Breaking News

Sabarimala Revenue Crosses Rs134 Crore in 28 Days

134 ಕೋಟಿ ರೂ ದಾಟಿದ ಶಬರಿಮಲೆ ದೇವಸ್ಥಾನದ ಆದಾಯ

134 ಕೋಟಿ ರೂ ದಾಟಿದ ಶಬರಿಮಲೆ ದೇವಸ್ಥಾನದ ಆದಾಯ

ಶಬರಿಮಲೆಯ ಈ ವರ್ಷದ ಆದಾಯ, ಡಿಸೆಂಬರ್ 16ರ ವರೆಗೆ 134 ಕೋಟಿ 44 ಲಕ್ಷ 90 ಸಾವಿರ ರೂ. ಎಂದು ಘೋಷಿಸಲಾಗಿದೆ. ಕಳೆದ ವರ್ಷಕ್ಕಿಂತ 20 ಕೋಟಿ ಕಡಿಮೆಯಾಗಿದೆ.’ ಎಂದು ದೇವಸ್ಥಾನದ ಬೋರ್ಡ್ ಪ್ರಕಟಿಸಿದೆ.

ಈ ವರ್ಷ ಶಬರಿಮಲೆಗೆ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಮೊದಲ 28 ದಿನಗಳಲ್ಲಿ ಆದಾಯ ಕಡಿಮೆಯಾಗಿದೆ. ಈ ವರ್ಷ 134 ಕೋಟಿ 44 ಲಕ್ಷ 90 ಸಾವಿರ ರೂ ಆದಾಯ ದೇವಸ್ಥಾನಕ್ಕೆ ದೊರೆತಿದೆ. ಆದರೆ ಕಳೆದ ವರ್ಷದ ಮೊದಲ 28 ದಿನಗಳಲ್ಲಿ 154 ಕೋಟಿ 77 ಲಕ್ಷ 97 ಸಾವಿರ ರೂ ಆದಾಯ ದೊರೆತಿತ್ತು. ಈ ವರ್ಷ ರೂ.20 ಕೋಟಿ 33 ಲಕ್ಷ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ.

ದೇವಸ್ಥಾನದ ಬೋರ್ಡ್ ಹೇಳುವ ಪ್ರಕಾರ, 2018-2019, 2021-2022 ಉತ್ಸವ ಋತುಗಳಲ್ಲಿ ತೆಲಂಗಾಣ ಮತ್ತು ಕರ್ನಾಟಕದ ಭಕ್ತರು ಶಬರಿಮಲೆ ಸನ್ನಿಧಾನಕ್ಕೆ ಹೆಚ್ಚಾಗಿ ಬಂದಿರಲಿಲ್ಲ.

ಭಕ್ತರು ದಿನನಿತ್ಯದ ಸಂಪಾದನೆಯ ಒಂದು ಭಾಗವನ್ನು ಶಬರಿಮಲೆ ಅಯ್ಯಪ್ಪನಿಗೆ ಕೊಡಲು ಉಳಿಸುತ್ತಿದ್ದರು. ಅವರು 2018 ರಿಂದ ಪಾವತಿಸದ ಹಣವನ್ನು, ಕಳೆದ ವರ್ಷ ಸಂಪೂರ್ಣವಾಗಿ ಪಾವತಿಸಿದ್ದಾರೆ. ಹೀಗಾಗಿ ಶಬರಿಮಲೆ ಆದಾಯ ಕಳೆದ ವರ್ಷ ಹೆಚ್ಚಾಗಿತ್ತು. ಈ ವರ್ಷ ಆದಾಯ ಕಡಿಮೆಯಾದರೂ ಮುಂದಿನ ದಿನಗಳಲ್ಲಿ ಆದಾಯ ಹೆಚ್ಚಾಗುವ ಸಾಧ್ಯತೆಗಳಿವೆ. ಏಕೆಂದರೆ ಈಗ ಜನಸಂದಣಿ ಹೆಚ್ಚಾಗಿದೆ.

ಚೆನ್ನೈನಲ್ಲಿ ‘ಮಿಕ್ಜಾಮ್’ ಚಂಡಮಾರುತದ ಪ್ರವಾಹ ಮತ್ತು ತೆಲಂಗಾಣ ಚುನಾವಣೆಯಿಂದಾಗಿ ಮಂದಗತಿಯಲ್ಲಿದ್ದ ಭಕ್ತರ ಹರಿವು ಇದೀಗ ಮತ್ತೆ ಹೆಚ್ಚಾಗಲು ಪ್ರಾರಂಭವಾಗಿದೆ. ಅರವಣ ಅಪ್ಪಂ ಮಾರಾಟ ಹೆಚ್ಚುತ್ತಿದೆ. ದಿನಕ್ಕೆ ಸರಾಸರಿ 3.25 ಲಕ್ಷ ಲೀಟರ್ ಅರವಣ ಮಾರಾಟವಾಗುತ್ತಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *