Breaking News

Florence Nightingale biography in Kannada - ಫ್ಲಾರೆನ್ಸ್ ನೈಟಿಂಗೇಲ್ ಜೀವನ ಚರಿತ್ರೆ

ಫ್ಲಾರೆನ್ಸ್ ನೈಟಿಂಗೇಲ್ ಜೀವನ ಚರಿತ್ರೆ – Florence Nightingale Biography in Kannada

ಫ್ಲಾರೆನ್ಸ್ ನೈಟಿಂಗೇಲ್ ಜೀವನ ಚರಿತ್ರೆ – Florence Nightingale Biography in Kannada

ವಿಶ್ವವಿಖ್ಯಾತ ದಾದಿ (Nurse) ಫ್ಲಾರೆನ್ಸ್ ನೈಟಿಂಗೇಲ್ [Florence Nightingale] 19ನೇ ಶತಮಾನ ರೂಪಿಸಿದ ಅನೇಕ ಜಗದ್‌ ವಿಖ್ಯಾತರಲ್ಲಿ ಓರ್ವಳಾಗಿದ್ದಾಳ. ಆರಿಸಿಕೊಂಡ ವೃತ್ತಿ ಮಹತ್ವದ್ದೇನಲ್ಲವೆನಿಸಿದರೂ, ಅದಕ್ಕೊಂದು ಹೊಸ ಆಯಾಮ ಮತ್ತು ಗೌರವ ಹಾಗೂ ಶ್ರೇಷ್ಠತೆ ಯನ್ನು ತಂದುಕೊಟ್ಟವಳು ನೈಟಿಂಗೇಲ್, ಅನ್ಯರ ಸೇವೆಯಲ್ಲಿ ನಿರರ್ಥಕ ಬದುಕನ್ನು ಸಾರ್ಥಕಪಡಿಸಿಕೊಂಡ ಮಹಾನ್ ಚೇತನ.

1820ರಲ್ಲಿ ಇಟಲಿಯ ಫ್ಲಾರೆನ್ಸ್‌ನಲ್ಲಿ ಹುಟ್ಟಿದ ಫ್ಲಾರೆನ್ಸ್ ನೈಟಿಂಗೇಲಳ ತಂದೆತಾಯಂದಿರು ಇಂಗ್ಲೆಂಡಿನಲ್ಲಿ ಪ್ರತಿಷ್ಠಿತ ಶ್ರೀಮಂತರು. ತಾವು ಹೊಂದಿದ್ದ ಪ್ರತಿಷ್ಠೆ ಗೌರವಾನ್ವಿತ ಸ್ಥಾನ ಮಾನ, ಐಷಾರಾಮದ ಬದುಕು ತನ್ನ ಮಗಳದೂ ಆಗಬೇಕೆಂದು ಅವರು ಆಶಿಸಿದ್ದರು. ಆದರೆ ಚಿಕ್ಕಂದಿನಲ್ಲೆ ತಮ್ಮ ಮಗಳು ಅಂತಹುದನ್ನು ಕ್ಷುಲ್ಲಕವೆಂದು ಪರಿಗಣಿಸುತ್ತಿದ್ದುದನ್ನು ಗಮನಿಸಿದ್ದರು.

ಸಾರ್ವಜನಿಕ ಪಾನಕೂಟಗಳು ಮತ್ತು ವೈಭವೋಪೇತ ಸಮಾರಂಭಗಳ ಕುಣಿತ ನೈಟಿಂಗೇಲಳಿಗೆ ಒಗ್ಗದ ವಿಚಾರವಾದುವು. ಆ ಸಮಯವನ್ನು ಅಸಹಾಯಕರ ಉದ್ಧಾರದಲ್ಲಿ ತೊಡಗಿಸಿಕೊಳ್ಳಬಾರದೇಕೆ ? ಎ೦ಬುದು ಅವಳ ನಿಲುವು. ಅಂತಹ ಬದುಕು ದಾದಿಯರಲ್ಲಿ ಕಂಡು ಕೊಂಡ ಇವಳು ತನ್ನ ಗಮನ ಆ ಕಡೆ ಹರಿಸತೊಡಗಿದಳು.

