Breaking News

Mustafa Kemal Pasha biography in Kannada

ಮುಸ್ತಫ ಕೆಮಾಲ್ ಪಾಷಾ ಆಟಾಟರ್ಕ್ ಜೀವನ ಚರಿತ್ರೆ – Mustafa Kemal Pasha Biography in Kannada

ಮುಸ್ತಫ ಕೆಮಾಲ್ ಪಾಷಾ ಆಟಾಟರ್ಕ್ ಜೀವನ ಚರಿತ್ರೆ – Mustafa Kemal Pasha Biography in Kannada

ಮುಸ್ತಫ ಕೆಮಾಲ್ ಪಾಷಾ ಆಟಾಟರ್ಕ್ [Mustafa Kemal Atatürk or Mustafa Kemal Pasha] ಆಧುನಿಕ ಟರ್ಕಿಯ ನಿರ್ಮಾತೃ, ಸಾಧಾರಣ ಕುಟುಂಬ ವೊಂದರಲ್ಲಿ ಜನಿಸಿದ ಇವನು ಜೀವನೋಪಾಯಕ್ಕಾಗಿ ಸೇನಾವೃತ್ತಿ ಆರಂಭಿಸಿ ತನ್ನ ಸ್ವಸಾಮರ್ಥ್ಯದಿಂದ ಮೇಲೇರುತ್ತಾ ಬಂದು ಟರ್ಕಿಯ ಅಧ್ಯಕ್ಷನಾಗಿ ಅದರ ಇತಿಹಾಸದ ದಿಕ್ಕನ್ನೇ ಬದಲಿಸಿದ ಅಮರ ಸೇನಾನಿ, ಯುದ್ಧ ಚತುರ, ರಾಜಕೀಯ ಮುತ್ಸದ್ದಿ, ಆಡಳಿತ ವಿಚಕ್ಷಣ, ಸಮಯಪ್ರಜ್ಞೆಯುಳ್ಳ ಸಾಹಸಿ, ಅಪಾರ ಸಾಮರ್ಥ್ಯವುಳ್ಳ ಗಟ್ಟಿಗ : ಮೇಲಾಗಿ ಸ್ವಾಭಿಮಾನಿ ಮತ್ತು ಛಲಗಾರ, ಕಂದಾಚಾರದಲ್ಲಿ ಮುಳುಗಿದ್ದ ಟರ್ಕಿ ಇವನ ನೇತೃತ್ವದಲ್ಲಿ ಆಧುನಿಕ ರಾಷ್ಟ್ರವಾಗಿ ತಲೆ ಎತ್ತಿ ವಿಶ್ವಮಾನ್ಯ ಪಡೆಯುವಂತಾದುದು ಇವನ ಅವಿರತ ಶ್ರಮದ ಫಲ.

ಕೆಮಾಲ್ ಪಾಷಾ ಸಲೋನಿಕ ಎಂಬಲ್ಲಿ 1881ರಲ್ಲಿ ಒಂದು ಸಾಧಾರಣ ಸಂಪ್ರದಾಯಸ್ಥ ರೈತ ಕುಟುಂಬದಲ್ಲಿ ಜನಿಸಿದನು. ಅಲಿಂಝಾ ಮತ್ತು ಝಬೇದಾ ಇವನ ತಂದೆ-ತಾಯಂದಿರು. ಸೈನಿಕ ಶಾಲೆಯಲ್ಲಿ ಶಿಕ್ಷಣ ಪಡೆದ ಇವನ ಮೆಚ್ಚಿನ ವಿಷಯಗಳು : ಗಣಿತ ಮತ್ತು ಇತಿಹಾಸ, ಚಿಕ್ಕಂದಿನಲ್ಲಿ ತನ್ನ ದೇಶದ ದುಃಸ್ಥಿತಿಯನ್ನು ಕಂಡು ಚಿಂತಿಸಿದ್ದ.

