Breaking News

ಅಲೆಗ್ಟಾಂಡರ್ ಮೆಚ್ಚಿದ ಪುರುಷೋತ್ತಮ _ ನೀತಿ ಕಥೆಗಳು 2 - Kannada Moral Stories 2

ಅಲೆಗ್ಟಾಂಡರ್ ಮೆಚ್ಚಿದ ಪುರುಷೋತ್ತಮ | ನೀತಿ ಕಥೆಗಳು 2

ಅಲೆಗ್ಟಾಂಡರ್ ಮೆಚ್ಚಿದ ಪುರುಷೋತ್ತಮ | ನೀತಿ ಕಥೆಗಳು 2 [Kannada Moral Stories 2]: ರಾಜ್ಯಾಕಾಂಕ್ಷಿಯಾದ ಗ್ರೀಕ್‌ನ ಮೆಸಿಡೋನಿಯಾದ ರಾಜ ಆಲೆಸ್ಟಾಂಡರನು ನಮ್ಮ ದೇಶದ ಮೇಲೆ ದಂಡಯಾತ್ರೆ ನಡೆಸಿದ. ತಕ್ಷಶಿಲಾ ರಾಜನಾಗಿದ್ದ ಅಂಬಿಯು ಅವನಿಗೆ ಆದರದ ಸ್ವಾಗತವನ್ನು ಕೋರದೇ ಇದ್ದಿದ್ದರೆ, ಅಲೆಗ್ಟಾಂಡರನು ಭಾರತಕ್ಕೆ ಪ್ರವೇಶಿಸುವುದು ಕಷ್ಟವಾಗುತಿತ್ತೇನೋ.

ಅಂಬಿಯ ಈ ಕಾರ್ಯಾಚರಣೆಗೆ ಕಾರಣ ಅತಿಥಿಗಳ ಮೇಲಿನ ಆದರ ಮನೋಭಾವವೇನೂ ಆಗಿರಲಿಲ್ಲ. ಜೀಲಂ ನದಿಯ ತೀರದಲ್ಲಿ ಸಿರಿಸಂಪತ್ತಿನಿಂದ ಕೂಡಿ, ಶಾಂತಿಭದ್ರತೆಗಳೊಡನೆ ರಾಜ್ಯ ವಾಳಿಕೊಂಡಿದ್ದ ತನ್ನ ನೆರೆ ರಾಜ್ಯದ ಪುರುಷೋತ್ತಮನನ್ನು ಸೋಲಿಸಬೇಕೆಂಬ ಅವನ ದುರಾಸೆಯೇ ಕಾರಣವಾಗಿತ್ತು.

ಅನ್ಯ ದೇಶದ ಚಕ್ರವರ್ತಿಯ ಕಾಲು ಹಿಡಿದುಕೊಂಡು ತಾನು ದಾಸನಂತಾದುದಲ್ಲದೆ, ಅಂಬಿಯು ಅಕ್ಕ ಪಕ್ಕದ ರಾಜರುಗಳನ್ನೂ ಸಹ, ತನ್ನ ಸಭೆಗೆ ಕರೆಸಿಕೊಂಡು, ಅಲೆಗ್ಟಾಂಡರನ ಸಾಮಂತ’ರಾಜರಾಗಿರುವಂತೆ ಮಾಡಲು ಯತ್ನಿಸಿದನು.

ಸಣ್ಣಪುಟ್ಟ ರಾಜರುಗಳು ಅದಕ್ಕೆ ಒಪ್ಪಿ ತಲೆಯಾಡಿಸಿದರು. ಆದರೆ ಧೈರ್ಯಶಾಲಿಯೂ, ಆತ್ಮಾಭಿಮಾನಿಯೂ ಆದ ಪುರುಷೋತ್ತಮನು ಮಾತ್ರ ಅದಕ್ಕೆ ಒಪ್ಪಲಿಲ್ಲ.

ಆ ಕಾಲದಲ್ಲಿ ನಮ್ಮ ರಾಜರುಗಳು ಯುದ್ಧದಲ್ಲಿ ಗಜಬಲವನ್ನು ಅಂದರೆ ಆನೆಗಳನ್ನು ಉಪಯೋಗಿಸುತ್ತಿದ್ದರು. ಶಿಕ್ಷಣ ಹೊಂದಿದ ಬೃಹದಾಕಾರದ ಆ ಪ್ರಾಣಿಗಳನ್ನು ಹೇಗೆ ಎದುರಿಸಬೇಕೆಂದು ಗ್ರೀಕ್ ಸೈನಿಕರಿಗೆ ಗೊತ್ತಿರಲಿಲ್ಲ. ಆದರೆ ಅಂಬಿಯು ಅವರಿಗೆ ಆನೆಗಳನ್ನು ಎದುರಿಸುವ ರೀತಿಗಳನ್ನೂ, ತಂತ್ರಗಳನ್ನೂ ಹೇಳಿಕೊಟ್ಟು ಸಹಾಯ ಮಾಡಿದನು.