ಆದರೆ ಆ ಕಾಲದಲ್ಲಿ ಕೆಳದರ್ಜೆಯ, ಕುಡಿತದ ಚಟವಿರುವ ನಿರ್ಲಜ್ಜ ಹೆಂಗಸರ ವೃತ್ತಿ ಅದೆಂದು ನೈಟಿಂಗೇಲಳ ತಂದೆ ತಾಯಂದಿರು ಭಾವಿಸಿದ್ದರು. ಆದ್ದರಿಂದ ಅವಳ ಆಸಕ್ತಿಯನ್ನು ಬೇರೆಡೆಗೆ ಎಳೆಯಲು ಪ್ರಯತ್ನಿಸಿದರು. ಈ ಉದ್ದೇಶದಿಂದಲೇ ಅವಳನ್ನು ರೋಮ್ ಪ್ರವಾಸಕ್ಕೆ ಕಳುಹಿಸಿಕೊಟ್ಟರು. ಆದರೆ ವಿಧಿಯ ವಿಚಿತ್ರವೊ ಎಂಬಂತೆ ನೈಟಿಂಗೇಲಳು ರೋಮ್‌ನಲ್ಲಿ ಮೊದಲ ಭೇಟಿಯಾದದ್ದೇ ದೀನದಲಿತರ ಏಳಿಗೆಗಾಗಿ ಶ್ರಮಿಸುತ್ತಿದ್ದ ರೋಮನ್ ಕ್ಯಾಥೋಲಿಕ್ ದಾದಿಯರನ್ನು (Sisters).

ಒಂದು ವಾರಕ್ಕೂ ಹೆಚ್ಚು ಸಮಯ ಅವರೊಡನೆ ಕಾಲ ಕಳೆದ ಮೇಲೆ ಆ ವೃತ್ತಿಯಲ್ಲಿ ತರಬೇತಿ ಪಡೆಯುವ ನಿರ್ಧಾರ ಮಾಡಿದಳು. ಆದರೆ ಅದಕ್ಕೆ ತಂದೆತಾಯಿಗಳ ವಿರೋಧ ಎದುರಿಸಬೇಕಾಯಿತು. ಕೊನೆಗೂ ಜರ್ಮನಿಯ ಕೈಸರ್‌ವರ್ತ್‌ನಲ್ಲಿ ಪಾದ್ರಿಯೋರ್ವ ನಡೆಸುತ್ತಿದ್ದ ಅಂತಹ ತರಬೇತಿ ಶಾಲೆಯನ್ನು ಸೇರುವಲ್ಲಿ ಯಶಸ್ವಿಯಾದಳು. ಯಾರ ವಿರೋಧವನ್ನು ಲೆಕ್ಕಿಸದೆ ಆ ನಿರ್ಧಾರ ಕೈಗೊಂಡಿದ್ದಳು.

ಜರ್ಮನಿಯಲ್ಲಿ ತರಬೇತಿ ಮುಗಿಸಿದ ನೈಟಿಂಗೇಲ್ ಇಂಗ್ಲೆಂಡಿಗೆ ಹಿಂತಿರುಗಿ ‘ಎಸ್ಟಾಬ್ಲಿಷ್‌ಮೆಂಟ್ ಫಾರ್ ಜಂಟಲ್ ವುಮನ್ ಡ್ಯೂರಿಂಗ್‌ ಇಲ್‌ನೆಸ್’ನಲ್ಲಿ ಸೂಪರಿಂಟೆಂಡೆಂಟ್ ಆಗಿ ಸೇರಿದಳು. ದಾದಿಯರ ಮೇಲ್ವಿಚಾರಣೆ, ಶಸ್ತ್ರಚಿಕಿತ್ಸೆಯಲ್ಲಿ ಸಹಾಯ, ಸಂಸ್ಥೆಯ ಖರ್ಚು ವೆಚ್ಚಗಳ ಲೆಕ್ಕ ಇಡುವುದು ಮೊದಲಾದ ಕೆಲಸಗಳನ್ನು ನಿರ್ವಹಿಸುತ್ತ ಗಟ್ಟಿ, ಜೀವನದ ಅನುಭವ ಗಳಿಸಿದಳು.

ರೋಗಿಗಳ ಶುಶೂಷೆಯಲ್ಲಿ ಮೊದಲು ಅನುಸರಿಸಬೇಕಾದ ಕ್ರಮವೆಂದರೆ ಶುಚಿತನ ಎಂಬುದನ್ನು ತೋರಿಸಿಕೊಟ್ಟಳು. ಅಲ್ಲಿಯವರೆಗೆ ಮುಚ್ಚಿದ ಕೋಣೆಯಲ್ಲಿಡುತ್ತಿದ್ದ ರೋಗಿಗಳಿಗೆ ಶುಭ್ರುಗಾಳಿ, ಬೆಳಕು ಬರದಂತೆ ಕಿಟಕಿಗಳನ್ನು ಮುಚ್ಚುತ್ತಿದ್ದ ಪರಿಪಾಠವನ್ನೇ ಬದಲಿಸಿದಳು. ಇಷ್ಟೇ ಅಲ್ಲದ ಆಸ್ಪತ್ರೆಗಳಲ್ಲಿ ಈಗಿರುವ ಆಧುನಿಕ ಶುಶೂಷಾ ಪದ್ಧತಿಗೆ ಅಡಿಗಲ್ಲು ಹಾಕಿದಳು. ಇವಳು ತಂದ ಈ ಹೊಸ ಮಾರ್ಪಾಡು ಆಸ್ಪತ್ರೆಗಳ ರೋಗಿಗಳಲ್ಲಿ ಕಂಡ ಉಲ್ಲಾಸ ಮತ್ತು ಚೈತನ್ಯ ವೈದ್ಯಕೀಯ ವಲಯದಲ್ಲೇ ಸುದ್ದಿ ಮಾಡಿತು.

1854ರಲ್ಲಿ ರಷ್ಯಾ ಮತ್ತು ಟರ್ಕಿ, ಇಂಗ್ಲೆಂಡ್, ಫ್ರಾನ್ಸ್ ಮೊದಲಾದ ದೇಶಗಳ ನಡುವೆ ಸಂಭವಿಸಿದ ಕ್ರಿಮಿಯ ಕದನ ನೈಟಿಂಗೇಲಳ ಪ್ರತಿಭೆಯ ಪ್ರದರ್ಶನಕ್ಕೊದಗಿದ ಒಂದು ಸವಾಲಿ ನೋಪಾದಿಯ ಸದಾವಕಾಶವಾಯಿತು. ಇದು ಅವಳ ಬದುಕಿನಲ್ಲಿ ಹೊಸ ಅಧ್ಯಾಯಕ್ಕೂ ನಾಂದಿ ಯಾಯಿತೆನ್ನ ಬಹುದು. ಯುದ್ಧದಲ್ಲಿ ಇಂಗ್ಲೆಂಡೇನೋ ಜಯಗಳಿಸಿತು. ಆದರೆ ಗಾಯಾಳುಗಳ ಸ್ಥಿತಿ ಹೇಳಲಸಾಧ್ಯವಾಗಿದ್ದಿತು. ಕಾರಣ ಸಾಕಷ್ಟು ಸಂಖ್ಯೆಯಲ್ಲಿ ವೈದ್ಯರು ಹಾಗೂ ದಾದಿಯರುಗಳಿಲ್ಲದೆ ಗಾಯಾಳುಗಳು ನರಕಸದೃಶ ಯಾತನೆ ಅನುಭವಿಸಬೇಕಾಯಿತು.

ಫ್ರೆಂಚ್ ಸೈನಿಕರಿಗೆ ಈ ತೆರನಾದ ನೋವಿರಲಿಲ್ಲ. ಕಾರಣ ಆ ದೇಶದ ಸಿಸ್ಟರ್ ಆಫ್ ಚಾರಿಟಿಯ ದಾದಿಯರ ಸೇವೆ ಪ್ರಾಪ್ತವಾಗಿದ್ದಿತು. ಈ ಅಂಶವನ್ನು ಪತ್ರಿಕೆಗಳು ಇಂಗ್ಲೆಂಡ್‌ನಲ್ಲಿ ಎತ್ತಿ ತೋರಿದುವು. ಇದರ ಬಿಸಿ ಸರ್ಕಾರಕ್ಕೆ ತಟ್ಟಿತೊ ಬಿಟ್ಟಿತೊ ನೈಟಿಂಗೇಲಳ ಹೃದಯವನ್ನು ಗಾಢವಾಗಿ ಮೀಟಿತು.

ಯುದ್ಧದ ಗಾಯಾಳುಗಳ ಶುಶೂಷೆಗೆ ನರ್ಸ್‌ಗಳ ತಂಡವೊಂದನ್ನು ಕರೆದೊಯ್ಯಲು ಆಕೆ ಸಿದ್ಧಳಾದಳು. ಇದಕ್ಕಾಗಿ ಸರ್ಕಾರದಿಂದ ಒಪ್ಪಿಗೆ ಪಡೆಯಬೇಕಾಗಿತ್ತು, ಯುದ್ಧದ ಕಾರ್ಯದರ್ಶಿ ಸಿಡ್ನಿ ಹರ್ಬಟ್‌ಗೆ ತನ್ನ ಯೋಜನೆಯನ್ನು ಒಪ್ಪಿಸಿದಳು. ನೈಟಿಂಗೇಲ್‌ಳ ಕೋರಿಕೆ ಅಪಾರ ವಿರೋಧ ಎದುರಿಸಿತು. ಸ್ತ್ರೀ ಏನನ್ನಾದರೂ ಸಾಧಿಸಿದರೆ ಅದರ ಬಗ್ಗೆ ಕೊಂಕು ನುಡಿಯುವ ಸಮಾಜ ಅಂದೂ ಅಸ್ತಿತ್ವದಲ್ಲಿತ್ತು. ಆದರೆ ಹರ್ಬಟ್ ಪತ್ರಿಕೆಗಳ ಸುದ್ದಿಗಳಿಂದ ರೋಷಗೊಂಡಿದ್ದ ಜನತೆಯನ್ನು ಗುರಾಣಿಯನ್ನಾಗಿ ಹಿಡಿದು ನೈಟಿಂಗೇಲ್‌ಳ ಕೋರಿಕೆಗೆ ಸಚಿವ ಸಂಪುಟದ ಒಪ್ಪಿಗೆಯನ್ನು ಪಡೆಯುವುದರಲ್ಲಿ ಯಶಸ್ವಿಯಾದ.

1854ರಲ್ಲಿ ಸ್ಕೂಟರಿಯಲ್ಲಿದ್ದ ಬ್ಯಾರಕ್ ಆಸ್ಪತ್ರೆಗೆ ತನ್ನ ತಂಡದೊಂದಿಗೆ ಬಂದಿಳಿದ ನೈಟಿಂಗೇಲ್ ಅಲ್ಲಿಯ ದುಃಸ್ಥಿತಿ ಕಂಡು ಹೌಹಾರಿದಳು. ಉದ್ದುದ್ದನೆಯ ಕಾರಿಡಾರುಗಳಲ್ಲಿ ತುಂಬಿದ್ದ ಗಾಯಾಳು ಗಳು, ಸರಿಯಾದ ಚಿಕಿತ್ಸೆಯಿಲ್ಲದೆ ಉಲ್ಬಣಗೊಂಡು ಕೀವು ತುಂಬ ಸೋರುತ್ತಿದ್ದ ಅವರ ಗಾಯಗಳು, ಗಾಳಿ ಬೆಳಕಿಲ್ಲದೆ ಈ ಗಾಯಗಳ ದುರ್ವಾಸನೆಯಿಂದ ತುಂಬಿದ್ದ ವಾತಾವರಣ ಹೊಲಸಿನಿಂದ ಕೂಡಿದ್ದಿತು. ರಾತ್ರಿ ರೋಗಿಗಳ ಮೇಲೆ ನಿರಾತಂಕವಾಗಿ ದಾಳಿ ಮಾಡುತ್ತಿದ್ದ ಇಲಿ, ಹೆಗ್ಗಣಗಳು, ಪಾತ್ರ, ಟವೆಲ್, ಸೋಪ್ ಅಥವಾ ಕಸಪೊರಕೆಯಂತಹ ಚಿಕ್ಕ ಅವಶ್ಯಕ ವಸ್ತುಗಳೂ ಸರಿಯಾಗಿ ಇಲ್ಲದಿದ್ದ ಆಸ್ಪತ್ರೆಯ ಪರಿಸ್ಥಿತಿಯನ್ನು ಆದಷ್ಟೂ ಬೇಗನೆ ಸರಿಪಡಿಸುವತ್ತ ನೈಟಿಂಗೇಲ್ ಮೊದಲು ಗಮನಹರಿಸಿದಳು.

