Breaking News

Niccolo Machiavelli Biography in Kannada

ಮ್ಯಾಕಿಯವೆಲ್ಲಿ ಜೀವನ ಚರಿತ್ರೆ | Niccolo Machiavelli History in Kannada

ಮ್ಯಾಕಿಯವೆಲ್ಲಿ ಜೀವನ ಚರಿತ್ರೆ | Niccolo Machiavelli History in Kannada:

ನಿಕ್ಕೋಲೊ ಮ್ಯಾಕಿಯವೆಲ್ಲಿ, Niccolo Machiavelli [1469-1527] ರಾಜಕೀಯ ಕಲೆಯ ಬಗ್ಗೆ ನಿಷ್ಣಾತ ಬರಹಗಾರನೆಂದು ಪ್ರಸಿದ್ಧಿ ಪಡೆದಿರುವ ಮ್ಯಾಕಿಯವೆಲ್ಲಿಯನ್ನು ಭಾರತದ ಕೌಟಿಲ್ಯನಿಗೆ ಹೋಲಿಸುವುದುಂಟು. ಇವನು ಇಟಲಿಯ ಫ್ಲಾರೆನ್ಸ್‌ನಲ್ಲಿ ಮೇ 3, 1469 ರಂದು ಜನಿಸಿದನು. ಇವನ ತಂದೆ ಬರ್ನಾಡೋ ನ್ಯಾಯ ಶಾಸ್ತ್ರಜ್ಞ ಮತ್ತು ಸಾಹಿತ್ಯಾಭಿಮಾನಿ. ಮ್ಯಾಕಿಯವಲ್ಲಿ ಸಾಹಿತ್ಯಾಸಕ್ತನಾಗಲು ಇವನ ತಂದೆಯ ಪ್ರಭಾವವೇ ಕಾರಣವಾಗಿದ್ದಿತು.

ಚಿಕ್ಕಂದಿನಲ್ಲೇ ರೋಮನ್ ಇತಿಹಾಸ ಸೇರಿದಂತೆ ಇಟಾಲಿಯನ್ ಮತ್ತು ಲ್ಯಾಟಿನ್ ಮಹಾಗ್ರಂಥಗಳನ್ನೆಲ್ಲ ಅಧ್ಯಯನ ಮಾಡಿ ಅಳವಾದ ಜ್ಞಾನ ಸಂಪಾದಿಸಿದನು. ಇಪ್ಪತ್ತೈದನೆ ವರ್ಷದಲ್ಲಿ ಫ್ಲಾರೆನ್ಸಿನ ಕಮ್ಯೂನ್‌ವೊಂದರಲ್ಲಿ ಗುಮಾಸ್ತನಾಗಿ ಕೆಲಸಕ್ಕೆ ಸೇರಿ ಕೇವಲ ಎರಡೇ ವರ್ಷಗಳಲ್ಲಿ ಪ್ರಧಾನಮಂತ್ರಿಯ ಕಾರ್ಯದರ್ಶಿಯಾಗಿ ನಿಯುಕ್ತನಾದ. ಈ ಸಮಯದಲ್ಲಿ ವಿವಿಧ ದೇಶಗಳಿಗೆ ರಾಯಭಾರಿಯಾಗಿ ಹೋಗುತ್ತಿದ್ದು ಅಪಾರ ರಾಜಕೀಯ ಅನುಭವಗಳಿಸಿದ. ಇದು ಅವನು ತನ್ನದೇ ಆದ ರಾಜಕೀಯ ಚಿಂತನೆಯನ್ನು ರೂಪಿಸಲು ಅನುವಾಯಿತು.