ಸುಲ್ತಾನ ಎರಡನೇ ಅಬ್ದುಲ್ ಹಮೀದ್‌ನ ದುರಾಡಳಿತದಿಂದ ದೇಶ ಅಧೋಗತಿಯತ್ತ ಸಾಗಿತ್ತು. ಕಾನ್‌ಸ್ಟಾಂಟಿ ನೋಪಲ್‌ನಲ್ಲಿ ಅಧ್ಯಯನ ಮಾಡುವಾಗ ಕ್ರಾಂತಿಕಾರಿಗಳ ‘ಮಾತೃಭೂಮಿ’ ಅಥವಾ ವತನ್ ಎಂಬ ರಹಸ್ಯ ಸಂಘದ ಸಂಪರ್ಕ ಪಡೆದು ಕ್ರಾಂತಿಕಾರಿ ಭಾವನೆ ಬೆಳೆಸಿಕೊಂಡನು. ಸೈನ್ಯಾಧಿಕಾರಿಯಾಗಿದ್ದು ಕೊಂಡು ಸೇನೆ ಹಾಗೂ ಜನತೆಯಲ್ಲಿ ದೇಶದ ಉಳಿವಿನ ಬಗ್ಗೆ ಹೋರಾಡುವ ಮನೋಭಾವ ತುಂಬಿ ದನು.

ಕೊನೆಗೆ 1908ರಲ್ಲಿ ಯಂಗ್ ಟರ್ಕರು ನಡೆಸಿದ ಕ್ರಾಂತಿ ಯಶಸ್ವಿಯಾಗಲು ಇವನ ಹತೋಟಿ ಯಲ್ಲಿದ್ದ ಸೈನ್ಯದ ಸಹಕಾರವೂ ಕಾರಣವಾಯಿತು. ಐದನೇ ಹಮೀದನನ್ನು ನಾಮಮಾತ್ರ ಸುಲ್ತಾನ ನ್ನಾಗಿಸಿಕೊಂಡ ಯಂಗ್ ಟರ್ಕ್ಸ್ ಆಡಳಿತ ಸೂತ್ರ ಹಿಡಿಯಿತು. ನಂತರ ಕೆಮಾಲ್‌ ನೇತೃತ್ವದಲ್ಲಿ ಸ್ವಾಪಿತವಾದ “ರಾಷ್ಟ್ರೀಯ ಪಕ್ಷ’ ಜನರ ಬೆಂಬಲ ಗಳಿಸುವಲ್ಲಿ ಸಫಲವಾಯಿತು. ಕೊನೆಗೆ ಸುಲ್ತಾನ ಜನರ ವಿರೋಧ ತಾಳಲಾರದೆ ಓಡಿಹೋಗಬೇಕಾಯಿತು. ವಿರೋಧಿಗಳನ್ನೆಲ್ಲ ಹತ್ತಿಕ್ಕಿದ. ನಂತರ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಇದರ ಸಾಧನೆಯಲ್ಲಿ ಕಮಾಲ್ ಪಾಷಾನ ಶ್ರಮ ಅವಿರತವಾದು ದಾಗಿತ್ತು. ಇದನ್ನು ಪರಿಗಣಿಸಿದ ಜನತೆ 1923ರ ಅಕ್ಟೋಬರ್ 29ರಂದು ಕಮಾಲನ್ನು ಅಧ್ಯಕ್ಷನನ್ನಾಗಿ ಚುನಾಯಿಸಿ ಟರ್ಕಿಯಲ್ಲಿ ಗಣರಾಜ್ಯವನ್ನು ಸ್ಥಾಪಿಸಿತು. ಅಂದಿನಿಂದ ತಾನು 1938ರಲ್ಲಿ ಕಾಲವಾಗುವ ವರೆಗೂ ಇವನು ಅದರ ಅಧ್ಯಕ್ಷನಾಗಿದ್ದನು.

ಕಮಾಲ್‌ ತಂದ ಸುಧಾರಣೆಗಳು

ಮೊದಲನೆಯ ಮಹಾಯುದ್ಧ ಮುಕ್ತಾಯವಾದಾಗ ಟರ್ಕಿಯ ಪರಿಸ್ಥಿತಿ ಕಠಿಣವಾಗಿದ್ದಿತು. ಇದರ ಹಿನ್ನೆಲೆಯಲ್ಲಿ ದೇಶದ ಪುನರ್‌ ನಿರ್ಮಾಣಕಾರ್ಯವನ್ನು ಕೈಗೊಂಡು ಆರು ೧ಶಗಳ ತನ್ನ ಸಿದ್ಧಾಂತ ವನ್ನೇ ರೂಪಿಸಿದನು. ಅವು :

