Breaking News

Josephine Bonaparte History Kannada

ಮೇರಿ ಜೊಸೆಫೈನ್ ಜೀವನ ಚರಿತ್ರೆ | Josephine Bonaparte History in Kannada

ಮೇರಿ ಜೊಸೆಫೈನ್ ಜೀವನ ಚರಿತ್ರೆ | Josephine Bonaparte History in Kannada

Joséphine de Beauharnais (1763-1814) ಇವಳ ಮೊದಲ ಹೆಸರು ಮೇರಿ ಜೊಸೆಫೈನ್. 1763ರಲ್ಲಿ ಮಾರ್ಟಿನಿಕ್ಸ್‌ ಎಂಬಲ್ಲಿ ಶ್ರೀಮಂತ ಕುಟುಂಬದಲ್ಲಿ ಜನಿಸಿದಳು. ತನ್ನ ಮೊದಲ ಪತಿ ಜನರಲ್ ಸೈಂಟ್ ಅಲೆಕ್ಸಾಂಡರ್ ಬಿಯಹರ್ನ್ಸ್ ಅಕಾಲ ಮರಣ ಹೊಂದಲಾಗಿ ವಿಧವೆಯಾದಳು.

ರಾಜಕೀಯ ಹಾಗೂ ಸಾರ್ವಜನಿಕ ಜೀವನದಲ್ಲಿ ಪ್ರಭಾವಿ ವ್ಯಕ್ತಿಗಳ ಪರಿಚಯ ಗಳಿಸಿದ್ದ ಈಕೆ ಫ್ರಾನ್ಸಿನ ಗಣ್ಯವ್ಯಕ್ತಿಗಳ ಸಾಲಿನಲ್ಲಿದ್ದವಳು, ಚುರುಕು ಬುದ್ಧಿಯ ಜಾಣೆಯಾಗಿದ್ದ ಇವಳು ಸುಂದರಿಯೂ ಆಗಿದ್ದು ಉನ್ನತ ವಲಯದಲ್ಲಿ ಹೆಸರು ಮಾಡಿದ್ದಳು.

ಸೇನಾನಿ ನೆಪೋಲಿಯನ್ ಬೋನಾಪಾರ್ಟೆಯ ಸಂಪರ್ಕ ಬೆಳಸಿ ಅವನ ಪ್ರೇಯಸಿಯಾದಳು. ತಾನು ಅವನಿಗಿನ್ನ ಆರು ವರ್ಷ ಹಿರಿಯವಳಾಗಿದ್ದರೂ ಕೊನೆಗೆ ಅವನನ್ನೇ ವಿವಾಹ ಮಾಡಿಕೊಂಡಳು (1796).

ಕ್ರಾಂತಿಕಾರಿ ಪಕ್ಷ ರಚಿಸಿದ್ದ ಫ್ರೆಂಚ್ ಸೇನೆಯ ಕಾರ್ಯಸಾಧನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ ನೆಪೋಲಿಯನ್ ಬಹುಬೇಗ ಉನ್ನತ ಹುದ್ದೆಗಳಿಗೆ ಏರತೊಡಗಿದನು. ಇದರಲ್ಲಿ ಜೊಸೆಫೈನಳ ಪ್ರಭಾವಿ ಕೈವಾಡ ಕೂಡ ಇದ್ದಿತೆಂದು ಹೇಳಲಾಗಿದೆ.

ಡೈರಕ್ಟರಿ ಸರಕಾರ ಪತನವಾಗಿ ಆ ಸ್ಥಾನದಲ್ಲಿ ರಚಿತವಾದ ಕಾನ್ಸೂಲ್ ಸರಕಾರದಲ್ಲಿ ನೆಪೋಲಿಯನ್ ಪ್ರಥಮ ಕಾನ್ಸೂಲ್ ಆಗಿ ನೇಮಕಗೊಳ್ಳು ವನ್ನೂ ಇವಳು ಪ್ರಮುಖ ಪಾತ್ರ ವಹಿಸಿದ್ದಳು. 1804ರಲ್ಲಿ ನೆಪೋಲಿಯನ್ ಬೋನಾಪಾರ್ಟಿ ಚಕ್ರವರ್ತಿ ಎಂದು ಘೋಷಿಸಿಕೊಂಡ ಮೇಲೆ ಜೊಸೆಫೈನ್ ಕೂಡ ಫ್ರಾನ್ಸಿನ ಸಾಮ್ರಾಜ್ಞೆಯಾದಳು.

ಸಾಹಿತ್ಯ, ನಾಟಕ, ಸಂಗೀತ ಮೊದಲಾದ ಲಲಿತಕಲೆಗಳಲ್ಲಿ ಅಭಿರುಚಿಯುಳ್ಳ ಸೊಗಸುಗಾತಿಯಾಗಿದ್ದಳು. ಅವಳು ವಹಿಸಿದ ಆಸಕ್ತಿ ಮತ್ತು ನೀಡಿದ ಪ್ರೋತ್ಸಾಹದಿಂದ ಅವು ಪ್ರಗತಿ ಹೊಂದಿದುವು. ಆದರೆ ಆಕೆ ಮಗುವಿಗೆ ಜನ್ಮ ನೀಡಲಾರದೆ ಹೋಗಲಾಗಿ ವಿಚ್ಛೇದಿತಳಾದಳು. ಆದರೂ 1814ರಲ್ಲಿ ಅವಳು ಕಾಲವಾಗುವವರೆವಿಗೂ ರಾಣಿ ಎಂಬ ಬಿರುದುಳ್ಳವಳಾಗಿದ್ದಳು.

Leave a Reply

Your email address will not be published. Required fields are marked *