ವಾರ ಕಳೆಯುವಷ್ಟರಲ್ಲಿ ಲಾಂಡ್ರಿಯೊಂದನ್ನು ಪ್ರಾರಂಭಿಸಿ ಬಟ್ಟೆ ಒಗೆಯುವ ಕೆಲಸವನ್ನು ಸೈನಿಕರ ಹೆಂಡತಿಯರಿಗೆ ಒಪ್ಪಿಸಿದಳು. ಮೂರು ಅಡಿಗೆ ಕೋಣೆಗಳನ್ನು ಸ್ಥಾಪಿಸಿ ಪುಷ್ಟಿಕರ ಆಹಾರವನ್ನು ರೋಗಿಗಳಿಗೆ ನೀಡಲಾರಂಭಿಸಿದಳು. ತನ್ನ ಸ್ವಂತ ಹಣದಿಂದ ಉಗ್ರಾಣ ಕೋಣೆಯೊಂದನ್ನು ಆರಂಭಿಸಿ ಶಸ್ತ್ರಚಿಕಿತ್ಸೆಗೆ ಬೇಕಾದ ಎಲ್ಲ ವಸ್ತುಗಳೂ ಅಲ್ಲಿ ಸಿಗುವಂತೆ ನೋಡಿಕೊಂಡಳು.

ರೋಗಿಗಳಿಗೆ ದೇವತೆಯಂತೆ ಕಂಡುಬಂದ ನೈಟಿಂಗೇಲ್ ಬಗ್ಗೆ ಮಿಲಿಟರಿ ಮತ್ತು ವೈದ್ಯಕೀಯ ಅಧಿಕಾರಿ ಗಳಿಗೆ ಮಾತ್ರ ಅಸೂಯೆಯ ಅಸಮಾಧಾನ ಬೆಳೆಯಲಾರಂಭಿಸಿತು. ಅನ್ಯರ ಚುಚ್ಚು ನುಡಿಗಾಗಲಿ, ವ್ಯಂಗ್ಯಗಳನ್ನಾಗಲಿ ಗಣನೆಗೆ ತೆಗೆದುಕೊಳ್ಳದ ನೈಟಿಂಗೇಲ್ ದಿನದಲ್ಲಿ ಎಂಟು ಗಂಟೆ ಸಮಯ ರೋಗಿಗಳ ಶುಶೂಷೆ ಮಾಡುತ್ತಿದ್ದಳು. ಗುಣ ಕಾಣದ ರೋಗಿಗಳು ಅಸುನೀಗುವುದು ಖಾತ್ರಿಯಾದಾಗ ಮೌನವಾಗಿ ಅವರನ್ನು ಕೊಂಡೊಯ್ಯುವವರೆಗೂ ಪಕ್ಕದಲ್ಲಿರುತ್ತಿದ್ದ ಅವಳ ಸಹನೆ ಹಾಗೂ ಸೇವಾಮನೋಭಾವವನ್ನು ಪತ್ರಿಕೆಗಳು ಹೊಗಳಿ ಬರೆದುವು.

ರಾತ್ರಿ ವೇಳೆಯಲ್ಲಿ ಮೇಣದ ದೀಪ ಹಿಡಿದು ಪ್ರತಿ ರೋಗಿಯನ್ನೂ ಗಮನಿಸುತ್ತ ಬರುತ್ತಿದ್ದ ನೈಟಿಂಗೇಲ್ ಳನ್ನು ರೋಗಿಗಳು ‘ದಿ ಲೇಡಿ ಆಫ್ ದಿ ಲ್ಯಾಂಪ್’ ಎಂದೇ ಗೌರವಿಸಿ ಪೂಜಿಸಲಾರಂಭಿಸಿ ದರು. ಬದುಕಿನ ಆಸೆಯನ್ನೇ ಕಳೆದುಕೊಂಡಿದ್ದ ಅನೇಕರು ಬದುಕುವಂತಾದುದು ನೈಟಿಂಗೇಲಳ ಶುಶೂಷೆಯ ಪವಾಡವೇ ಆಯಿತು.

1856ರಲ್ಲಿ ತನ್ನ ಕಾರ್ಯ ಮುಗಿಸಿ ಇಂಗ್ಲೆಂಡಿಗೆ ವಾಪಸಾದ ನೈಟಿಂಗೇಲಳಿಗೆ ಗೌರವದ ಸ್ವಾಗತ ನೀಡಲು ಸರ್ಕಾರ ಸಿದ್ಧತೆ ನಡೆಸಿತು. ಆದರೆ ಇದಾವ ಪುರಸ್ಕಾರ ಸನ್ಮಾನಗಳನ್ನೂ ಬಯಸದ ಅವಳು ಮಿಸ್, ಸ್ಮಿತ್ ಎಂಬ ಹೆಸರಿನಲ್ಲಿ ಬಂದು ಮನೆ ಸೇರಿ ಕೊಂಡಿದ್ದಳು.