1. ಜಾತ್ಯಾತೀತತೆ (Secularism)
2. ಗಣತಂತ್ರ (Republicanism)
3. ಸಮಾನತೆ (Equality)
4. ಎಟಾಟಿ (Esmetati)
5. ರಾಷ್ಟ್ರೀಯತೆ (Nationalism)
6. ಕ್ರಾಂತೀಯತೆ (Revolutionalism)

ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಇವನು ರೂಪಿಸಿದ ತತ್ವಗಳನ್ನು ಅನುಷ್ಠಾನದಲ್ಲಿ ತರಲು ಕಮಾಲ್ ಹೂಡಿದ ಚಳವಳಿಯನ್ನು ಕೆಮಾಲಿಸ್ಟ್ ಚಳುವಳಿ ಎಂದು ಕರೆಯುತ್ತಾರೆ.

ಧರ್ಮವನ್ನು ರಾಜ್ಯದಿಂದ ಪ್ರತ್ಯೇಕಿಸಿ ಜಾತ್ಯತೀತ ತತ್ವವನ್ನು ಅಳವಡಿಸಿಕೊಂಡನು. ಏಕೆಂದರೆ ಆಧುನೀಕರಣದ ಸಾಧನೆಯಲ್ಲಿ ಅಂಧಾನುಕರಣೆಯ ಧಾರ್ಮಿಕ ಮುಖಂಡರ ಅನವಶ್ಯ ಮಧ್ಯೆ ಪ್ರವೇಶವಿದ್ದಿತು. ಮೇಲಾಗಿ ಅವರು ಆಧುನಿಕತೆಯ ವಿರೋಧಿಗಳು. ಪರಿಣಾಮವಾಗಿ 1924ರಲ್ಲಿ ಶಾಸನ ಜಾರಿಯಾಗಿ ಧಾರ್ಮಿಕ ದಂಡಾಧಿಕಾರವುಳ್ಳ ಖಲೀಫನನ್ನು ಮತ್ತು ಧಾರ್ಮಿಕ ಪುದುವಟ್ಟು ನಿಧಿಯಾದ ವಕ್ಸ್ ಪ್ರತಿಷ್ಠಾನವನ್ನು ರದ್ದುಗೊಳಿಸಲಾಯಿತು. ಎಲ್ಲ ಶಿಕ್ಷಣ ಸಂಸ್ಥೆಗಳನ್ನು ಧಾರ್ಮಿಕ ಸಂಸ್ಥೆಯ ಹತೋಟಿಯಿಂದ ಮುಕ್ತಗೊಳಿಸಿ ಅವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಮೇಲ್ವಿಚಾರಣೆಗೆ ವಹಿಸಲಾಯಿತು. ಸಿವಿಲ್ ಮತ್ತು ಕ್ರಿಮಿನಲ್‌ ಹಾಗೂ ಕಮರ್ಷಿಯಲ್ ಕಾಯಿದ ಗಳನ್ನು ಜಾರಿಮಾಡಿ ಷರಿಯತ್ ಲಾ ಕೋರ್ಟ್‌ಗಳನ್ನು ರದ್ದು ಪಡಿಸಲಾಯಿತು.

1924ರ ಏಪ್ರಿಲ್ ಇಪ್ಪತ್ತರಂದು ಹೊಸ ರಾಜ್ಯಾಂಗವನ್ನು ಅಳವಡಿಸಿಕೊಳ್ಳಲಾಯಿತು. ವಾಕ್ ಸ್ವಾತಂತ್ರ್ಯ, ಮುದ್ರಣ ಸ್ವಾತಂತ್ರ್ಯ ಮೊದಲಾದ ಮೂಲಭೂತ ಹಕ್ಕುಗಳು ಜನತೆಗೆ ಪ್ರಾಪ್ತವಾದುವು. ವರ್ಣಭೇದವನ್ನು ತೊಡೆದುಹಾಕಿ ಗಣರಾಜ್ಯದ ಎಲ್ಲ ನಾಗರಿಕರೂ ಟರ್ಕರೇ ಎಂಬುದಾಗಿ ಘೋಷಿಸ ಲಾಯಿತು. ಟರ್ಕಿ ಭಾಷೆ ರಾಷ್ಟ್ರಭಾಷೆಯಾಯಿತು. ಇಲ್ಲಿಯವರೆಗೂ ಅಲ್ಲಾನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದ ಪದ್ಧತಿಯನ್ನು ಕೈಬಿಡಲಾಯಿತು.

