Breaking News

ಮಿಸ್ ಅಮೇರಿಕಾ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಮೊದಲ ಯು. ಎಸ್. ಏರ್ಫೋರ್ಸ್ ಪೈಲಟ್ | First active-duty officer to compete at Miss America

ಮಿಸ್ ಅಮೇರಿಕಾ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಮೊದಲ ಯು. ಎಸ್. ಏರ್ಫೋರ್ಸ್ ಪೈಲಟ್

ಮಿಸ್ ಅಮೇರಿಕಾ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಮೊದಲ ಯು. ಎಸ್. ಏರ್ಫೋರ್ಸ್ ಪೈಲಟ್ | First active-duty officer and graduate of a military service academy to compete at Miss America

ಯು. ಎಸ್. ಏರ್ ಫೋರ್ಸ್ ಪೈಲಟ್ ಮ್ಯಾಡಿಸನ್ ಮಾರ್ಷ್ [Madison Marsh] ಅವರು ‘ಮಿಸ್ ಅಮೇರಿಕಾ’ ಪ್ರಶಸ್ತಿಗಾಗಿ ಸ್ಪರ್ಧಿಸಲಿರುವ ಮೊದಲ ಅಧಿಕಾರಿ ಎಂದು ಗುರುತಿಸಲ್ಪಟ್ಟಿದ್ದಾರೆ.

22 ವರ್ಷದ ಮ್ಯಾಡಿಸನ್ ಮಾರ್ಷ್ ಅಮೆರಿಕದ ಅರ್ಕಾನ್ಸಾಸ್‌ನಲ್ಲಿ ವಾಸಿಸುತ್ತಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಮ್ಯಾಡಿಸನ್ ಪೈಲಟ್ ಆಗಬೇಕೆಂಬ ಕನಸು ಕಂಡಿದ್ದರು.

ಆಕೆಯ ಪೋಷಕರು ಮ್ಯಾಡಿಸನ್ 13 ವರ್ಷದವಳಿದ್ದಾಗ ಬಾಹ್ಯಾಕಾಶ ಶಿಬಿರಕ್ಕೆ ಕಳುಹಿಸಿದರು, ಗಗನಯಾತ್ರಿಗಳು ಮತ್ತು ಫೈಟರ್ ಪೈಲಟ್‌ಗಳನ್ನು ಭೇಟಿ ಮಾಡಲು ಅವಕಾಶ ನೀಡಿದರು.

ತನ್ನ ಕನಸನ್ನು ಸಾಕಾರಗೊಳಿಸುವ ಪ್ರಯತ್ನದಲ್ಲಿದ್ದ, ಮ್ಯಾಡಿಸನ್ ವಾಯುಪಡೆಯ ಅಕಾಡೆಮಿಯಿಂದ ಭೌತಶಾಸ್ತ್ರದಲ್ಲಿ ಪದವಿ ಪಡೆದರು. ಅವರ ಪದವಿ ಪಡೆಯುವ ಕೆಲವು ದಿನಗಳ ಹಿಂದೆ, ಮೇ 2023 ರಲ್ಲಿ ಮಿಸ್ ಕೊಲೊರಾಡೋ ಪ್ರಶಸ್ತಿಯನ್ನು ಗೆದ್ದರು.

ಅದರ ನಂತರ, ಅವರು ಹಾರ್ವರ್ಡ್ ಕೆನಡಿ ಶಾಲೆಯಿಂದ ಸಾರ್ವಜನಿಕ ನೀತಿಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಮಿಸ್ ಅಮೇರಿಕಾ ಸ್ಪರ್ಧೆಗೆ ತರಬೇತಿ ನೀಡುತ್ತಿರುವಾಗ, ಎರಡನೇ ಲೆಫ್ಟಿನೆಂಟ್ ಆಗಿ ವಾಯುಪಡೆಗೆ ಸೇರಿದರು.

ಈ ವರ್ಷ ಜನವರಿ 13 ಮತ್ತು 14 ರಂದು ಫ್ಲೋರಿಡಾದಲ್ಲಿ ನಡೆಯಲಿರುವ ‘ಮಿಸ್ ಅಮೇರಿಕಾ’ ಸ್ಪರ್ಧೆಯಲ್ಲಿ ಅವರು ಇತರ 49 ಸ್ಪರ್ಧಿಗಳೊಂದಿಗೆ ಸ್ಪರ್ಧಿಸಲಿದ್ದಾರೆ.

US ಏರ್ ಫೋರ್ಸ್‌ನಲ್ಲಿ ಸೇವೆ ಸಲ್ಲಿಸುತ್ತಾ, ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಮೊದಲ ವಾಯುಪಡೆಯ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಈ ಬಗ್ಗೆ ಮಾತನಾಡುತ್ತ ಮ್ಯಾಡಿಸನ್ ಮಾರ್ಷ್ ಹೇಳುವುದೇನೆಂದರೆ,

ಏರ್ ಫೋರ್ಸ್ ಅಕಾಡೆಮಿಗೆ ಸೇರಿದ ನಂತರ, ನಾನು ಪಠ್ಯೇತರ ಸ್ಪರ್ಧೆಗಳಲ್ಲಿ ಭಾಗವಹಿಸಲು ನಿರ್ಧರಿಸಿದೆ.

“ಸೈನ್ಯಕ್ಕಾಗಿ ದೈಹಿಕವಾಗಿ ಫಿಟ್ ಆಗಿರಬೇಕು, ಅದಕ್ಕಾಗಿ ಜಿಮ್‌ನಲ್ಲಿ ತರಬೇತಿ ಪಡೆಯಬೇಕೆಂಬುದು ನನ್ನ ಆಸೆ. ಈ ವಿಷಯ ನನ್ನ ಸೌಂದರ್ಯ ಸ್ಪರ್ಧೆಯ ತರಬೇತಿಗೆ ಸಹಾಯವಾಗಿದೆ” ಎಂದು ಅವರು ಹೇಳಿದರು.

ತನ್ನ ದೇಹವನ್ನು ಫಿಟ್ ಆಗಿ ಕಾಯ್ದುಕೊಳ್ಳುತ್ತಿರುವುದರಿಂದ, ಸೌಂದರ್ಯ ಸ್ಪರ್ಧೆಗೆ ಹೆಚ್ಚಿನ ಶ್ರಮವಹಿಸುವ ಅಗತ್ಯವಿಲ್ಲ ಎನ್ನುತ್ತಾರೆ ಮ್ಯಾಡಿಸನ್. ಜೊತೆಗೆ ಭವಿಷ್ಯದಲ್ಲಿ ಟಾಪ್ ಗನ್ ಫೈಟರ್ ಪೈಲಟ್ ಆಗುವ ಆಸೆಯನ್ನು ಮ್ಯಾಡಿಸನ್ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *