆಗೆ ವಂಚನೆ ಮಾಡುವ ಉದ್ದೇಶದಿಂದ ಒಂದಕ್ಕಿಂತ ಹೆಚ್ಚಿನ ಪ್ಯಾನ್ ನಂಬರ್ ಹೊಂದಿದ್ದು ಎರಡು ನಂಬರ್ ಮೂಲಕ ನೀವು ಹಣಕಾಸಿನ ವ್ಯವಹಾರ ನಡೆಸಿದರೆ ಹತ್ತು ಸಾವಿರ ರೂಪಾಯಿಗಳವರೆಗೆ ದಂಡ ಪಾವತಿಸಬೇಕು.

ಆದಾಯ ತೆರಿಗೆ ಇಲಾಖೆ ಈಗಾಗಲೇ ಸೂಚಿಸಿರುವಂತೆ ಯಾರಾದರೂ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹೊಂದಿದ್ದರೆ, ಅದರಲ್ಲಿ ನಕಲಿ ಪ್ಯಾನ್ ಕಾರ್ಡ್ ಅನ್ನು ತಕ್ಷಣವೇ ಸರ್ಕಾರಕ್ಕೆ ಹಿಂತಿರುಗಿಸಬೇಕು ಎಂದು ತಿಳಿಸಲಾಗಿದೆ. ಒಂದು ವೇಳೆ ನಕಲಿ ಪಾನ್ ಕಾರ್ಡ್ ಇನ್ನು ನೀವು ಬಳಸುತ್ತಿದ್ದರೆ ಖಂಡಿತವಾಗಿಯೂ ಇದು ಸಮಸ್ಯೆ ಆಗಬಹುದು.

ಇತ್ತೀಚಿಗೆ ಸಾಕಷ್ಟು ಜನ ನಕಲಿ ಪಾನ್ ಕಾರ್ಡ್ ಅಥವಾ ಎರಡು ಪಾನ್ ಕಾರ್ಡ್ ಹೊಂದಿರುವುದು ಕಂಡುಬಂದಿದೆ. ಎರಡು ಪ್ಯಾನ್ ಕಾರ್ಡ್ ಹೊಂದಿರುವುದು ಕಾನೂನು ಬಾಹಿರ ಎನಿಸಿಕೊಳ್ಳುತ್ತದೆ.

ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 272B ಅಡಿಯಲ್ಲಿ ನಕಲಿ ಪ್ಯಾನ್ ಕಾರ್ಡ್ ಹೊಂದಿರುವವರಿಗೆ 10,000 ದಂಡ ವಿಧಿಸಲಾಗುವುದು ಎಂದು ಆದಾಯ ಇಲಾಖೆ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಇರುವವರು ತಕ್ಷಣವೇ ತಮ್ಮ ಬಳಿ ಇರುವ ಎರಡನೇ ಪ್ಯಾನ್ ಕಾರ್ಡ್ ಅಥವಾ ನಕಲಿ ಪ್ಯಾನ್ ಕಾರ್ಡ್ ಅನ್ನು ಸಂಬಂಧಪಟ್ಟ ಇಲಾಖೆಗೆ ಹಿಂತಿರುಗಿಸಬೇಕು.

ಆನ್ಲೈನ್ ಮೂಲಕ ‘ ಪ್ಯಾನ್ ಕಾರ್ಡ್’ ಹಿಂದಿರುಗಿಸುವುದು ಹೇಗೆ ? | How to return multiple/duplicate PAN Card online

ನಿಮ್ಮ ಬಳಿ ಇರುವ ಎರಡನೇ ಪ್ಯಾನ್ ಕಾರ್ಡನ್ನು ಆನ್ಲೈನ್ online ಮೂಲಕ ಹಾಗೂ ಆಫ್ಲೈನ್ offline ಮೂಲಕ ಇಲಾಖೆಗೆ ಹಿಂತಿರುಗಿಸಬಹುದಾಗಿದೆ. ಆನ್ಲೈನ್ ಮೂಲಕ ಹಿಂತಿರುಗಿಸುವ ಹಂತಗಳನ್ನು ನೋಡೋಣ.