ಕೆಮಾಲ್ ಪಾಪಾ ಜಾರಿ ಮಾಡಿದ ಕಾನೂನುಗಳಿಂದಾಗಿ ಇಲ್ಲಿನವರೆಗೂ ಟರ್ಕರು ಧರ್ಮದ ಅಂಧಾನುಕರಣೆಯಲ್ಲಿ ಅನುಭವಿಸಿದ ಅಸಮಾನತೆ ತೊಡೆದುಹಾಕುವುದು ಸಾಧ್ಯವಾಯಿತು. ಚುನಾವಣೆ ಗಳಲ್ಲಿ ಮತ ಚಲಾಯಿಸುವ ಹಕ್ಕು ಸ್ತ್ರೀಯರಿಗೆ ಮೊತ್ತಮೊದಲ ಬಾರಿಗೆ ಈಗ ಪ್ರಾಪ್ತವಾಯಿತು. ಇದೇ ವರ್ಷ ಹನ್ನೆರಡನೇ ಅಂತರರಾಷ್ಟ್ರೀಯ ಸ್ತ್ರೀ ಒಕ್ಕೂಟದ ಮಹಾಸಮ್ಮೇಳನ ಕೂಡ ಟರ್ಕಿಯಲ್ಲಿ ಜರುಗಿತು.

ಎಸ್ಕೆಟಾಟಿ ಎಂದರೆ ರಾಜ್ಯದ ಒಡೆತನದ ಹತೋಟಿಯಲ್ಲಿ ಆರ್ಥಿಕಾಭಿವೃದ್ಧಿ ಎಂದರ್ಥ. ದೇಶದ ಪ್ರಗತಿಗೆ ಆರ್ಥಿಕ ಬೆಳವಣಿಗೆಯೇ ಬೆನ್ನೆಲುಬು, ಆದರೆ ಟರ್ಕಿಯಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮಗೊಂಡಿರಲಿಲ್ಲ. ಕೃಷಿ, ಕೈಗಾರಿಕೆ, ವ್ಯಾಪಾರ, ವಾಣಿಜ್ಯ, ಬ್ಯಾಂಕಿಂಗ್, ಗಣಿ ಮೊದಲಾದ ಉದ್ಯಮಗಳಲ್ಲಿ ಟರ್ಕರನ್ನು ತರಬೇತುಗೊಳಿಸುವ ಕಾರ್ಯಕ್ರಮ ರೂಪಿಸಲಾಯಿತು. ‘ದಿ ಸುಮ‌ ಬ್ಯಾಂಕ್’, ‘ದಿ ಮಾರಿಟೈಮ್ ಬ್ಯಾಂಕ್’ ಮೊದಲಾದ ಬ್ಯಾಂಕುಗಳು ಜನ್ಮತಾಳಿದುವು, ವ್ಯಾಪಾರ, ವಾಣಿಜ್ಯ, ಸಾರಿಗೆ ಮತ್ತು ಹಡಗು ನಿರ್ಮಾಣ, ಹತ್ತಿಗಿರಣಿ, ಲೋಹ ಕಾರ್ಖಾನೆಗಳ ಸ್ಥಾಪನೆ, ಕೃಷಿ ಅಭಿವೃದ್ಧಿ ಮೊದಲಾದ ಕ್ಷೇತ್ರಗಳಿಗೆ ಬ್ಯಾಂಕ್‌ಗಳು ನೆರವು ನೀಡಿದುವು. ಕೃಷಿ ಬ್ಯಾಂಕುಗಳನ್ನು ಸ್ಥಾಪಿಸಿ ರೈತರಿಗೆ ಸಾಲದ ನೆರವು ನೀಡಿ ಲೇವಾದೇವಿಗಾರರ ಹಿಡಿತದಿಂದ ಅವರನ್ನು ಮುಕ್ತಗೊಳಿಸಲಾಯಿತು.

