Breaking News

Kamal Haasan Thug Life shooting begins

ಕಮಲ್ ಹಾಸನ್ ಅವರ ಥಗ್ ಲೈಫ್ ಚಿತ್ರದ ಶೂಟಿಂಗ್ ಆರಂಭ

ಕಮಲ್ ಹಾಸನ್ ಅವರ ಥಗ್ ಲೈಫ್ ಚಿತ್ರದ ಶೂಟಿಂಗ್ ಆರಂಭ | Kamal Haasan Thug Life shooting begins

ಕಮಲ್ ಹಾಸನ್ [Kamal Haasan] ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ತಮಿಳ್ ಮುಕ್ತಾಯದ ನಂತರ ಬಹು ನಿರೀಕ್ಷಿತ ‘ಥಗ್ ಲೈಫ್’ [Thug Life] ಚಿತ್ರದ ಚಿತ್ರೀಕರಣವು ಕೊನೆಗೂ ಪ್ರಾರಂಭವಾಗಲಿದೆ. ಹೆಸರಾಂತ ನಿರ್ದೇಶಕ ಮಣಿರತ್ನಂ [Mani Ratnam] ನಿರ್ದೇಶಿಸಿದ ಈ ಬಹು ತಾರಾಗಣದ ಚಿತ್ರ ತ್ರಿಶಾ, ಜಯಂ ರವಿ, ದುಲ್ಕರ್ ಸಲ್ಮಾನ್, ಜೋಜು ಜಾರ್ಜ್, ಗೌತಮ್ ಕಾರ್ತಿಕ್, ಐಶ್ವರ್ಯ ಲೆಕ್ಷ್ಮಿ ಇನ್ನು ಹಲವರನ್ನು ಒಳಗೊಂಡಿದೆ.

ಆರಂಭದಲ್ಲಿ, ಕಮಲ್ ಹಾಸನ್ ಕಳೆದ ಡಿಸೆಂಬರ್‌ನಲ್ಲಿ “ಥಗ್ ಲೈಫ್” ಚಿತ್ರೀಕರಣವನ್ನು ಪ್ರಾರಂಭಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಪ್ರಭಾಸ್ ಮತ್ತು ಶಂಕರ್ ಅವರ ‘ಇಂಡಿಯನ್ 2’ ಮತ್ತು ‘ಇಂಡಿಯನ್ 3’ ಜೊತೆಗೆ ‘ಕಲ್ಕಿ 2898 AD’ ಚಿತ್ರಗಳಲ್ಲಿ ತೊಡಗಿಸಿಕೊಂಡದ್ದರಿಂದ, “ಥಗ್ ಲೈಫ್” ಚಿತ್ರೀಕರಣ ವಿಳಂಬವಾಯಿತು. ‘ಇಂಡಿಯನ್ 2’ ಮತ್ತು ‘ಕಲ್ಕಿ 2898 AD’ ಯ ಮೊದಲ ಭಾಗದ ಶೂಟಿಂಗ್ ಪೂರ್ಣಗೊಂಡ ನಂತರ ಕಮಲ್ ಹಾಸನ್ “ಥಗ್ ಲೈಫ್” ಶೂಟಿಂಗ್ ನತ್ತ ಗಮನಹರಿಸುತ್ತಿದ್ದಾರೆ.

ಕಳೆದ ನವೆಂಬರ್ ನಲ್ಲಿ ಬಿಡುಗಡೆಯಾದ ಟೀಸರ್ ವೀಡಿಯೋದಲ್ಲಿ, ಕಮಲ್ ಹಾಸನ್ ತಮ್ಮ ಪಾತ್ರವನ್ನು ‘ರಂಗರಾಯ ಶಕ್ತಿವೇಲ್ ನಾಯಕ್’ ಎಂದು ಪರಿಚಯಿಸುತ್ತಾರೆ. ಕೆಲವರು ಈ ಚಿತ್ರವನ್ನು ‘ನಾಯಗನ್’ ಚಿತ್ರದ ಮುಂದುವರಿದ ಭಾಗ ಎಂದು ಭಾವಿಸಿದ್ದರು ಆದರೆ ‘ಥಗ್ ಲೈಫ್’ ಮತ್ತು ‘ನಾಯಗನ್’ ಚಿತ್ರಕ್ಕೆ ಯಾವುದೇ ಸಂಬಂಧ ಇಲ್ಲವೆಂಬುದು ಹಲವರ ಅಭಿಪ್ರಾಯವಾಗಿದೆ.

ಏ. ಆರ್. ರೆಹಮಾನ್ ಸಂಗೀತ, ರವಿ ಕೆ ಚಂದ್ರನ್ ಛಾಯಾಗ್ರಹಣ, ಶ್ರೀಕರ್ ಪ್ರಸಾದ್ ಸಂಕಲನ ಮತ್ತು ಏಕಾ ಲಖಾನಿ ವಸ್ತ್ರವಿನ್ಯಾಸವನ್ನು ನಿರ್ವಹಿಸುತ್ತಿರುವ ಈ ಚಿತ್ರವು ಪ್ರಭಾವಶಾಲಿ ತಾಂತ್ರಿಕ ಸಿಬ್ಬಂದಿಯನ್ನು ಹೊಂದಿದೆ. ಮಣಿರತ್ನಂ ಅವರ ವಿಶ್ವಾಸಾರ್ಹ ತಂಡದ ತಂತ್ರಜ್ಞರು ಒಂದು ಬಲವಾದ ಸಿನಿಮಾ ಅನುಭವವನ್ನು ಸೃಷ್ಟಿಸಲು ಒಟ್ಟುಗೂಡುತ್ತಿದ್ದಾರೆ.

ಈ ತಿಂಗಳ ಕೊನೆಯ ವಾರ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಏಪ್ರಿಲ್‌ನಲ್ಲಿ ಮುಂಬರುವ ಚುನಾವಣೆಯ ಮೊದಲು ಚಿತ್ರೀಕರಣವನ್ನು ಪೂರ್ಣಗೊಳಿಸಲು ತಂಡವು ಉತ್ಸುಕವಾಗಿದೆ. “ಥಗ್ ಲೈಫ್” ಚಿತ್ರದ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಭಿಮಾನಿಗಳು ಮಣಿರತ್ನಂ ಮತ್ತು ಕಮಲ್ ಹಾಸನ್ ಕಾಂಬೋ ಮ್ಯಾಜಿಕ್ ಅನ್ನು ತೆರೆಯಲ್ಲಿ ಕಾಣಲು ಕುತೂಹಲದಿಂದ ಕಾಯುತಿದ್ದರೆ.

Leave a Reply

Your email address will not be published. Required fields are marked *