ತಾನು ಜರ್ಮನಿಯಲ್ಲಿ ಕಂಡ ದಾದಿಯರ ತರಬೇತಿ ಶಾಲೆಯ ಮಾದರಿಯಲ್ಲಿ ಇಂಗ್ಲೆಂಡಿನಲ್ಲಿ ಸೇಂಟ್ ಥಾಮಸ್ ಹಾಸ್ಪಿಟಲನ್ನು ಜನರ ನೆರವಿನಿಂದ ಸ್ಥಾಪಿಸಿದಳು (1859), ಸೈನಿಕರ ಆಸ್ಪತ್ರೆಗಳ ನಿರ್ವಹಣೆ ಬಗ್ಗೆ ಆಳವಾದ ಅಧ್ಯಯನ ನಡೆಸಿ ”ನೋಟ್ಸ್ ಆನ್ ಮ್ಯಾಟರ್ ಆಫ್ ಕಿಂಗ್ ದಿ ಹೆಲ್ತ್ ಎಫಿಷಿಯನ್ಸಿ ಅಂಡ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ಆಫ್ ದಿ ಬ್ರಿಟಿಷ್ ಆರ್ಮಿ’ ಎಂಬ 800 ಪುಟಗಳ ವರದಿ ಯನ್ನು ಸರ್ಕಾರಕ್ಕೆ ಸಲ್ಲಿಸಿದಳು.

ಭಾರತದ ಸಿಪಾಯಿದಂಗೆಯ ಸಮಯದಲ್ಲಿ ಕೂಡ ಈಕೆ ಇಲ್ಲಿಗೆ ಬರುವ ಯೋಚನೆ ಮಾಡಿದ್ದಳು. ಆದರೆ ಕ್ರಿಮಿಯ ಕದನದ ವೇಳೆಯಲ್ಲಿ ಸಲ್ಲಿಸಿದ ಅವಿಶ್ರಾಂತ ಸೇವೆಯ ಫಲವಾಗಿ ನೈಟಿಂಗೇಲಳ ಆರೋಗ್ಯ ಅವಕಾಶ ನೀಡಲಿಲ್ಲ. ಆದರೂ ಭಾರತದ ಕಾರ್ಯದರ್ಶಿಗೆ ಬರೆದು ಇಲ್ಲಿನ ಸ್ಥಿತಿ ತಿಳಿದುಕೊಳ್ಳುತ್ತಿದ್ದಳು.

1907ರಲ್ಲಿ ‘ಆರ್ಡರ್ ಆಫ್ ಮೆರಿಟ್’ ಪ್ರಶಸ್ತಿಯನ್ನು, ಮರುವರ್ಷ ‘ಫ್ರೀಡಂ ಆಫ್ ದಿ ಸಿಟಿ ಆಫ್ ಲಂಡನ್’ ಪ್ರಶಸ್ತಿಯನ್ನು ಅವಳಿಗೆ ನೀಡಲಾಯಿತು. ಆದರೆ ಈ ಹೊತ್ತಿಗಾಗಲೆ ತನ್ನ ದೃಷ್ಟಿ ಮತ್ತು ನೆನಪಿನ ಶಕ್ತಿ ಕಳೆದುಕೊಂಡಿದ್ದ ನೈಟಿಂಗೇಲಳಿಗೆ (ಆಗ 90 ವರ್ಷ) ಅವಾವೂ ತರದ ಸಂತೃಪ್ತಿ ಅವಳ ಸೇವಾ ಜೀವನ ನೀಡಿದ್ದಿತು. ಹೀಗೆ ಆಧುನಿಕ ನರ್ಸಿಂಗ್ ಹೋಮ್ ವ್ಯವಸ್ಥೆಗೆ ಬುನಾದಿ ಹಾಕಿದ ನೈಟಿಂಗೇಲ್ 1910ರಲ್ಲಿ ಲಂಡನ್‌ನಲ್ಲಿ ಕಾಲವಾದಳು. ಅವಳು ತೋರಿದ ಕರುಣೆ, ತ್ಯಾಗ ಅವಿಸ್ಮರಣೀಯ.

Leave a Reply

Your email address will not be published. Required fields are marked *