ಮೊದಲಿಗೆ ಆದಾಯ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
https://www.protean-tinpan.com/faqs/pan/faq-pan-cancellation.html

ಪ್ಯಾನ್ ಕಾರ್ಡ್ ವಿಭಾಗದಲ್ಲಿ ನಿಮ್ಮ ಒರಿಜಿನಲ್ ಪ್ಯಾನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ.

ನಂತರ ಪ್ಯಾನ್ ಕಾರ್ಡ್ ಬದಲಾವಣೆಗೆ ವಿನಂತಿ ಸಲ್ಲಿಸಬೇಕು ಆಗ ನಿಮಗೆ ಫಾರ್ಮ್ ನಂಬರ್ 11 ಲಭ್ಯವಾಗುತ್ತದೆ.

ಫಾರ್ಮ್ ನಂಬರ್ 11 ಅನ್ನು ಭರ್ತಿ ಮಾಡಿ, ನೀವು ಯಾವ ಪ್ಯಾನ್ ಕಾರ್ಡ್ ಅನ್ನು ಹಿಂತಿರುಗಿಸಲು ಬಯಸುತ್ತಿರೋ ಆ ಪ್ಯಾನ್ ಕಾರ್ಡ್ ವಿವರಗಳನ್ನು ನೀಡಬೇಕು.

ಫಾರ್ಮ್ ನಂಬರ್ 11 ರ ಜೊತೆಗೆ ನಿಮ್ಮ ನಕಲಿ ಪ್ಯಾನ್ ಕಾರ್ಡ್ ಸರೆಂಡರ್ ಮಾಡಬಹುದು.

ಆಫ್ಲೈನ್ ಮೂಲಕ ‘ ಪ್ಯಾನ್ ಕಾರ್ಡ್’ ಹಿಂತಿರುಗಿಸುವುದು ಹೇಗೆ ? | How to return multiple/duplicate PAN Card offline

ಇನ್ನು ಆಫ್ಲೈನ್ ಮೂಲಕ ನೀವು ನಕಲಿ ಪಾನ್ ಕಾರ್ಡ್ ಹಿಂತಿರುಗಿಸುವುದಿದ್ದರೆ, ಫಾರ್ಮ್ ನಂಬರ್ 49 A ಭರ್ತಿ ಮಾಡಬೇಕು.

ಭರ್ತಿ ಮಾಡಿದ ಫಾರ್ಮ್ ಜೊತೆಗೆ ನೀವು ಯಾವ ಪ್ಯಾನ್ ಕಾರ್ಡ್ ಸರೆಂಡರ್ ಮಾಡಲು ಹೊರಟಿದ್ದೀಯೋ ಆ ಪಾನ್ ಕಾರ್ಡ್ ವಿವರಗಳನ್ನು ನೀಡಬೇಕು.

ಬಳಿಕ UTI ಅಥವಾ ಎನ್‌ಎಸ್‌ಡಿಎಲ್ ಟಿನ್ ಫೆಸಿಲಿಟೇಶನ್ ಸೆಂಟರ್‌ಗೆ ನೀವು ಭರ್ತಿ ಮಾಡಿದ ಫಾರ್ಮ್ ಜೊತೆಗೆ ನಕಲಿ ಪ್ಯಾನ್ ಕಾರ್ಡ್ ಹಿಂತಿರುಗಿಸಬೇಕು.

ಇನ್ನು https://www.incometaxindiaefiling.gov.in/ ಈ ವೆಬ್ಸೈಟ್ನಲ್ಲಿ ನಿಮ್ಮ ಹತ್ತಿರದ ಮೌಲ್ಯಮಾಪನ ಅಧಿಕಾರಿ ಬಗ್ಗೆ ಮಾಹಿತಿ ಸಿಗುತ್ತದೆ. ಅದನ್ನು ತಿಳಿದುಕೊಂಡು ಅವರಿಗೆ ನೀವು ನಿಮ್ಮ ಪ್ಯಾನ್ ಕಾರ್ಡ್ ಸರೆಂಡರ್ ಮಾಡಬಹುದು.

Leave a Reply

Your email address will not be published. Required fields are marked *