ಅಲೆಗ್ವಾಂಡರನು ಜೀಲಂ ನದಿಯ ಕಡೆಗೆ ಸೇನೆಗಳನ್ನು ನಡೆಸಿ ನದೀ ತೀರದಲ್ಲಿ ಸೇರಿದನು. ನದಿಯನ್ನು ದಾಟುವುದು ಅಷ್ಟು ಸುಲಭವಾಗಿ ಕಾಣಲಿಲ್ಲ. ಸೈನಿಕರು ದೋಣಿಗಳಲ್ಲಿ ಹೋಗುವಾಗ ಪುರುಷೋತ್ತಮನ ಸೈನಿಕರು ಎದುರಿಸಬಹುದಾಗಿತ್ತು.

ಅಲೆಗ್ವಾಂಡರನು ಕೆಲವು ದಿನ ಅಲ್ಲಿಯೇ ಬಿಡಾರ ಹೂಡಿ ಯೋಚಿಸತೊಡಗಿದನು. ಅಷ್ಟರಲ್ಲಿ ಅಂಬಿಯು ಅಷ್ಟಾಗಿ ಆಳವಿಲ್ಲದ ನದಿಯ ಪ್ರಾಂತ್ಯವನ್ನು ತೋರಿಸಿದನು.

ಕೂಡಲೇ ಅಲೆಕ್ಚಾಂಡರನು ಒಂದು ಉಪಾಯವನ್ನು ಯೋಚಿಸಿದನು. ಕೆಲವು ಸೈನಿಕರನ್ನು ದೋಣಿಯ ಮೂಲಕ ನದಿಯನ್ನು ದಾಟಲು ಆಜ್ಞಾಪಿಸಿದನು.

ದೋಣಿಯಲ್ಲಿ ಬರುತ್ತಿರುವ ಸೈನಿಕರನ್ನು ಎದುರಿಸುವುದನ್ನೇ ಗುರಿಯಾಗಿಟ್ಟುಕೊಂಡು ಪುರುಷೋತ್ತಮನು ಕಾರ್ಯಮಗ್ನನಾಗಿದ್ದಾಗ ಅಲೆಕ್ಚಾಂಡರನ ಉಳಿದ ಸೈನಿಕರು ಮತ್ತೊಂದು ಕಡೆ ಆಳವಿಲ್ಲದ ನದಿಯನ್ನು ದಾಟಿ ಆ ತೀರವನ್ನು ಸೇರಿದರು.

ನಿರೀಕ್ಷಿಸದಿದ್ದ ಈ ಪರಿಣಾಮಕ್ಕೆ ದಿಗ್ಧಾಂತಿಗೊಂಡ ಪುರುಷೋತ್ತಮನು, ಮರುಕ್ಷಣವೇ ಮನಸ್ಸನ್ನು ಸ್ಥಿಮಿತಕ್ಕೆ ತಂದುಕೊಂಡು ಶತ್ರುಸೇನೆಯನ್ನು ಧೈರ್ಯದಿಂದ ಎದುರಿಸಿದನು. ಆ ದಿನವೆಲ್ಲಾ ತನಗಿಂತಲೂ ಎಷ್ಟೋ ಬಲವಾದ ಶತ್ರುಸೇನೆಯೊಡನೆ ಸಾಹಸದಿಂದ ಹೋರಾಡಿದನು. ಇಪ್ಪತ್ತು ಸಹಸ್ರ ಸೈನಿಕರು ಹತರಾದರು.

ಸೂರ್ಯಸ್ತ ಸಮಯಕ್ಕೆ ಪುರುಷೋತ್ತಮನು ಕುದುರೆಯ ಮೇಲೆ ಒಂಟಿಯಾಗಿಬಿಟ್ಟನು. ಆದರೂ ತನ್ನನ್ನು ಬಂಧಿಸಲು ಬರುವ ಶತ್ರುಸೈನಿಕರನ್ನು ಕಡಿದೊಗೆಯಲು ಸಿದ್ದನಾದನು. ಅವನ ಅನುಪಮ ಧೈರ್ಯ, ಸಾಹಸಗಳನ್ನು ಪ್ರತ್ಯಕ್ಷವಾಗಿ ನೋಡಿದ ಅಲೆಗ್ವಾಂಡರನು ಮೂಕವಿಸ್ಮಿತನಾದನು. ಶರಣಾಗುವಂತೆ ಅಂಬಿಯ ಮೂಲಕ ಸಂದೇಶವನ್ನು ಕಳುಹಿಸಿದನು.

