Breaking News

ದಾವುದ್ ಇಬ್ರಾಹಿಂ ಆಸ್ತಿಗೆ ಹರಾಜಿನಲ್ಲಿ 1300 ಪಟ್ಟು ಹೆಚ್ಚು ಬೆಲೆ ಕೊಟ್ಟು ಖರೀದಿಸಿದ ವಕೀಲ | A lawyer who keeps buying Dawood's properties at high prices

ದಾವುದ್ ಇಬ್ರಾಹಿಂ ಆಸ್ತಿಗೆ ಹರಾಜಿನಲ್ಲಿ 1300 ಪಟ್ಟು ಹೆಚ್ಚು ಬೆಲೆ ಕೊಟ್ಟ ವಕೀಲ

ದಾವುದ್ ಇಬ್ರಾಹಿಂ ಆಸ್ತಿಗೆ ಹರಾಜಿನಲ್ಲಿ 1300 ಪಟ್ಟು ಹೆಚ್ಚು ಬೆಲೆ ಕೊಟ್ಟು ಖರೀದಿಸಿದ ವಕೀಲ | A lawyer who keeps buying Dawood’s properties at high prices

ಮುಂಬೈ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಅಪರಾಧಿಯಾದ ದಾವುದ್ ಇಬ್ರಾಹಿಂ, ಪಾಕಿಸ್ತಾನದಲ್ಲಿ ತಲೆ ಮರೆಸಿಕೊಂಡಿರುವುದರಿಂದ, ಆತನ ಆಸ್ತಿಗಳನ್ನು ಕೇಂದ್ರ ಸರ್ಕಾರ ವಶಪಡಿಸಿಕೊಂಡು, ಹರಾಜು ಹಾಕುತ್ತಿದೆ. ಅವನ ಆಸ್ತಿಗಳನ್ನು ಖರೀದಿಸಲು ಯಾರೂ ಮುಂದೆ ಬಾರದ ಸ್ಥಿತಿಯಲ್ಲಿ, ದೆಹಲಿಯ ವಕೀಲ ಅಜಯ್ ಶ್ರೀವಾಸ್ತವ, ಆ ಆಸ್ತಿಗಳನ್ನು ಹರಾಜಿನಲ್ಲಿ ಕೊಂಡುಕೊಳ್ಳುತಾ ಬಂದಿದ್ದಾರೆ. ಹೀಗಾಗಿ ದಾವುದ್ ಇಬ್ರಾಹಿಂ ಸಹಚರರಿಂದ ಬೆದರಿಕೆ ಬಂದಿತ್ತು. ನಂತರ ಅಜಯ್ ಶ್ರೀವಾಸ್ತವಾಕ್ಕೆ ಕೇಂದ್ರ ಸರ್ಕಾರ ಕಳೆದ 11 ವರ್ಷಗಳಿಂದ z + ಸೆಕ್ಯೂರಿಟಿ ಯನ್ನು ನೀಡುತ್ತಿದೆ.

ಎರಡು ದಿನಗಳ ಹಿಂದೆ ದಾವುದ್ ಇಬ್ರಾಹಿಂನ ತಾಯಿಯ ಹೆಸರಿನಲ್ಲಿದ್ದ 4 ಆಸ್ತಿಗಳು ಹರಾಜಿಗೆ ಬಂದವು. ಈ ಹರಾಜಿನಲ್ಲಿ ಅಜಯ್ ಭಾಗವಹಿಸಿದರು. ಕೇವಲ 15 ಸಾವಿರ ಮೌಲ್ಯದ ಒಂದು ಸಣ್ಣ ಭೂಮಿಯನ್ನು 1,300 ಪಟ್ಟು ಹೆಚ್ಚು ಬೆಲೆಯನ್ನು ಈ ಹರಾಜಿನಲ್ಲಿ ನೀಡುವ ಮೂಲಕ ತೆಗೆದುಕೊಂಡಿದ್ದಾರೆ.

ಇದರ ಕುರಿತು ಅಜಯ್ ಶ್ರೀವಾಸ್ತವ ನೀಡಿದ ಸಂದರ್ಶನದಲ್ಲಿ, “2001-ನೇ ವರ್ಷ ಕರಾಚಿಯಲ್ಲಿ ಅಡಗಿರುವ ದಾವುದ್ ಇಬ್ರಾಹಿಂನ ಆಸ್ತಿಗಳು ಹರಾಜಿಗೆ ಬರಲಿರುವ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿದೆ. ಆದರೆ ಆಸ್ತಿಗಳನ್ನು ಯಾರೂ ತೆಗೆದುಕೊಳ್ಳಲು ಆಸಕ್ತಿ ತೋರಿಸುತ್ತಿಲ್ಲ ಎಂದು ವರದಿಯಾಗಿತ್ತು. ಭಯದಿಂದಾಗಿ ಯಾರು ಆ ಅಸ್ಥಿಗಳನ್ನು ಕೊಂಡ್ಯೂಳ್ಳುತ್ತಿಲ್ಲ ಎಂಬುದನ್ನು ತಿಳಿದುಕೊಂಡೆ.