1924ರಲ್ಲಿ ಅಂಕಾರ-ಸಿವಾಸ್ ರೈಲ್ವೆ ನಿರ್ಮಾಣಕಾರ್ಯ ಆರಂಭಗೊಂಡಿತು. ಬರ್ಲಿನ್-ಬಾಗ್ದಾದ್ ರೈಲ್ವೆ (ಜರ್ಮನಿಯಿಂದ) ಮತ್ತು ಮರ್ಸಿನ್-ಏಡನ್ ರೈಲ್ವೆಗಳನ್ನು ಕೊಂಡುಕೊಳ್ಳಲಾಯಿತು. ಟರ್ಕರಲ್ಲಿ ರಾಷ್ಟ್ರೀಯತೆ ಬೆಳೆದುಬಂದುದು ಬಹು ನಿಧಾನವಾಗಿಯೇ ಎನ್ನಬಹುದು. ದೇಶದ ಪ್ರಾಚೀನ ಭವ್ಯ ಪರಂಪರೆಯ ಬಗ್ಗೆ ಸಂಶೋಧನೆ ಹಾಗೂ ಗ್ರಂಥ ಪ್ರಕಟಣೆ ಕಾರ್ಯ ಭರದಿಂದ ಸಾಗಿತು. ಇದು ಟರ್ಕರಲ್ಲಿ ಸ್ವಾಭಿಮಾನ ಹಾಗೂ ಪ್ರಾಚೀನತೆಯ ಬಗ್ಗೆ ಗೌರವವನ್ನು ಮೂಡಿಸಿತು. ಟರ್ಕಿ ಭಾಷೆ ರಾಷ್ಟ್ರೀಯ ಭಾಷೆಯಾಗಿ ಸ್ವೀಕೃತವಾಯಿತು. ಇದು ಟರ್ಕರೆಲ್ಲರನ್ನೂ ಒಂದೆಡೆ ಒಗ್ಗೂಡಿಸುವ ಕೊಂಡಿಯಾಯಿತು. ಇಸ್ತಾನ್‌ಬುಲ್‌ದಾರ್-ಉಲ್-ಫುನುಮ್ ವಿಶ್ವವಿದ್ಯಾನಿಲಯವನ್ನು (1993ರಲ್ಲಿ ಟರ್ಕಿಷ್ ವಿಶ್ವವಿದ್ಯಾನಿಲಯವನ್ನಾಗಿ ಮಾರ್ಪಡಿಸಲಾಯಿತು) ಸ್ಥಾಪಿಸಲಾಯಿತು.

ಕೆಮಾಲ್ ಪಾಷಾನ ಮತ್ತೊಂದು ತತ್ವಕ್ರಾಂತಿ, ಕಂದಾಚಾರದಲ್ಲಿ ಮುಳುಗಿದ್ದ ಟರ್ಕಿಯನ್ನು ಆಧುನಿಕ ರಾಷ್ಟ್ರವನ್ನಾಗಿ ಮಾಡುವುದು, ಅಸಮರ್ಥ ಸುಲ್ತಾನನನ್ನು ಬದಿಗೊತ್ತುವುದು, ವಿದೇಶೀಯ ರನ್ನು ದೇಶದಿಂದ ಕಾಲೆಗೆಸುವುದು ಮೊದಲಾದ ಧೈಯಗಳನ್ನು ಹೊಂದಿದ ಕೆಮಾಲ್ ಪಾಷಾನಿಗೆ ಬದಲಾವಣೆ ಅನಿವಾರ್ಯವಾಗಿದ್ದಿತು. ಈ ಬದಲಾವಣೆ ಮಂದಗತಿಯಲ್ಲಿ ಆಗುವುದು ಬೇಕಿರಲಿಲ್ಲ. ಶೀಘ್ರದಲ್ಲಿ ಆಗಬೇಕಿದ್ದಿತು. ಏಕೆಂದರೆ ಸಂಪ್ರದಾಯಶರಣರಿಂದ ಅಡ್ಡಿ ಆತಂಕಗಳಿದ್ದುವು. ಆದರೂ ಬದಲಾವಣೆಯನ್ನು ತಂದು ಆಧುನಿಕ ಟರ್ಕಿಯ ಪಿತಾಮಹ ಅಥವಾ ಅಟಾಟರ್ಕ್ ಎಂಬುದಾಗಿ ಪ್ರಸಿದ್ಧನಾದನು.

Leave a Reply

Your email address will not be published. Required fields are marked *