ಭಯದಿಂದಲೇ ತನ್ನನ್ನು ಸಮೀಪಿಸಿದ ಅಂಬಿಯನ್ನು ನೋಡಿ ದೊಡನೆಯೇ, “ದೇಶದ್ರೋಹಿ! ನಿನ್ನ ಮುಖವನ್ನು ನನಗೆ ತೋರಿಸಬೇಡ. ಓಡಿ ಹೋಗು ಹೇಡಿ!” ಎಂದು ಪುರುಷೋತ್ತಮನು ಗರ್ಜಿಸಿದನು.

ಮತ್ತೆ ಸ್ವಲ್ಪ ಹೊತ್ತಿನಲ್ಲಿ ಪುರುಷೋತ್ತಮನು ಜರ್ಜರಿತನಾದನು. ಹಣೆಯಿಂದ ಹಿಡಿದು ಶರೀರಾದ್ಯಂತವಾಗಿ ರಕ್ತ ಹರಿಯುವ ಗಾಯಗಳಾದುವು. ಆದರೂ ಅವನು ತನ್ನ ನೋವನ್ನು, ವ್ಯಥೆಯನ್ನು ಕಿಂಚಿತ್ತೂ ತೋರ್ಪಡಿಸಿಕೊಳ್ಳಲಿಲ್ಲ.

ಅಲೆಕ್ಟ್ರಾಂಡರ್‌ನ ಸೇನಾಪತಿಗಳು ಅವನನ್ನು ಸುತ್ತುಗಟ್ಟಿ ಹಿಡಿದು – ತಂದು ನಿಲ್ಲಿಸಿದರು. ಕಿಂಚಿತ್ತೂ ಕ್ಷಮಾಗುಣವಿಲ್ಲದ ತಮ್ಮ ರಾಜನು ಪುರುಷೋತ್ತಮನ ಶಿರಚ್ಛೇದನ ಮಾಡುತ್ತಾನೆಂದೇ ಗ್ರೀಕ್ ಸೈನಿಕರು ತಿಳಿದುಕೊಂಡಿದ್ದರು.

ಏಕೆಂದರೆ ಶತ್ರುಗಳ ವಿಷಯದಲ್ಲಿ ಸ್ವಲ್ಪವೂ ಉಪೇಕ್ಷೆ ತೋರದ ಕಠಿಣಸ್ವಭಾವ ಅವನದು. ಅವನು ರಾಜ್ಯಾಕಾಂಕ್ಷೆಯುಳ್ಳವನಾಗಿ ಮಾತ್ರ ಇರಲಿಲ್ಲ. ಮಹಾ ಕೋಪಿಯೂ ಆಗಿದ್ದನು. ಒಮ್ಮೆ ಅವನ ಮಿತ್ರನಿಗೇ ಆರೋಗ್ಯ ಕೆಟ್ಟಿತು. ಮದ್ಯಪಾನ, ಮಾಂಸಾಹಾರಗಳನ್ನು ಮುಟ್ಟಕೂಡದೆಂದು ವೈದ್ಯರು ಸಲಹೆ ಮಾಡಿದ್ದರು.

ವೈದ್ಯರ ಸಲಹೆಯನ್ನು ಕೇಳದುದರಿಂದ ಅವನು ಸಾವನ್ನಪ್ಪ ಬೇಕಾಯಿತು. ಅವನ ಸಾವನ್ನು ಸಹಿಸಲಾಗದ ಅಲೆಗ್ದಾಂಡರನು ಕೋಪದಿಂದ ವೈದ್ಯರೆಲ್ಲರಿಗೂ ಮರಣಶಿಕ್ಷೆ ವಿಧಿಸಿದನು. ಅಷ್ಟಕ್ಕೇ ಸುಮ್ಮನಾಗದೆ ಸತ್ತ ತನ್ನ ಮಿತ್ರನ ಆತ್ಮಕ್ಕೆ ಪ್ರೇತಾತ್ಮರೂಪದಲ್ಲಿ ಜೊತೆಯಾಗಿರುತ್ತಾರೆಂದು ಭಾವಿಸಿ ಆ ಊರಿನ ಜನರೆಲ್ಲರನ್ನೂ ಕೊಲ್ಲಿಸಿದನು. ಅಲೆಗ್ಟಾಂಡರನ ನಿರ್ದಾಕ್ಷಿಣ್ಯ ಹಾಗೂ ಕ್ರೂರ ಸ್ವಭಾವಗಳನ್ನು ಸಾರುವ ಘಟನೆ ಇದಾಗಿತ್ತು.

