Breaking News

ಅಪಾಯವನ್ನು ಎದುರಿಸಿದ ಸ್ವಾಮಿ ವಿವೇಕಾನಂದರು | ಕನ್ನಡ ನೀತಿ ಕಥೆಗಳು Kannada Moral Stories 2

ಅಪಾಯವನ್ನು ಎದುರಿಸಿದ ಸ್ವಾಮಿ ವಿವೇಕಾನಂದರು | ನೀತಿ ಕಥೆಗಳು 3

ಅಪಾಯವನ್ನು ಎದುರಿಸಿದ ಸ್ವಾಮಿ ವಿವೇಕಾನಂದರು | ನೀತಿ ಕಥೆಗಳು 3 [Kannada Moral Stories 3]

ಸ್ವಾಮಿ ವಿವೇಕಾನಂದರು ಒಂದು ದಿನ ವಾರಣಾಸಿಯ ಸಮೀಪದಲ್ಲಿ ನಿರ್ಜನವಾಗಿದ್ದ ಒಂದು ರಸ್ತೆಯಲ್ಲಿ ಒಂಟಿಯಾಗಿ ನಡೆದು ಹೋಗುತ್ತಿದ್ದರು. ಆಗ ಭಯಂಕರವಾದ ಕಪಿಗಳ ಗುಂಪೊಂದು ಅವರ ಬೆನ್ನು ಹತ್ತಿತು. ಅವರು ಅವುಗಳಿಂದ ದೂರವಾಗಿ ಓಡಲಾರಂಭಿಸಿದರು.

ಆದರೆ ಕೋತಿಗಳಷ್ಟು ವೇಗವಾಗಿ ಅವರಿಂದ ಹೇಗೆ ಓಡಲು ಸಾಧ್ಯ? ಅವರಿಗೂ, ಕೋತಿಗಳ ಗುಂಪಿಗೂ ಇದ್ದ ಅಂತರವು ಕಡಿಮೆಯಾಗುತ್ತಾ ಬಂದುದರಿಂದ ಅವರಲ್ಲಿ ಭಯ ಹುಟ್ಟಿತು.

ಆಗ ಇದ್ದಕ್ಕಿದ್ದಂತೆ, “ಓಡಬೇಡ ಕೋತಿಗಳನ್ನು ಎದುರಿಸು!” ಎಂಬ ದಾರಿಯ ಪಕ್ಕದಲ್ಲಿ ಕುಳಿತ ಒಬ್ಬ ಸಾಧುವಿನ ಮಾತು ಕೇಳಿಬಂದಿತು.

ವಿವೇಕಾನಂದರು ಓಡುವುದನ್ನು ನಿಲ್ಲಿಸಿ. ಅಲ್ಲಿಯೇ ನಿಂತು, ಕೋತಿಗಳ ಕಡೆಗೇ ಕೋಪದಿಂದ ತಿರುಗಿ ನೋಡಿದರು. ಬೆದರಿ ಹೋದ ಕೋತಿಗಳು ತಟಕ್ಕನೆ ನಿಂತುಬಿಟ್ಟವು. ಅವರು ನೋಡುತ್ತಿದ್ದಂತೆಯೇ ಅವು ಮೆಲ್ಲಮೆಲ್ಲಗೆ ಹಿಂಜರಿದು, ಎತ್ತಲೋ ಹೊರಟುಹೋದವು.

ಸಮಯದಲ್ಲಿ ತನಗೆ ಉತ್ತಮ ಸಲಹೆಯನ್ನು ನೀಡಿದ ಒಬ್ಬ ಸಾಧುವಿಗೆ ಕೃತಜ್ಞತೆಗಳನ್ನು ತಿಳಿಯಪಡಿಸಿದರು ವಿವೇಕಾನಂದರು ಆಗ ಹೀಗೆಂದುಕೊಂಡರು: “ಅದೊಂದು ನಿಜವಾಗಿಯೂ ಒಂದು ದೊಡ್ಡ ನೀತಿ ಪಾಠ, ಅಪಾಯವನ್ನು ಎದುರಿಸು. ಧೈರ್ಯವಾಗಿ ಎದುರಿಸು. ಸಮಸ್ಯೆಗಳಿಂದ ತಪ್ಪಿಸಿಕೊಂಡು ಓಡಿ ಹೋಗದಂತೆ ನಿಲ್ಲುವುದನ್ನು ಕಲಿತರೆ, ಕೋತಿಗಳಂತೆ ಸಮಸ್ಯೆಯೂ ನಿಂತುಹೋಗುತ್ತವೆ. ನಮಗೆ ಸಮಸ್ಯೆಗಳು ತೊಂದರೆ ಕೊಡುವುದನ್ನು ತಪ್ಪಿಸಿಕೊಂಡು ಮುಕ್ತಿಯನ್ನು ಹೊಂದಬೇಕಾದರೆ ಮೊದಲು ನಮ್ಮ ಸ್ವಭಾವವನ್ನು ಜಯಿಸಬೇಕು. ಬಾಧೆಗಳನ್ನೂ, ಅಜ್ಞಾನವನ್ನೂ, ಧೈರ್ಯವಾಗಿ ಎದುರಿಸಬೇಕು. ಏಕೆಂದರೆ ಹೇಡಿ ಜನರಿಂದ ಏನನ್ನೂ ಸಾಧಿಸಲಾಗದು!”

ವಿವೇಕಾನಂದರು ಒಮ್ಮೆ ಹಿಮಾಲಯದಲ್ಲಿ ಸಂಚರಿಸುತ್ತಿರುವಾಗ ಒಂದು ಕಾಡನ್ನು ಪ್ರವೇಶಿಸಿದರು. ತಿನ್ನಲು ಏನೂ ಇರಲಿಲ್ಲವಾದರೂ ಆ ದಿನವೆಲ್ಲಾ ಕಾಡಿನಲ್ಲಿ ಅಲೆದರು. ಸೂರ್ಯನು ಅಸ್ತಂಗತನಾದನು. ಅವರು ಒಂದು ಮರದ ಕೆಳಗೆ ಕುಳಿತುಕೊಂಡರು. ಕಾಡಿನಲ್ಲಿ ಕತ್ತಲೂ ಆವರಿಸಿಕೊಂಡಿತ್ತು. ಇದ್ದಕ್ಕಿದ್ದಂತೆ ಪಕ್ಕದಲ್ಲಿದ್ದ ಪೊದೆಯ ಬಳಿ ಒಂದು ದೊಡ್ಡ ಹುಲಿಯು ಅವರ ಕಣ್ಣಿಗೆ ಕಂಡು ಬಂದಿತು. ಅದು ಅವರ ಮೇಲೆ ನೆಗೆಯಲು ಮುಂದಕ್ಕೆ ಹೆಜ್ಜೆ ಇಟ್ಟಿತು.

ವಿವೇಕಾನಂದರು ಇದ್ದಂತೆಯೇ ಶಾಂತರಾಗಿ ಕುಳಿತಿದ್ದರು. “ಈ ರಾತ್ರಿಗೆ ನಾನು ಈ ಪ್ರಾಣಿಗೆ ಒಳ್ಳೆಯ ಆಹಾರವಾಗುತ್ತೇನೆ!” ಎಂದುಕೊಂಡು ತಮ್ಮ ಅಂತಿಮ ಕ್ಷಣವನ್ನು ನಿರೀಕ್ಷಿಸತೊಡಗಿದರು.

ಆ ಹುಲಿಯು ಅವರ ಕಡೆಗೆ ಸ್ವಲ್ಪ ಹೊತ್ತು ಹಾಗೆಯೇ ನೋಡುತ್ತಿದ್ದು ಮೆಲ್ಲಗೆ ಅಲ್ಲಿಂದ ಹೊರಟು ಹೋಯಿತು. ಆಗಲೂ ವಿವೇಕಾನಂದರು ಆ ಸ್ಥಳ ಬಿಟ್ಟು ಕದಲಲಿಲ್ಲ. ‘ಹಸಿವೆ ಹೆಚ್ಚಾದರೆ ಆ ಹುಲಿಯು ಬಹುಶಃ ತನ್ನ ಕುಟುಂಬದೊಡನೆ ಬರುತ್ತದೆ?’ ಎಂದು ಕೊಂಡು ಆ ರಾತ್ರಿಯನ್ನೆಲ್ಲಾ ಅಲ್ಲಿಯೇ ಕಳೆದರು. ಹುಲಿಯು ಮತ್ತೆ ಬರಲಿಲ್ಲ.

ನೀತಿ: ನಿಮ್ಮಲ್ಲಿ ಲವಲೇಶವೂ ಭಯವಿಲ್ಲವೆಂದಾಗ ಆ ಭಯದ ಕಾರಣವೇ ಅದೃಶ್ಯವಾಗುತ್ತದೆ.

Leave a Reply

Your email address will not be published. Required fields are marked *