ಫ್ಲಾರೆನ್ಸ್ ಮೇಲೆ ವ್ಯಾಲೆಂಟನೋಯಿಸ್‌ನ ಡ್ಯೂಕ್‌ ಆಫ್ ಸಿಸಿರ ಬೋರ್ಗಿಯಾನ ಆಕ್ರಮಣ ವೆಸಗುವ ಸನ್ನಾಹದಲ್ಲಿದ್ದನು. ಇವನು ರೊಮಾಗ್ನದಲ್ಲಿ ತಂಗಿದ್ದಾಗ ಅವನ ಮೇಲೆ ಬೇಹುಗಾರಿಕೆ ನಡೆಸಲು ನಿಯುಕ್ತನಾಗಿ ಹೋದ ಮ್ಯಾಕಿಯವಲ್ಲಿ ಬೋರ್‌ಗಿಯಾನ ವ್ಯಕ್ತಿತ್ವದಿಂದ ಬಹುವಾಗಿ ಪ್ರಭಾವಿತನಾದ, ಬೋರ್‌ಗಿಯಾನ ರಾಜಕೀಯ ದೂರದೃಷ್ಟಿಯುಳ್ಳ ಚಾಣಾಕ್ಷತನ, ಕ್ರೂರತ್ವ ಮತ್ತು ವಂಚನೆ ಮ್ಯಾಕಿಯವಲ್ಲಿಯ ರಾಜಕೀಯ ಚಿಂತನೆಯಲ್ಲಿ ಹೊಸ ತಿರುವು ಮೂಡಿಸಿದುವು.

1503ರಲ್ಲಿ ಫ್ಲಾರೆನ್ಸಿನಲ್ಲಿ ರಾಷ್ಟ್ರೀಯ ಪ್ರಜಾಸೈನ್ಯವೊಂದನ್ನು ಕಟ್ಟಲು ಪ್ರಯತ್ನಪಟ್ಟನು. ರಾಜನ (ಸೊಡರೆನಿಯ) ಅನುಮತಿ ದೊರೆಯಿತಾದರೂ ಅದು ಕೈಗೂಡಲಿಲ್ಲ. ಫ್ಲಾರೆನ್ಸ್‌ನ ಕೈಬಿಟ್ಟುಹೋಗಿದ್ದ ಪೀಸಾವನ್ನು ವಾಪಸ್ಸು ಪಡೆಯಲು ಯುದ್ಧ ಅನಿವಾರ್ಯವಾಗಿತ್ತು. ಅದಕ್ಕಾಗಿ ತೆರಿಗೆ ಎತ್ತಿ ಹಣ ಸಂಗ್ರಹ ಮಾಡುವ ಜವಾಬ್ದಾರಿ ಇವನ ಮೇಲಿತ್ತು. ಈ ಹೊಣೆ ನಿಭಾಯಿಸುತ್ತಲೇ ತನ್ನ ಬರಹವನ್ನೂ ಮುಂದುವರಿಸಿ ಕೊಂಡು ಬಂದಿದ್ದ. ಇವನ ‘ಆನಲ್ಸ್ ಆಫ್ ಇಟಲಿ’ ಎಂಬ ಪದ್ಯ, ‘ಮಾಸ್’ ಎಂಬ ಹಾಸ್ಯ ಲೇಖನ ಹೊರಬಂದದ್ದು ಆಗಲೇ.

1507ರಲ್ಲಿ ಚಕ್ರವರ್ತಿ ಮ್ಯಾಕ್ಸಿಮಿಲಿಯನ್ ರೋಮ್ ಸಾಮ್ರಾಜ್ಯದ ಸಿಂಹಾಸನಾರೋಹಣ ಕಾರ್ಯಕ್ಕಾಗಿ ಹಣ ಸಂಗ್ರಹಿಸಲು ಆಜ್ಞೆ ಹೊರಡಿಸಿದ. ಇದನ್ನು ಸಹಿಸದ ಫ್ಲಾರೆನ್ಸ್, ಚಕ್ರವರ್ತಿಯೊಂದಿಗೆ ಮಾತನಾಡಲು ಮ್ಯಾಕಿಯವಲ್ಲಿಯನ್ನು ಕಳುಹಿಸಿತು. ಈ ಕಾರ್ಯದಲ್ಲಿ ಹೊರಟ ಮ್ಯಾಕಿಯ ಎಲ್ಲಿ ಜಿನೀವಾ, ಸ್ಪಿಟ್ಟಿರ್‌ಲ್ಯಾಂಡ್, ಜರ್ಮನಿಗಳನ್ನು ಸಂದರ್ಶಿಸಿ ಅಪಾರ ಅನುಭವ ಗಳಿಸಿದ.

ಪ್ರವಾಸ ಮುಗಿಸಿ ಬರುವಷ್ಟರಲ್ಲಿ ರಜಸೊಡರನಿಯ ಪದಚ್ಯುತಿಯಾಗಿ ಮೆಡಿಸಿಸ್ ವಂಶ ಮತ್ತೆ ಅಧಿಕಾರಕ್ಕೆ ಬಂದಿತು. ಈ ಸಂಚಿನ ಕಾರ್ಯದಲ್ಲಿ ಮ್ಯಾಕಿಯವಲ್ಲಿ ಪಾತ್ರವೂ ಇತ್ತೆಂಬ ಸುಳ್ಳು ಆರೋಪದಿಂದ ಅವನನ್ನು ಸೆರಮನೆಯ ಚಿತ್ರಹಿಂಸೆಗೆ ಗುರಿಮಾಡಲಾಯಿತು. ಈ ಹಿಂಸೆಯ ನಡುವೆಯೂ ವ್ಯಂಗ್ಯ ತುಂಬಿದ ಸಾನಟ್ಸ್‌ಗಳನ್ನು ರಚಿಸಿದ. ಬಿಡುಗಡೆಯಾದ ಮೇಲೆ ದೇಶಭ್ರಷ್ಟನಾಗಿ ಕಾಡು ಬಯಲೆಲ್ಲ ಅಲೆದ, ವಿವಿಧ ಜನರೊಡನೆ ವೈವಿಧ್ಯಮಯವಾಗಿ ಚರ್ಚಿಸುತ್ತ ತನ್ನ ದಿನಚರಿಯನ್ನು ವಿಚಿತ್ರ ವರ್ತನೆಗಳಿಂದ ತುಂಬಿದ, ಬಡತನ ಲೆಕ್ಕಿಸಲಿಲ್ಲ ; ಸಾವಿನ ಬಗ್ಗೆ ಹೆದರಲಿಲ್ಲ. ಇದು ಮ್ಯಾಕಿಯ ವೆಲ್ಲಿಯ ಜಾಯಮಾನ ರಾಜಕೀಯ ಚಿಂತನೆ : 1513ರಲ್ಲಿ ತನ್ನ ಹೆಸರಾಂತ ಕೃತಿ ‘ದಿ ಪ್ರಿನ್ಸ್’ ಬೆಳಕು ಕಂಡುದು

ಅವನ ಕಾಲಾನಂತರವಷ್ಟೆ, ವಾಸ್ತವ ರಾಜಕಾರಣದ ಬೈಬಲ್ ಎನಿಸಿರುವ ಈ ಕೃತಿ ಮನುಷ್ಯ ಅಧಿಕಾರ ಪಡೆಯುವ ವಿಧಾನ, ಆಳುವ ಚಾತುರ್ಯ ಮತ್ತು ರಾಜಕೀಯ ತಂತ್ರಗಳನ್ನು ಒಳಗೊಂಡಿದೆ. ಪ್ರಾಚೀನ ರಾಜಕೀಯ ತತ್ವಜ್ಞಾನಿಗಳಾದ ಅರಿಸ್ಟಾಟಲ್, ಪ್ಲೇಟೋ ಹಾಗೂ ಮಧ್ಯಯುಗದ ಮಾನವತಾವಾದಿಗಳಂತೆ ರಾಜಕೀಯವನ್ನು ನೈತಿಕ ಮೌಲ್ಯಾಧಾರಿತವೆಂದು ಅವನು ಪರಿಗಣಿಸಲಿಲ್ಲ. ರಾಜಕೀಯದ ವಿಧಾನಗಳೇ ಬೇರೆ, ಅವುಗಳು ಸರಿಯೇ ತಪ್ಪೇ ಎನ್ನುವುದಕ್ಕಿಂತ, ಅದರಲ್ಲಿ ಯಶಸ್ಸು ಕಾಣುವುದು ಮುಖ್ಯ. ಮಾರ್ಗ ಯಾವುದಾದರಾಗಲಿ ಗುರಿಮುಟ್ಟುವುದು ಮುಖ್ಯ.