ಅಲೆಕ್ಚಾಂಡರನು ತನ್ನ ಪರ್ಷಿಯನ್ ದಂಡಯಾತ್ರೆಯಲ್ಲಿ ಅನೇಕ ರಾಜರುಗಳನ್ನು ಸೋಲಿಸಿದ್ದನು. ಆದರೂ, ಈ ಸ್ಥಿತಿಯಲ್ಲೂ ತನ್ನೊಡನೆ ದ್ವಂದ್ವ ಯುದ್ಧಕ್ಕೆ ಸಮಬಲನೆಂದು ಕಾಣಿಸುತ್ತಿರುವ ಪುರುಷೋತ್ತಮನಂತಹ ವೀರನನ್ನು ಅವನು ಇದುವರೆಗೂ ನೋಡಿರಲಿಲ್ಲ. ಬಂಧಿಯಾಗಿ ನಿಂತಿರುವ ಅವನನ್ನು ಮೆಚ್ಚುಗೆಯ ದೃಷ್ಟಿಯಲ್ಲಿ ನೋಡಿದನು. ಅಂಬಿಯ ಸಂಚುಗಳು, ಕುತಂತ್ರಗಳು, ದ್ರೋಹಚಿಂತನೆಗಳು ಇಲ್ಲವಾಗಿದ್ದಲ್ಲಿ ಅವನು ಸೋಲುತ್ತಿರಲಿಲ್ಲವೆಂದು ಅಲೆಗ್ವಾಂಡರಿಗೆ ತಿಳಿಯಿತು.

“ಪುರುಷೋತ್ತಮಾ! ಯುದ್ಧ ಮುಗಿದಿದೆ. ಈಗ ನಿಸ್ಸಹಾಯಕನಾಗಿ ನಿಂತಿದ್ದೀಯೆ. ನಿನ್ನನ್ನು ಹೇಗೇ ನೋಡಬೇಕೆನ್ನುವೆ?” ಎಂದು ಕೇಳಿದನು.

ಪುರುಷೋತ್ತಮನು ಗಾಂಭೀರ್ಯದಿಂದ, “ಅಲೆಕ್ಟ್ರಾಂಡರ್, ನೀನು ನೀತಿವಂತ ಚಕ್ರವರ್ತಿಯೇ ಆಗಿದ್ದ ಪಕ್ಷದಲ್ಲಿ, ಸರಿಸಮನಾದ ಮತ್ತೊಬ್ಬ ಚಕ್ರವರ್ತಿಯನ್ನು ಹೇಗೆ ಗೌರವಿಸಬೇಕೆಂಬುದು ನಿನಗೆ ತಿಳಿದಿದೆ!” ಎಂದನು.

ಅಲೆಕ್ಚಾಂಡರ್, “ಹೌದು, ಚಕ್ರವರ್ತಿಗೆ ತಕ್ಕ ಗೌರವದಿಂದಲೇ ನಿನ್ನನ್ನು ನೋಡಿಕೊಳ್ಳಬೇಕು. ಮತ್ತೇನಾದರೂ ಕೋರಿಕೆಯಿದೆಯಾ?” ಎಂದು ಕೇಳಿದನು.

ಪುರುಷೋತ್ತಮನು, “ಇಲ್ಲ, ನೀನು ನನ್ನನ್ನು ಚಕ್ರವರ್ತಿಯಾಗಿ ಗೌರವಿಸಿದರೆ ನನಗೆ ಅವಶ್ಯಕವಾದ ಸಮಸ್ತವೂ ಅದರಲ್ಲೇ ಅಡಕವಾಗಿದೆಯಲ್ಲವೇ! ಎಂದನು.

ಆ ಮಾತಿಗೆ ಅಲೆಗ್ಟಾಂಡರನು ಸಂಪ್ರೀತನಾದನು. ಪುರುಷೋತ್ತಮನ ರಾಜ್ಯವನ್ನು ವಶಪಡಿಸಿಕೊಳ್ಳದೆ ಅವನಿಗೇ ಬಿಟ್ಟುಕೊಟ್ಟನು.

ಪುರುಷೋತ್ತಮನು ತೋರಿದ ಅನನ್ಯ ಧೈರ್ಯ, ಆತ್ಮಸ್ಥೆರ್ಯ, ಅಸಾಧಾರಣ ಆತ್ಮ ಗೌರವಗಳು ಅಲೆಗ್ವಾಂಡರನನ್ನು ಆಶ್ಚರ್ಯದಿಂದ ಪರಿತಪಿಸುವಂತೆ ಮಾಡಿತು.

ನೀತಿ: ಮನುಷ್ಯನಲ್ಲಿರುವ ನಿರ್ಭೀತಿ, ಔನ್ನತ್ಯ ಗುಣಗಳು ಶತ್ರುಗಳ ಮೇಲೂ ಪ್ರಭಾವ ಬೀರಬಲ್ಲವಾಗಿವೆ.

Leave a Reply

Your email address will not be published. Required fields are marked *