ನಂತರ ಮುಂಬೈ ನಾಕ್ಪಾಡಾದಲ್ಲಿ ಮೊದಲು ಎರಡು ಅಂಗಡಿಗಳನ್ನು ಹರಾಜಿನಲ್ಲಿ ಕೊಂಡುಕೊಂಡೆ. ನಾನು ಹರಾಜಿನಲ್ಲಿ ಭಾಗವಹಿಸಿದಾಗ ಬೇರೆ ಯಾರೂ ಭಾಗವಹಿಸಲಿಲ್ಲ. ಒಬ್ಬ ಉಗ್ರಗಾಮಿಗೆ ವಿರುದ್ಧವಾಗಿ ನಾನು ಧೈರ್ಯಾವಾಗಿ ಒಂದು ಪ್ರಯತ್ನವನ್ನು ಮಾಡಿದರೆ, ಇನ್ನೂ ಅನೇಕರು ಮುಂದೆ ಬರಬಹುದೆಂದು ನಾನು ಭಾವಿಸಿದೆ.

ದಾವುದ್ ಇಬ್ರಾಹಿಂ ವಿರುದ್ಧ ಹೋರಾಡಲು ಬಯಸಿದೆ. ಆದ್ದರಿಂದ ಅವನ ಆಸ್ತಿಗಳನ್ನು ಖರೀದಿಸಲು ಪ್ರಾರಂಭಿಸಿದೆ. ದಾವುದ್ ಇಬ್ರಾಹಿಂ ಆಸ್ತಿಗಳನ್ನು ಖರೀದಿಸಿದ ನಂತರ, ನನಗೆ ಬೆದರಿಕೆ ಬಂದಿತು. ಆದ್ದರಿಂದ ಈಗ ಸರ್ಕಾರ ಝೆಡ್+ ಭದ್ರತೆಯನ್ನು ನೀಡುತ್ತಿದೆ. ನಾಲ್ಕು ವರ್ಷಗಳ ಹಿಂದೆ ದಾವುದ್ ಇಬ್ರಾಹಿಂ ಕುಟುಂಬದವರು ತಮ್ಮ ವಕೀಲರ ಮೂಲಕ ನನ್ನನ್ನು ಸಂಪರ್ಕಿಸಿದರು. ಎಷ್ಟು ಹಣ ಬೇಕಾದರೂ ಕೊಡುತ್ತೇವೆ, ಖರೀದಿಸಿದ ಆಸ್ತಿಗಳನ್ನು ಅವರುಗಳಿಗೆ ಮಾರಾಟ ಮಾಡುವಂತೆ ಕೇಳಿಕೊಂಡರು.

ಆದರೆ ಹಣ ಸಂಪಾದಿಸುವುದು ನನ್ನ ಉದ್ದೇಶವಿಲ್ಲದ್ದರಿಂದ, ಖರೀದಿಸಿದ ಆಸ್ತಿಗಳನ್ನು ಮತ್ತೆ ಅವರಿಗೆ ಮಾರಾಟ ಮಾಡಲು ನಿರಾಕರಿಸಿದೆ. ದಾವುದ್ ಇಬ್ರಾಹಿಂ ಜನಿಸಿದ ಮನೆಯನ್ನು ಸಹ ನಾನೇ ಕೊಂಡು ಕೊಂಡಿದ್ದೇನೆ. ಒಂದು ಶಾಲೆಯನ್ನು ಆ ಮನೆಯಲ್ಲಿ ಆರಂಭಿಸಬೇಕೆಂದಿದ್ದೇನೆ. ಅದಕ್ಕಾಗಿ ಒಂದು ಏನ್ ಜಿ ಓ ಸಂಸ್ಥೆಯನ್ನು ಪ್ರಾರಂಭಿಸುತ್ತಿದ್ದೇನೆ. ಆ ಮನೆ ಇನ್ನೂ ನನ್ನ ಕೈಗೆ ಸಿಕ್ಕಿಲ್ಲ. ಈ ವರ್ಷ ಸಿಗುತ್ತದೆ ಎಂದು ನಿರೀಕ್ಷಿಸುತ್ತೇನೆ.

ಪ್ರಸ್ತುತ ನಾನು ಖರೀದಿಸಿರುವ ಭೂಮಿ ದಾವುದ್ ಇಬ್ರಾಹಿಂ ಪೂರ್ವಿಕ ಮನೆಗೆ ಹತ್ತಿರದಲ್ಲಿದೆ. ಆ ಮನೆ ಹತ್ತಿರ ಎಲ್ಲಾ ಭೂಮಿಯನ್ನು ಖರೀದಿಸಿದ್ದೇನೆ. ಈ ಒಂದು ಭೂಮಿ ಮಾತ್ರ ಬಾಕಿ ಇತ್ತು. ಆ ನೆಲವನ್ನು ಬೇರೆ ಯಾರಾದರೂ ಖರೀದಿಸಿದರೆ ಒಟ್ಟಾರೆ ಭೂಮಿಗೆ ಮೌಲ್ಯವು ಕುಸಿಯುತ್ತದೆ. ಹಾಗಾಗಿ ಅಷ್ಟೊಂದು ಬೆಲೆ ಕೊಟ್ಟು ಆ ಭೂಮಿಯನ್ನು ನಾನು ಖರೀದಿಸಿದೆ” ಎಂದಿದ್ದಾರೆ.

Leave a Reply

Your email address will not be published. Required fields are marked *