ಇವನು ಹೇಳಿದ ಭ್ರಷ್ಟಾಚಾರ, ಪೊಳ್ಳು ಆಶ್ವಾಸನೆ, ಸೋಗಿನ ಗುಣ, ವಂಚನೆಗೆ ಪ್ರತಿವಂಚನೆ, ಕುಟಿಲೋಪಾಯ, ಆಶಾಢಭೂತಿ ಮೊದಲಾದುವನ್ನು ಠೀಕಾಕಾರರು ಅಧಾರ್ಮಿಕ ಮಾರ್ಗಗಳೆಂದರೂ ಪ್ರಪಂಚ ಇದ್ದ ರೀತಿಯನ್ನು ಇದ್ದಂತೆ ಎವರಿಸುವ ಮ್ಯಾಕಿವೆಲ್ಲಿಯ ದೃಷ್ಟಿಯಲ್ಲಿ ಅವು ಸೂಕ್ತವೆ. ಇದು ರಾಜಕೀಯದ ಅವನ ಹೊಸ ಚಿಂತನೆ, ಆದ್ದರಿಂದಲೆ ‘ಮ್ಯಾಕಿವೆಲ್ಲಿ’ ಎಂಬ ಪದಕ್ಕೆ ಡಿಕ್ಷನರಿಯಲ್ಲಿ ನೀತಿನಿಯಮಗಳನ್ನು ಲಕ್ಷಿಸದ ಸಂಚುಗಾರ, ತಂತ್ರಗಾರ ಎಂಬ ಅರ್ಥ ಬಂದಿರುವುದು.

ರಾಜಕೀಯ ಕಲೆಯ ಬಗ್ಗೆ ಮ್ಯಾಕಿವೆಲ್ಲಿ ನಿಷ್ಣಾತ ಬರಹಗಾರ, ಹಾಗೆಂದೇ ಪ್ರಪಂಚದಾದ್ಯಂತ ಇವನ ಬರವಣಿಗೆಯನ್ನು ಓದುವವರೂ ಅದನ್ನು ದುರುಪಯೋಗಪಡಿಸಿಕೊಳ್ಳುವವರೂ ಇದ್ದಾರೆ.

ಮ್ಯಾಕಿವೆಲ್ಲಿಯನ್ನು ಕುರಿತು ಬರೆದವರಲ್ಲಿ ಮೈಕಾಲೆ ಪ್ರಮುಕ, ಮೃಕಾಲೆ ಆತನನ್ನು “ಒಬ್ಬ ಪ್ರಲೋಭನಕಾರ, ದೃಷ್ಟತೆಯ ನೀತಿಕಾರ, ದುರಾಸೆ ದ್ವೇಷಗಳನ್ನು ಹುಟ್ಟುಹಾಕಿದವ, ಸುಳ್ಳು ಪ್ರಮಾಣ ಮಾಡಿದವರಲ್ಲಿ ಮೊದಲನೆಯವ ಎಂದಲ್ಲ ಹೀಗಳೆದಿದ್ದಾನೆ. ಆದರೆ ಮ್ಯಾಕಿವೆಲ್ಲಿಯಷ್ಟು ತಪ್ಪಾಗಿ ಗ್ರಹಿಸಲ್ಪಟ್ಟ ದಾರ್ಶನಿಕ ಮತ್ತೊಬ್ಬನಿಲ್ಲ.

Leave a Reply

Your email address will not be published. Required fields are marked *